ಮಂಗಳೂರು: ಭಾವೈಕ್ಯತೆ ಭಾರತ ದೇಶದ ಪರಂಪರಾಗತ ಸಂಸ್ಕೃತಿ ಮತ್ತು ಜೀವಾಳವಾಗಿದ್ದು ಅವರವರ ಧರ್ಮಾಚರಣೆಯನ್ನು ಚಾಚೂ ತಪ್ಪದೆ ಮಾಡಿದರೆ ಬದುಕು ಸಾರ್ಥಕ್ಯವನ್ನು ಪಡೆಯುತ್ತದೆ, ಸಾಹಿತ್ಯಕ್ಕೆ ಜನರನ್ನು ಒಗ್ಗೂಡಿಸುವ ಅದ್ಭುತ ಶಕ್ತಿಯಿದ್ದು ಕವಿಗಳು, ಲೇಖಕರು, ಸಾಹಿತಿಗಳು ನಾಡನ್ನು ಕಟ್ಟಲು ಪರಸ್ಪರ ಒಂದಾಗಬೇಕಾದ ಅನಿವಾರ್ಯತೆಯಿದೆ ಎಂದು ಕರ್ನಾಟಕ ಭಾವೈಕ್ಯತಾ ಪರಿಷತ್ ಅಧ್ಯಕ್ಷ ಕೆ.ಎಂ.ಇಖ್ಬಾಲ್ ಬಾಳಿಲ ಹೇಳಿದರು.
ಕರ್ನಾಟಕ ಭಾವೈಕ್ಯತಾ ಪರಿಷತ್ ವತಿಯಿಂದ ಮಂಗಳೂರು ಜೆಪ್ಪು ಮರಿಯಾ ಸಭಾಂಗಣದಲ್ಲಿ ನಡೆದ ಭಾವೈಕ್ಯ ಸಮ್ಮಿಲನ ಮತ್ತು ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಭವ್ಯ ಭಾರತ ದೇಶವು ಸೌಹಾರ್ದತೆಯ ತಳಹದಿಯಲ್ಲಿ ಸಾಗಿ ಬಂದಿದ್ದು ಕರ್ನಾಟಕ ಹಿಂದಿನಿಂದಲೂ ಭಾವೈಕ್ಯತೆಗೆ ಹೆಸರುವಾಸಿಯಾಗಿದೆ. ಎಲ್ಲಾ ವರ್ಗದ ಜನರೂ ಪರಸ್ಪರ ಪ್ರೀತಿ, ವಿಶ್ವಾಸದೊಂದಿಗೆ ಸಹಬಾಳ್ವೆ ನಡೆಸುವ ಭವ್ಯ ಪರಂಪರೆಯ ಇತಿಹಾಸ ಭಾರತದ ವೈಶಿಷ್ಟ್ಯತೆಗಳಲ್ಲೊಂದಾಗಿದ್ದು ಮಹಾನ್ ತ್ಯಾಗಿವರ್ಯರುಗಳ ಪರಿಶ್ರಮದ ಫಲವಾಗಿ ಭಾರತ ಜಗತ್ತಿನ ಅತಿದೊಡ್ಡ ಜಾತ್ಯತೀತ, ಪ್ರಜಾಪ್ರಭುತ್ವ ದೇಶವಾಗಿ ಗುರುತಿಸಿಕೊಂಡಿದೆ. ತಪ್ಪು ಕಲ್ಪನೆ, ಊಹಾಪೋಹಗಳು ಮಾತ್ರ ಎಲ್ಲೆಡೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದು ಇವುಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲು ಕವಿಗಳು, ಲೇಖಕರು, ಸಾಹಿತಿಗಳು ಹಾಗೂ ಸಮಾಜಮುಖಿ ಚಿಂತಕರು ಮುಂದೆ ಬರಬೇಕು ಎಂದು ಅವರು ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿದ ಸಾಹಿತಿ, ಕರ್ನಾಟಕ ಭಾವೈಕ್ಯತಾ ಪರಿಷತ್ ಪ್ರಧಾನ ಕಾರ್ಯದರ್ಶಿ ಹೆಚ್. ಭೀಮರಾವ್ ವಾಷ್ಠರ್ ಅವರು "ಸಾಹಿತ್ಯಕ್ಕೆ ಮನಸ್ಸು ಮನಸ್ಸುಗಳ ಮಿಲನ ಮಾಡುವ ಸಾಮರ್ಥ್ಯವಿದ್ದು ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಸಾಹಿತ್ಯಾಭಿಮಾನಿಗಳು ಜಾತಿ, ಮತ ಬೇಧಭಾವವಿಲ್ಲದೆ ಮುಕ್ತ ಮನಸ್ಸಿನಿಂದ ಪಾಲ್ಗೊಳ್ಳುತ್ತಾರೆ. ಸಮಾಜದ ಅಂಕುಡೊಂಕು ಗಳನ್ನು ತಿದ್ದುವಲ್ಲಿ ಸಾಹಿತ್ಯ ಕ್ಷೇತ್ರ ಯಶಸ್ವಿಯನ್ನು ಕಂಡಿದೆ. ಭಾರತದ ಕವಿಗಳು, ಲೇಖಕರು ಭಾರತದ ಪ್ರಗತಿಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ನಾವೆಲ್ಲರೂ ಭಾರತೀಯರು ಎಂಬ ಧ್ಯೇಯ ದೊಂದಿಗೆ ಪ್ರತಿಯೊಬ್ಬರೂ ಬದುಕಿದರೆ ಸುಂದರ ಭಾರತ ನಿರ್ಮಾಣ ಸಾಧ್ಯ" ಎಂದರು.
ಸಂದೇಶ ಭಾಷಣ ಮಾಡಿದ ಕರ್ನಾಟಕ ಭಾವೈಕ್ಯತಾ ಪರಿಷತ್ ಸಂಚಾಲಕ ಕೆ.ಎ.ಅಬ್ದುಲ್ ಅಝೀಝ್ ಪುಣಚ "ಪುರಾತನ ಕಾಲದಿಂದಲೂ ಭಾರತದಲ್ಲಿ ಭಾವೈಕ್ಯತೆ ನೆಲೆನಿಂತಿರುವ ಕಾರಣ ಹಿಂದೂ ಕ್ರೈಸ್ತ ಮುಸ್ಲಿಮರೆಲ್ಲರೂ ವಿಶ್ವ ಭ್ರಾತೃತ್ವ ಭಾವನೆಗಳೊಂದಿಗೆ ಶಾಂತಿ, ಸೌಹಾರ್ದತೆಯ ಸಹಬಾಳ್ವೆ ನಡೆಸುತ್ತಿದ್ದಾರೆ. ಭಾರತವನ್ನು ಕಟ್ಟಿದ ಮಹಾನ್ ನಾಯಕರು ಸರ್ವ ಜನಬಾಂಧವರನ್ನು ಒಂದೇ ದೃಷ್ಟಿಕೋನದಿಂದ ನೋಡಿದ್ದರು. ದುರದೃಷ್ಟವಶಾತ್ ನಮ್ಮ ನಡುವೆ ಅನಗತ್ಯವಾಗಿ ಗೊಂದಲಗಳಾಗುತ್ತಿದ್ದು ಈ ನೀಚ ಸಂಸ್ಕೃತಿಗೆ ಇತಿಶ್ರೀ ಹಾಡಿ ಹೊಸ ಭಾರತ ನಿರ್ಮಾಣಕ್ಕೆ ಪಣ ತೊಡಬೇಕಾಗಿದೆ. ನಾಡಿನ ಕವಿಗಳು, ಸಾಹಿತಿಗಳು, ಲೇಖಕರುಗಳ ಭಾವನೆಗಳಿಂದ ಹೊರಬರುವ ಸಾಹಿತ್ಯ ಸೌರಭ ಸಮಾಜವನ್ನು ಭದ್ರವಾಗಿ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಬೇಧಭಾವಗಳನ್ನು ತೊರೆದು ಸಮಷ್ಟಿ ಸಮಭಾವದ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ನಮ್ಮ ಗುರಿಯಾಗಬೇಕು" ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ| ಮಾಕ್ಸಿಂ ಡಿಸೋಜ, ಮುಹಮ್ಮದ್ ಹಾಜಿ ಪರಪ್ಪು, ಇಖ್ಬಾಲ್ ಕೋಲ್ಪೆ, ಕೆ.ಎಸ್.ರಾಝಿಖ್ ವಿಟ್ಲ, ಲತೀಫ್ ಗುರುಪುರ, ಹನೀಫ್ ಹಾಜಿ ಪಾಜಪಳ್ಳ ಮೊದಲಾವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸುಳ್ಯದ ಖ್ಯಾತ ಜ್ಯೋತಿಷಿ, ಸಾಹಿತಿ ಹೆಚ್. ಭೀಮರಾವ್ ವಾಷ್ಠರ್ ಸಾಹಿತ್ಯ ರಚಿಸಿ ಹಾಡಿರುವ ಸೌಹಾರ್ದ ಸಂಗಮ ಆಡಿಯೋ ಸಿಡಿಯನ್ನು ಸಾಹಿತಿ ಡಾ| ಸುರೇಶ್ ನೆಗಳಗುಳಿ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ರಾಜ್ಯದ ವಿವಿಧೆಡೆ ಗಳಿಂದ ಆಗಮಿಸಿದ ಕವಿಗಳಾದ ಡಾ| ಸುರೇಶ್ ನೆಗಳಗುಳಿ, ಮಂಜುನಾಥ್ ಹುತಗಣ್ಣ ಇಳಕಲ್, ಡಿ.ಎ.ಅಬ್ಬಾಸ್ ಪಡಿಕ್ಕಲ್, ಪರಿಮಳ ಐವರ್ನಾಡು, ಸುಬ್ರಾಯ ಕಲ್ಪನೆ, ಮನ್ಸೂರ್ ಅಲಿ ಮೂಲ್ಕಿ, ಮಮತಾ ಅನಿಲಕಟ್ಟೆ, ನಂದಿತಾ ಕೆ.ಪುತ್ತೂರು, ವಿಮಲಾರುಣ ಪಡ್ಡಂಬೈಲ್, ಹಮೀದ್ ಹಸನ್ ಮಾಡೂರು, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಅನ್ನಪೂರ್ಣ ಎನ್, ಕುತ್ತಾಜೆ, ಮಲ್ಲಿಕಾ ಜೆ.ರೈ ಪುತ್ತೂರು, ಪೂರ್ಣಿಮಾ ಗಿರೀಶ್ ಗೌಡ ಕುತ್ತಿಮುಂಡ, ಉಮೇಶ್ ಶಿರಿಯ, ಶ್ರೀಮತಿ ರೇಖಾ ಸುದೇಶ್ ರಾವ್ ಮಂಗಳೂರು, ಅಪೂರ್ವ ಕಾರಂತ್ ಪುತ್ತೂರು, ಕೆ.ಶಶಿಕಲಾ ಭಾಸ್ಕರ್ ಬಾಕ್ರಬೈಲ್, ನಾರಾಯಣ ಕುಂಬ್ರ,ವಿಂಧ್ಯಾ ಎಸ್.ರೈ, ಸೌಮ್ಯ ಆರ್.ಶೆಟ್ಟಿ, ಶಶಿಧರ ಏಮಾಜೆ, ಶಂಶೀರ್ ಬುಡೋಳಿ, ಅನಾರ್ಕಲಿ ಸಲೀಂ, ರವಿ ಪಾಂಬಾರ್, ಮುಹಮ್ಮದ್ ಸಿಂಸಾರುಲ್ ಹಖ್ ಆರ್ಲಪದವು, ರಹನ ಎಂ.ಈಶ್ವರಮಂಗಲ, ಪೂರ್ಣಿಮಾ ತೋಟಪ್ಪಾಡಿ, ಸುಳ್ಯ, ಅಝೀಝ್ ಮಾಡಾವು, ಆಸಿಫ್ ಮಾಡಾವು, ಹರಿಣಾಕ್ಷಿ ಉಮೇಶ್ ನೇರಳಕಟ್ಟೆ, ಪೆರುಮಾಳ್ ಲಕ್ಷ್ಮಣ್ ಐವರ್ನಾಡು, ಸಮ್ಯಕ್ತ್ ಜೈನ್ ಕಡಬ, ನವ್ಯಶ್ರೀ ಸ್ವರ್ಗ, ತಾಜುದ್ದೀನ್ ಅಮ್ಮುಂಜೆ, ಆಯಿಷಾ ಪೆರ್ನೆ, ಮುಹಮ್ಮದ್ ಮುಸ್ತಫಾ ಕಟ್ಟತ್ತಾರು, ಸುಜಯ ಎಸ್.ಸಜಂಗದ್ದೆ, ಪುಷ್ಪಾವತಿ ಆರ್.ಡಿ.ಎಡಮಂಗಲ, ಸುಭಾಷಿಣಿ ಚಂದ್ರಪ್ಪ ಉಪ್ಪಳ, ಎಂ.ಎ.ಮುಸ್ತಫಾ ಬೆಳ್ಳಾರೆ, ಬಾಸ್ಕರ್ ವರ್ಕಾಡಿ, ಎನ್.ಎಂ.ಹನೀಫ್ ನಂದರಬೆಟ್ಟು, ಮಂಜುಳಾ ಎಸ್.ಮುಂಡಾಜೆ, ಝುನೈಫ್ ಕೋಲ್ಪೆ, ತೇಜೇಶ್ವರ್ ಕುಂದಲ್ಪಾಡಿ, ಸುಳ್ಯ, ಅಬ್ದುಸ್ಸಮದ್ ಬಾವಾ ಪುತ್ತೂರು, ಡಾ| ವಾಣಿಶ್ರೀ ಕಾಸರಗೋಡು, ಗುರುರಾಜ್ ಕಾಸರಗೋಡು, ಚಂದ್ರಾವತಿ ರೈ ಪಾಲ್ತಾಡು, ಮಾಲಾ ಚೆಲುವನಹಳ್ಳಿ,ಪ್ರಜ್ವಲ್ ಕೌಡಳ್ಳಿ, ಗೋಪಾಲಕೃಷ್ಣ ಶಾಸ್ತ್ರಿ, ಸೌಮ್ಯ ಗೋಪಾಲ್, ತನ್ಸೀರಾ ಆತೂರು, ಅಶ್ವಿಜ ಶ್ರೀಧರ್, ರೇಮಂಡ್ ತಕ್ಕೋಡು, ರಶ್ಮಿತಾ ಸುರೇಶ್ ಬಂಟ್ವಾಳ, ಶಿವಗುತ್ತು, ಎಂ.ಎ. ಮುಹಮ್ಮದ್ ಕುಂಞಿ ಮಾಸ್ಟರ್ ಅಡ್ಡೂರು ಕವನ ವಾಚನ ಮಾಡಿದರು. ಕವನ ವಾಚಿಸಿದ ಕವಿಗಳಿಗೆ "ಭಾವೈಕ್ಯತಾ ಕಾವ್ಯಸಿರಿ ಪ್ರಶಸ್ತಿ" ನೀಡಿ ಗೌರವಿಸಲಾಯಿತು.
ಎ.ಬಿ.ಮೊಹಿದೀನ್ ಕಳಂಜ, ಡಾ| ಸಿದ್ದೀಖ್, ಇಮ್ತಿಯಾಝ್ ಇಡ್ಯ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಭಾವೈಕ್ಯತಾ ಪರಿಷತ್ ಉಪಾಧ್ಯಕ್ಷ ಎ.ಅಬೂಬಕರ್ ಅನಿಲಕಟ್ಟೆ, ವಿಟ್ಲ ಸ್ವಾಗತಿಸಿದರು. ರಶೀದ್ ಬೆಳ್ಳಾರೆ ಮತ್ತು ನಾಸಿರ್ ಪೆರ್ಲಂಪಾಡಿ ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ