ಉಡುಪಿ: ಆ.13ರಂದು ಕಚುಸಾಪ ಪುಸ್ತಕದಾನ, ಕವಿಗೋಷ್ಠಿ, ಸಾಂಸ್ಕೃತಿಕ ವೈಭವ

Upayuktha
0



ಕಾಸರಗೋಡು: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ರಿ.) ಕೇಂದ್ರ ಸಮಿತಿ ಹುಬ್ಬಳ್ಳಿ, ಜಿಲ್ಲಾ ಸಮಿತಿ ಉಡುಪಿ - ಮಂಗಳೂರು ಹಾಗೂ ಪರ್ಯಾಯ ಶ್ರೀ ಕೃಷ್ಣ ಮಠ ಉಡುಪಿ ಸಂಯುಕ್ತ ಆಶ್ರಯದಲ್ಲಿ  ಶ್ರೀ ಕೃಷ್ಣಮೂರ್ತಿ ಕುಲಕರ್ಣಿ ರಾಜ್ಯ ಸಂಚಾಲಕರು ಕ.ಚು ಸಾ ಪ ಹುಬ್ಬಳ್ಳಿ ಇವರ ನೇತೃತ್ವದಲ್ಲಿ ಪುಸ್ತಕ ದಾನ, ಕವಿಗೋಷ್ಠಿ, ವಿಚಾರ ಗೋಷ್ಠಿ, ಸಾಧಕರ ಸನ್ಮಾನ ಹಾಗೂ ಜಿಲ್ಲಾ ಸಮ್ಮೇಳನ ಸಂಭ್ರಮ ಕಾರ್ಯಕ್ರಮವು ಆ. 13ರಂದು ಬೆಳಿಗ್ಗೆ 9.30 ರಿಂದ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ  ನಡೆಯಲಿರುವುದು.

ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಮಕ್ಕಳ ಸಾಹಿತಿಗಳು, ಚಿಂತಕರು ಪ್ರೊ ಜಿ. ಯು ನಾಯಕ ಇವರ ಸರ್ವಾಧ್ಯಕ್ಷತೆಯಲ್ಲಿ ಹಿರಿಯ ಕವಿಗಳು ಗೋಪಾಲ ಭಟ್ಟರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಈ ಸುಂದರ ಸಮಾರಂಭದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ (ರಿ.) ಕಾಸರಗೋಡು ಸಂಸ್ಥೆಯ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮವು ಸಂಸ್ಥೆಯ ಸುಮಾರು 45 ಕ್ಕೂ ಅಧಿಕ ಅಪ್ರತಿಮ ಕಲಾ ಪ್ರತಿಭೆಗಳು ಭಾಗವಹಿಸಲಿದ್ದಾರೆ.

ಗುರುರಾಜ್ ಕಾಸರಗೋಡು, ಶ್ರೀ ಕೃಷ್ಣ ಅಡಿಗ, ಶ್ರೀ ಕೃಪಾ ಅಡಿಗ, ಸ್ಕಂದ ಉಡುಪ, ಸ್ವದಾಶ್ರೀ ಉಡುಪ, ಅಹನಾ ಎಸ್ ರಾವ್, ಅಶ್ವಿನಿ ಐತಾಳ್, ಸಾನ್ವಿ ಎಸ್ ಸುವರ್ಣ, ಮಧುರಾ ಜಿ ರಾವ್, ಶಾಂತಿ ಎಸ್ ಕಾಂಚನ್, ಹರ್ಷಿತಾ, ಸೃಜನ್, ತ್ರಿಷಾ ಎ ಎಸ್, ಭುವನಾ, ಶ್ರೀನಿಧಿ, ಕೌಸ್ತುಬ್ ಉಡುಪ, ಸಮೀಕ್ಷಾ, ಶ್ರೀಶಾ, ದೀಕ್ಷಾ, ಭರತ್ ಭಟ್, ಪ್ರಥಮ್ಯ ಯು ವೈ ನೆಲ್ಯಾಡಿ, ಅಕ್ಷತಾ ಅಡಿಗ, ಸುಮಾಶ್ರೀ ಧನ್ಯ, ಸೌಮ್ಯಶ್ರೀ ಉಡುಪ, ಪುಣ್ಯವತಿ ನಾವುಡ, ಸುನೇತ್ರ ಉಡುಪ, ಭೂಮಿಕಾ ಉಡುಪ, ವಿಶ್ರುತಾ ಹೇರ್ಲೆ, ನಿವೇದಿತಾ, ಎಂ ಎಸ್ ಶ್ರೀಲತಾ ಹೆಬ್ಬಾರ್, ಕಾರ್ತಿಕೇಯ ಉಡುಪ, ಗೋಪಾಲಕೃಷ್ಣ ಭಟ್,  ಡಾ. ಪ್ರತಿಮಾ ಜಯಪ್ರಕಾಶ್ ಆಚಾರ್ಯ,  ಅದಿತಿ ಮೆಹೆಂದಳೆ,  ಶ್ವೇತಾ ಯು ವೈ, ಪಾವನಾ ಐತಾಳ್, ಸುಮನಾ ಆಚಾರ್ಯ, ಶಿಲ್ಪಾ ಜೋಶಿ, ಗೀತಾ ಪ್ರಸಾದ್, ನಾಗರತ್ನ, ಸಂಧ್ಯಾ, ವೀಣಾ ಭಟ್, ಪೂರ್ಣಿಮಾ ಭಟ್, ಶುಭ ಕುಮಾರ್, ಭಾಗವಹಿಸುವರು.

ಈ ಸಂಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮವು ಸಂಸ್ಥೆಯ ಅಧ್ಯಕ್ಷೆಯಾದ ಡಾ. ವಾಣಿಶ್ರೀ ಕಾಸರಗೋಡು ಇವರ ನಿರೂಪಣೆ ಯೊಂದಿಗೆ ಮೂಡಿಬರಲಿರುವುದು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಕಲಾವಿದರಿಗೂ ಗಡಿನಾಡ ಸಂಸ್ಥೆಯ ವತಿಯಿಂದ ಗಣ್ಯರ ಸಮ್ಮುಖದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದು ಕ. ಚು. ಸಾ.ಪ ಕಾಸರಗೋಡು ಕೇರಳ ಘಟಕದ ಅಧ್ಯಕ್ಷರಾದ ಡಾ. ವಾಣಿಶ್ರೀ ಕಾಸರಗೋಡು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ವರದಿ - ಗುರುರಾಜ್ ಕಾಸರಗೋಡು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top