ಹಾಸನ: ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆ ರವೀಂದ್ರ ನಗರ ಹಾಸನ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಪರಮಪೂಜ್ಯ ಶ್ರೀಶ್ರೀ ಶಂಭುನಾಥ ಮಹಾಸ್ವಾಮೀಜಿಯವರು ವಹಿಸಿಕೊಂಡಿದ್ದರು.
ಪಥಸಂಚಲನದ ಮೂಲಕ ಮಕ್ಕಳು ಪರಮ ಪೂಜ್ಯರನ್ನು ಆಹ್ವಾನಿಸಿದರು. ಸ್ವಾಮೀಜಿಯವರು ಸ್ವತಂತ್ರದ ಮಹತ್ವ ಮತ್ತು ತ್ಯಾಗ ಬಲಿದಾನ ಮಾಡಿದ ವೀರ ಯೋಧರ ಬಗ್ಗೆ ಹಾಗೂ ಮಕ್ಕಳಿಗೆ ತಮ್ಮ ತಂದೆ ತಾಯಿಯನ್ನು ನೋಡಿಕೊಳ್ಳುವುದು ಪ್ರತಿಯೊಬ್ಬ ಮಕ್ಕಳ ಜವಾಬ್ದಾರಿ ಎಂದು ತಿಳಿಸಿ, ಸಂಸಾರದ ಜವಾಬ್ದಾರಿ ಹೊರುವುದು ಕೂಡ ದೇಶಭಕ್ತಿಯೇ ಎಂದು ಹೇಳಿ ಮಕ್ಕಳಿಗೆ ಆಶೀರ್ವಚನವನ್ನು ನೀಡಿದರು.
ಕಾರ್ಯಕ್ರಮದಲ್ಲಿ ವಿಜೇತರಾದ ಕಬ್ ಮತ್ತು ಬುಲ್ ಬುಲ್ ಮಕ್ಕಳಿಗೆ ಬಹುಮಾನ ಮತ್ತು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕರಾದ ಚಂದ್ರಶೇಖರ್, ಶಾಲೆಯ ಮುಖ್ಯೋಪಾಧ್ಯಾಯರಾದ ದರ್ಶನ್, ಕಾಲೇಜು ಪ್ರಾಂಶುಪಾಲರಾದ ಚಂದ್ರಶೇಖರ್. ಜಿ ಮತ್ತು ಎಲ್ಲಾ ಶಿಕ್ಷಕರು ಹಾಗೂ ಮಕ್ಕಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ: ಶ್ರೀಮತಿ ಹೆಚ್.ಎಸ್. ಪ್ರತಿಮಾ ಹಾಸನ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ