ಎನ್.ಸಿ.ಸಿ: ಗೌತಮಿ ಪೂಜಾರಿ ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ

Upayuktha
0

ಮಂಗಳೂರು: ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ದ್ವಿತೀಯ ಕಲಾ ಪದವಿಯ ವಿದ್ಯಾರ್ಥಿನಿ, ಎನ್.ಸಿ.ಸಿ ಭೂದಳದ ಗೌತಮಿ ಪೂಜಾರಿ ಕೇರಳದ ತಿರುವನಂತಪುರದಲ್ಲಿ ಜುಲೈ 1 ರಿಂದ 15ರವರೆಗೆ ನಡೆದ ಅಖಿಲ ಭಾರತ ಮಟ್ಟದ ಕ್ರೀಡಾಶೂಟಿಂಗ್ ಸ್ಪರ್ಧೆಯಲ್ಲಿ ಎನ್.ಸಿ.ಸಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದಾರೆ. 


ಇವರು ಪ್ರತಿನಿಧಿಸಿದ ನಿರ್ದೇಶನಾಲಯವು ಇಂಟರ್ ಡೈರಕ್ಟರೇಟ್ ಸ್ಪೋರ್ಟ್ಸ್ ಶೂಟಿಂಗ್ ಕಾಂಪಿಟೀಶನ್ (IDSSC- 2023)ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ವಿಜೇತ ತಂಡವನ್ನು ಕರ್ನಾಟಕದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಇತ್ತೀಚೆಗೆ ರಾಜಭವನದಲ್ಲಿ ಅಭಿನಂದಿಸಿದರು. 


ಕಾಲೇಜಿನ ಕೀರ್ತಿಪತಾಕೆಯನ್ನು ಎತ್ತರಕ್ಕೇರಿಸಿದ ವಿದ್ಯಾರ್ಥಿನಿಗೆ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top