ಪ್ರೈಮ್ ಉಡುಪಿ : ಐ.ಎ.ಎಸ್ / ಕೆ.ಎ.ಎಸ್ ಪರೀಕ್ಷಾ ತರಬೇತಿ ಸೆ. 3 ರಿಂದ ಆರಂಭ

Upayuktha
0

ಉಡುಪಿ: ಭಾರತ ಸರಕಾರದ ಕೇಂದ್ರೀಯ ಲೋಕಸೇವಾ ಆಯೋಗ (UPSC) ಆಯೋಜಿಸುವ ನಾಗರಿಕ ಸೇವಾ "ಸಿವಿಲ್ ಸರ್ವೀಸಸ್" ಐ.ಎ.ಎಸ್ ಪರೀಕ್ಷೆ ಹಾಗೂ ಕರ್ನಾಟಕ ಲೋಕಸೇವಾ ಆಯೋಗ (KPSC) ಆಯೋಜಿಸುವ ಕೆ.ಎ.ಎಸ್ ಪರೀಕ್ಷೆಗೆ ತಯಾರಿ ನಡೆಸುವ ಅಭ್ಯರ್ಥಿಗಳಿಗಾಗಿ 2023 - 2024 ನೇ ಸಾಲಿನ ನೂತನ ವೀಕೆಂಡ್ ಬ್ಯಾಚ್ ಉಡುಪಿ ಬ್ರಹ್ಮಗಿರಿಯ ಪ್ರೈಮ್ ಕೇಂದ್ರದಲ್ಲಿ ಇದೇ ಬರುವ ಸೆಪ್ಟಂಬರ್ 3 ರಿಂದ ಆರಂಭಗೊಳ್ಳಲಿದೆ.


ಈ ತರಬೇತಿ ಮುಖ್ಯವಾಗಿ ಐ.ಎ.ಎಸ್/ಕೆ.ಎ.ಎಸ್ ಪರೀಕ್ಷೆಯ ಪಠ್ಯಕ್ರಮಗಳಿಗಣುಗುಣವಾಗಿ ಪ್ರಿಲಿಮಿನರಿ ಪರೀಕ್ಷೆಯ ಪೇಪರ್ 1 ಮತ್ತು ಪೇಪರ್ 2 ಪತ್ರಿಕೆಗಳಿಗೆ ಸಂಬಂದಿಸಿದ 5 ರಿಂದ 10 ನೇ ತರಗತಿವರೆಗಿನ ಬೇಸಿಕ್ ವಿಷಯಗಳಿಗೆ ಸಂಬಂದಪಟ್ಟ ಸಮಾಜ, ವಿಜ್ನಾನ, ಗಣಿತ ಮತ್ತು ಭಾಷಾ ವಿಷಯಗಳ ಪರಿಪೂರ್ಣ ಮಾಹಿತಿ, ಪ್ರಚಲಿತ ವಿದ್ಯಮಾನ ವಿಷಯಗಳಲ್ಲಿ ಬರುವ ಅತೀ ಮುಖ್ಯ ವಿಷಯಗಳಾದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ, ಸಂವಿದಾನದ ಬೆಳವಣಿಗೆ, ಭಾರತದ ಆರ್ಥಿಕ ಅಭಿವ್ರದ್ದಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿನ ಆಗುಹೋಗುಗಳು, ಪ್ರತಿಷ್ಟಿತ ವ್ಯಕ್ತಿ, ಪ್ರಶಸ್ತಿಗಳು, ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸಮ್ಮೇಳನ ಮತ್ತು ಜನರಲ್ ಸ್ಟಡೀಸ್ ಪತ್ರಿಕೆಯ ಮುಖ್ಯ ವಿಷಯಗಳಾದ ಇತಿಹಾಸ, ಅರ್ಥಶಾಸ್ತ್ರ, ಸಂವಿಧಾನ, ಭೂಗೋಳ, ವಿಜ್ನಾನ ಮತ್ತು ತಂತ್ರಜ್ನಾನ, ಪರಿಸರ, ಮೆಂಟಲ್ ಎಬಿಲಿಟಿ ಮತ್ತು ಗಣಿತ, ಸಾಂಪ್ರದಾಯಿಕ ಜ್ನಾನ, ಇಂಗ್ಲಿಷ್ ಹಾಗೂ ಮೈನ್ಸ್ ಪರೀಕ್ಷೆಯ ಎಸ್ಸೆ, ಎಥಿಕ್ಸ್ ಹಾಗೂ ಜನರಲ್ ನಾಲೇಜ್ ವಿಷಯಗಳಿಗೆ ಸಂಬಂದಿಸಿದಂತೆ 350 ಗಂಟೆಗಳ ಈ ತರಬೇತಿ ಪ್ರತೀ ಶನಿವಾರ ಮಧ್ಯಾಹ್ನ 2.00-5.00 ರವರೆಗೆ ಹಾಗೂ ಪ್ರತೀ ಬಾನುವಾರ ಬೆಳಿಗ್ಗೆ 9.30-4.30 ಗಂಟೆಯವರೆಗೆ ನಡೆಯಲಿದ್ದು 2024 ರ ಮೇ ತಿಂಗಳಿನಲ್ಲಿ ಅಂತ್ಯಗೊಳ್ಳಲಿದೆ.


ವೀಕೆಂಡ್ ನಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು ವಾರದ ದಿನ (ಬೆ. 10.00 ರಿಂದ ಸಾ. 5.30) ಸೋಮವಾರದಿಂದ ಶುಕ್ರವಾರದವರೆಗೆ ತಮ್ಮ ಬಿಡುವಿನ ಸಮಯದಲ್ಲಿ ಪ್ರೈಮ್ ಲೈಬ್ರೇರಿಯ ಯಾವುದಾದರೊಂದು ದಿನಪತ್ರಿಕೆಯಲ್ಲಿ ಬರುವ ಪ್ರಚಲಿತ ವಿದ್ಯಮಾನ, ಪ್ರಮುಖ ಸಂಪಾದಕೀಯ ವಿಷಯಗಳ ಟಿಪ್ಪಣಿ, ಗುಂಪು ಚರ್ಚೆ ಹಾಗೂ ಐ.ಎ.ಎಸ್ / ಕೆ.ಎ.ಎಸ್ ಪರೀಕ್ಷೆಗೆ ಸಂಬಂದಿಸಿದ ವಿದೇಶಿ ಲೇಖಕರು ಬರೆದ ವಿವಿಧ ಪುಸ್ತಕಗಳ ಗ್ರಂಥಾಲಯ ವ್ಯವಸ್ಥೆಯ ಸದೂಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.    


ಸೆಪ್ಟಂಬರ್ 3 ರಿಂದ ಆರಂಭಗೊಳ್ಳಲಿರುವ ಐ.ಎ.ಎಸ್/ಕೆ.ಎ.ಎಸ್ ಪರೀಕ್ಷಾ ತರಬೇತಿಯ ವೀಕೆಂಡ್ ಬ್ಯಾಚ್ ಗೆ ಸೇರಬಯಸುವ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಪ್ರೈಮ್, ಗ್ರೇಸ್ ಮೇನರ್ ಬಿಲ್ದಿಂಗ್, ಲಯನ್ಸ್ ಭವನದ ಹತ್ತಿರ, ಬ್ರಹ್ಮಗಿರಿ, ಉಡುಪಿ PH : 0820-4293422 ಇಲ್ಲಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ನಿರ್ದೇಶಕರಾದ ಪ್ರೊ. ಗೋಪಾಲಕೃಷ್ಣ ಸಾಮಗ  ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top