ಮುಳಿಯಾರು: ಕೋಟೂರು ಕಾರ್ತಿಕೇಯ ಕಿರಿಯ ಪ್ರಾಥಮಿಕ ಶಾಲೆಯ ವಜ್ರಮಹೋತ್ಸವ ಆಚರಣೆಯ ಅಂಗವಾಗಿ ಲಾಂಛನ ಪ್ರಕಾಶನ ಮತ್ತು ಮಾಹಾ ಸಭೆಯು ಶಾಲೆಯಲ್ಲಿ ಸಂಪನ್ನವಾಯಿತು. ಮುಳಿಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ.ವಿ ಮಿನಿ ಲಾಂಛನ ಪ್ರಕಾಶನ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪಂಚಾಯತ್ ವಾರ್ಡ್ ಮೆಂಬರ್ ಶ್ಯಾಮಲಾ ಅಧ್ಯಕ್ಷ ಸ್ಥಾನ ವಹಿಸಿ ಮಾತುಗಳನ್ನಾಡಿದರು.
ಪಿ ಕುಂಞಿಜಿಕಣ್ಣನ್ ನಾಯರ್- ಆಚರಣಾ ಸಮಿತಿ ಕೋಶಾಧಿಕಾರಿ, ಶಿವಶಂಕರನ್- ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷ, ಸಿ ಅಚ್ಚುತನ್, ಗೋಪಾಲನ್ ಕೆ, ಗೋವಿಂದ ಬಳ್ಳಮೂಲೆ ಪ್ರಚಾರಸಮಿತಿ ಸಂಚಾಲಕ, ಜೋಮಿ ಟೀಚರ್, ಶ್ರೀವತ್ಸ ಮಾಸ್ಟರ್ ಇವರು ಸಾಂದರ್ಭಿಕ ಮಾತುಗಳನ್ನಾಡಿದರು.
ವಜ್ರಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಪಿ ಬಾಲಕೃಷ್ಣನ್ ಪ್ರಸ್ತಾವನೆ ಮಾಡಿ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸುಕುಮಾರಿ ಧನ್ಯವಾದವಿತ್ತರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ