ಕಾಸರಗೋಡು: ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ಸಮೀಪ ದ ಆದೂರು ಕಲ್ಲುರ್ಟಿ ಕಲ್ಕುಡ ದೈವ ಗಳ ವಾರ್ಷಿಕ ಕೋಲ ಆಗಸ್ಟ್ 17 ರಂದು ಜರಗಿತು.
ಈ ಬಾರಿ ಆಟಿ ತಿಂಗಳಲ್ಲಿ 15 ಹರಕೆ ಮೆಚ್ಚಿ ಕೋಲ ಗಳು ನಡೆದಿದ್ದು ಸೋಣ ಸಂಕ್ರಾಂದಿ ಯಂದು ನಡೆಯುವ ವಾರ್ಷಿಕ ಮೆಚ್ಚಿ ಯಲ್ಲಿ ಈ ವರ್ಷ 1003 ಕೋಳಿ (ಲಾಕಿ ) ಗಳ ಅಗೆಲು ಸೇವೆ ಯನ್ನು ಭಕ್ತ ರು ನೀಡಿದ್ದರು.
ಆದೂರು ಏಲ್ನಾಡ್ ಗುತ್ತಿನ ಬಿಪಿನ್ ದಾಸ್ ರೈ ಅವರ ನೇತೃತ್ವದಲ್ಲಿ ಜರಗಿದ ಕಾರ್ಯಕ್ರಮ ದಲ್ಲಿ ಸಾವಿರಾರು ಭಕ್ತ ರು ಪಾಲ್ಗೊಂಡಿದ್ದರು.
ಕೋಲ ಮುಗಿದ ಮೇಲೆ ಭಕ್ತ ರಿಗೆ ಅರಶಿಣ ಪುಡಿ ಪ್ರಸಾದ ಹಾಗೂ ಅಕ್ಕಿ ಪುಂಡಿ ಕೋಳಿ ಸಾರು ಪ್ರಸಾದ ವಿತರಣೆ ಮಾಡಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ