ಯಕ್ಷತೂಣೀರ ಸಂಪ್ರತಿಷ್ಠಾನಕ್ಕೆ ಪುಸ್ತಕ ಹಸ್ತಾಂತರ

Upayuktha
0

ಕಾಸರಗೋಡು: ಸದಭಿರುಚಿ ಪ್ರಕಾಶನ ಸಂಸ್ಥೆಯ ಸಂಚಾಲಕರಾದ ಶಂಕರ್ ಕುಳಮರ್ವ ಇವರು ಯಕ್ಷತೂಣೀರ ಸಂಪ್ರತಿಷ್ಥಾನ ಕೋಟೂರು ಇವರಿಗೆ ಮಂಗಳೂರಿನ ಕುಳಾಯಿಯಲ್ಲಿರುವ ಮಧುಕರ ಭಾಗವತ್ ಅವರ ಕೊಡುಗೆಯಾದ "ರಾಘವಾಯಣ" ಎಂಬ ರಾಘವರಾವ್ ಸಂಸ್ಮರಣಾ ಗ್ರಂಥದ ಪ್ರತಿಗಳನ್ನು ನೀಡಿದರು.


ಈ ಸಂದರ್ಭದಲ್ಲಿ ಶಂಕರ್ ಕುಳಮರ್ವ ಇವರನ್ನು ಶಾಲು ಹೊದೆಸಿ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು.  ಸುಬ್ರಹ್ಮಣ್ಯ ಭಟ್ ಅಡ್ಕ, ಗೋವಿಂದ ಬಳ್ಳಮೂಲೆ ಸಾಂದರ್ಭಿಕ ಮಾತುಗಳನ್ನಾಡಿದರು.ಕಾರ್ಯದರ್ಶಿ ಮುರಳಿಸ್ಕಂದ ಸ್ವಾಗತಿಸಿ ಡಾ ಶಿವಕುಮಾರ್ ಅಡ್ಕ ಧನ್ಯವಾದವಿತ್ತರು. ಸಭಾಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಭಟ್ ಕೆ ಅಧ್ಯಕ್ಷಸ್ಥಾನ ವಹಿಸಿದರು. ಕೃಷ್ಣ ಭಟ್ ಅಡ್ಕ, ವಿಜಯಲಕ್ಷ್ಮಿ ಸ್ಕಂದ ಮತ್ತು ಸದಸ್ಯರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top