ಕೈಕೇಯಿಯ ದಾಸಿ- ಸಖಿಯಾದ ಮಂಥರೆಗೆ ಅಯೋಧ್ಯೆಯಲ್ಲಿನ ಅನಿರೀಕ್ಷಿತ ಸಂಭ್ರಮ ಕಂಡು ಅಚ್ಚರಿ ಆಯಿತು.ವಿಷಯ ತಿಳಿದು ಆಘಾತವೂ ಆಯಿತು.ತನ್ನ ಆಘಾತಕ್ಕೆ ನಿರಾಸೆಗೆ ಕಾರಣವಾದ ಸಂಗತಿಗಳನ್ನು-
. ಕೈಕೇಯಿಯ ಮಹತ್ವದ ಸ್ಥಾನ ತಪ್ಪಿದರೆ ತನ್ನ ಅಸ್ತಿತ್ವವೂ ಹೋಗುತ್ತದೆ
. ರಾಮನಿಗೆ ಪಟ್ಟವೆಂದರೆ ಕೌಸಲ್ಯೆಗೆ ರಾಜಮಾತೆಯ ಪಟ್ಟ!
. ಕೈಕೈಯಿಯ ಮೇಲಿನ ದಶರಥನ ಪ್ರೀತಿ ಕಡಿಮೆಯಾಗುತ್ತದೆ
. ಭರತನು ಮೂಲೆಗುಂಪಾಗಿ ತಾನೂ ಇತರ ದಾಸಿಯರೂ ಕೈಕೇಯಿಯೂ ಅನಾದರಕ್ಕೆ ಒಳಗಾಗಬೇಕಾಗುತ್ತದೆ
. ಭರತನು ರಾಮನ ದಾಸನಾಗಬೇಕಾಗುತ್ತದೆ
. ರಾಮನ ಬಳಿಕ ಮತ್ತೆ ಯಾವ ಕಾಲಕ್ಕೂ ಭರತನು ರಾಜನಾಗಲಾರನು.ಯಾಕೆಂದರೆ ರಾಮನು ಬಳಿಕ ರಾಮನ ಹಿರಿಮಗನೇ ಉತ್ತರಾಧಿಕಾರಿ
. ರಾಮನಿಗೆ ಪಟ್ಟವೆಂದರೆ ಭರತನು ವಿನಾಶ
. ತನ್ನ ಚೆಲುವಿನಿಂದ ದಶರಥನ ಮನಗೆದ್ದು ಕೌಸಲ್ಯೆಯನ್ನು ಪದೇಪದೇ ಅವಮಾನಿಸಿದ್ದುದಕ್ಕೆ ಪ್ರತಿಯಾಗಿ ಕೌಸಲ್ಯೆ ಸೇಡು ತೀರಿಸಿಕೊಳ್ಳುವ ಸಾಧ್ಯತೆ- ಸವತಿ ಮಾತ್ಸರ್ಯ....
ಈ ಎಲ್ಲಾ ಚಿಂತನೆಗಳ ಮೂಲಕ ದಾಸಿ ಮಂಥರೆ ಕೈಕೇಯಿಯ ರಾಮನ ಪರವಾಗಿರುವ ಮನವನ್ನು ತಿರುಗಿಸಲು ಯತ್ನಿಸಿದರೂ ಕೈಕೇಯಿ ಅಚಲಳಾಗಿದ್ದಳು.
ಆದರೂ...ಪದೇ ಪದೇ ಹೇಳಿದಾಗ ಕೈಕೇಯಿಯ ಮನ ಕದಡಿತು.ದಶರಥನ ಮಾತು ನಿಜವಾಯಿತು.ದಾಸಿ ಅದರಲ್ಲೂ ಕೆಟ್ಟ ಮನದ ಮಂಥರೆಯ ಮಾತಿಗೆ ಕೈಕೇಯಿ ಬಲಿಯಾದಳು.ಮಂಥರೆಯೇ ಉಪಾಯವನ್ನೂ ಸೂಚಿಸಿದಳು. ಶಂಬರಾಸುರನೊಡನೆ ನಡೆದ ಯುದ್ಧದ ಸಂದರ್ಭದಲ್ಲಿ ಕೈಕೇಯಿಯ ಸಮಯಪ್ರಜ್ಞೆ- ಜಾಣ್ಮೆಗಳನ್ನು ಮೆಚ್ಚಿ ದಶರಥ ಅವಳಿಗೆ ನೀಡಿದ ಎರಡು ವರಗಳನ್ನೇ ಆಯುಧಗಳನ್ನಾಗಿ ಮಾಡಲು ಹೇಳಿದಳು.
ಭರತನಿಗೆ ಪಟ್ಟ
ರಾಮನಿಗೆ ವನವಾಸ- ಈ ಎರಡು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೈಕೇಯಿ ಅಂತ:ಪುರದ ಕೋಪಗೃಹವನ್ನು ಸೇರಿದಳು.
ಯಾರನ್ನು ಎಲ್ಲಿ ಇಡಬೇಕೋ ಅಲ್ಲಿಟ್ಟರೇ ಚೆನ್ನ,ಹಿತ!
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ