ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರರಸ್ಕೃತ ಸಂಸ್ಥೆಯಾದ ವಿಶ್ವಭಾರತೀ ಫ್ರೆಂಡ್ಸ್ ಸರ್ಕಲ್ (ರಿ) ಕೋಡಿಕಲ್ ಆಲಗುಡ್ಡ ಇದರ ವತಿಯಿಂದ 77ನೇ ಸ್ವಾತಂತ್ರೋತ್ಸವದ ಆಚರಣೆಯು ಕೋಡಿಕಲ್‌ನಲ್ಲಿರುವ ಧ್ವಜ ಸಂಭದ ಬಳಿ ಅದ್ದೂರಿಯಾಗಿ ನೆರವೇರಿತು. ಮಾಜಿ ವೀರ ಯೋಧ ದಯಾನಂದ ನಾಯ್ಕ ಕೋಡಿಕಲ್ ಇವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆ ಮತ್ತು ದಾನಿಗಳ ಸಹಾಯದಿಂದ ಸುಮಾರು 1,30,000 ವೆಚ್ಚದ 8 ಮೇಜು ಹಾಗೂ 8 ಕುರ್ಚಿಯನ್ನು ಕೋಡಿಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಾಗೂ ಶ್ರೀ ಶ್ರೀನಿವಾಸ ಪಾಠಶಾಲ ಓರಿಯೆಂಟಲ್ ಪ್ರೌಢಶಾಲೆ ಮಂಗಳೂರು ಇವರಿಗೆ 4 ಕಂಪ್ಯೂಟರ್ ಟೇಬಲ್‌ಗಳನ್ನು ಗಣ್ಯರ ಸಮ್ಮುಖದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವಭಾರತೀ ಫ್ರೆಂಡ್ಸ್ ಸರ್ಕಲ್‌ನ ಅಧ್ಯಕ್ಷರಾದ ರವಿಪ್ರಸಾದ್ ಶೆಟ್ಟಿಗಾರ್ ಮಾತನಾಡಿ, ದಾನಿಗಳ ಸಹಕಾರ ದಿಂದ ಪರಿಸರ ಸ್ಥಳೀಯ ಶಾಲೆಗಳಿಗೆ ಬಡ ಕುಟುಂಬಗಳಿಗೆ ಬಡ ಕುಟುಂಬಗಳಿಗೆ ಸಹಕಾರ ನೀಡಲು ಸಾಧ್ಯವಾಗಿದೆ ಎಂದು ನುಡಿದರು.
ವೇದಿಕೆಯಲ್ಲಿ ಗೌರವಧ್ಯಕ್ಷರಾದ ಶೀನ ನಾಯ್ಕ ಹಾಗೂ ಮಾಜಿ ಅಧ್ಯಕ್ಷರುಗಳಾದ ದಿನೇಶ್ ಕೋಡಿಕಲ್, ಶಿವಪ್ರಸಾದ್ ಶೆಟ್ಟಿ, ರಾಜೇಶ್ ಸಾಲಿಯಾನ್, ಸಂತೋಷ್ ಕೋಡಿಕಲ್, ರಾಜೇಶ್ ಕುಡ್ಲ, ಹರೀಶ್ ಕೋಡಿಕಲ್ ಹಾಗೂ ಸಂಸ್ಥೆಯ ಸದಸ್ಯರು ಮತ್ತು ಪದಾಧಿಕಾರಿಗಳು ಹಾಗೂ ಗಣ್ಯರಾದ ಪುರುಷೋತ್ತಮ್ ಕುಲಾಲ್ ಕಲ್ಯಾವಿ ಹಾಗೂ ಮಹಾಬಲ ಚೌಟ ಮತ್ತು ಕೋಡಿಕಲ್ ಶಾಲೆಯ ಮುಖ್ಯೋಪಾಧ್ಯರಾದ ನಿತ್ಯಾನಂದ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ