ಮಂಗಳೂರು: ನವಭಾರತ ರಾತ್ರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನೋತ್ಸವ

Upayuktha
0

ಮಂಗಳೂರು: 81 ವರ್ಷಗಳ ಇತಿಹಾಸವುಳ್ಳ ಮಂಗಳೂರಿನ ನವಭಾರತ ರಾತ್ರಿ ಪ್ರೌಢಶಾಲೆಯಲ್ಲಿ ಡಾ. ಉಮಾಶಂಕರ್ ಮೊಹಂತಿಯವರು ಧ್ವಜಾರೋಹಣ ಮಾಡಿದರು.


ಹಿಂದಿನ ಸ್ವಾತಂತ್ರ್ಯ ವೀರರ ಸ್ಮರಣೆಯಿಂದ ನಮ್ಮಲ್ಲಿ ರಾಷ್ಟ್ರ ಪ್ರೇಮ ಉದ್ದೀಪನವಾಗುತ್ತದೆ. ಆಗ ನಮ್ಮ ರಾಷ್ಟ್ರ ಉಳಿದ ಸಶಕ್ತ ರಾಷ್ಟ್ರಗಳ ಸಾಲಿನಲ್ಲಿ ಎದೆಯೆತ್ತಿ ನಿಲ್ಲಬಲ್ಲದು ಎಂಬ ಸ್ವಾತಂತ್ರ್ಯ ಸಂದೇಶವನ್ನು ನೀಡಿದರು.


ನವಭಾರತ ಎಜ್ಯುಕೇಶನ್ ಸೊಸೈಟಿಯ ಖಚಾಂಚಿ ಮಧುಸೂದನ ಅಚಾರ್ಯರವರು ಮಾತನಾಡಿ, ಎಷ್ಟೆಷ್ಟೋ ಕ್ರಾಂತಿಕಾರಿಗಳ ಬಲಿದಾನದಿಂದ ದೊರಕಿದ ಸ್ವಾತಂತ್ರ್ಯವನ್ನು ನಾವು ಅಷ್ಟೇ ಭಕ್ತಿ ಪೂರ್ವಕವಾಗಿ ಸ್ವೀಕರಿಸಿ ರಾಷ್ಟ್ರಪ್ರೇಮಿಗಳಾಗೋಣ. ರಾಷ್ಟ್ರದ್ರೋಹಿಗಳನ್ನು ದಮನಿಸುವುದರ ಮೂಲಕ ನಮ್ಮ ಭಾರತವನ್ನು ಉಳಿಸಿಕೊಂಡು ರಾಷ್ಟ್ರ ಭಕ್ತರಾಗೋಣ ಎಂದರು.


ಶಾಲಾ ಕಾರ್ಯದರ್ಶಿ ಎಂ. ರಾಮಚಂದ್ರರು ತಮ್ಮ ಅನುಭವವನ್ನು ವಿವರಿಸುತ್ತಾ, ದೇಶದೆಲ್ಲೆಡೆ ನಮ್ಮ ರಾಷ್ಟ್ರ ಭಕ್ತಿಯ ಸಂಕೇತವಾದ ತಿರಂಗ ಹಾರಲಿ ಎಂದರು.


ರವೀಶ್ ಆಚಾರ್ಯರು ಸ್ವಾಗತಿಸಿದರು. ಶ್ರೀಮತಿ ಗ್ರೀಷ್ಮ ರವರು ದೇಶಭಕ್ತಿ ಗೀತೆಗಳನ್ನು ಹಾಡಿದರು. ಮುಖ್ಯೋಪಾಧ್ಯಾಯರಾದ ವರ್ಕಾಡಿ ರವಿ ಅಲೆವೂರಾಯ ಅವರು ಕಾರ್ಯಕ್ರಮ ನಿರ್ವಹಿಸಿದರು. ಜಯಧರ್, ಬಾಲಕೃಷ್ಣ ಸುವರ್ಣ, ದಿನೇಶ ಕುಮಾರ್, ಜೊತೆ ಕಾರ್ಯದರ್ಶಿ ಆನಂದ ಉಪಸ್ಥಿತರಿದ್ದರು. ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top