ಮಂಗಳೂರು: ಶ್ರೀಕ್ಷೇತ್ರ ಕದ್ರಿಯಲ್ಲಿ ಸೆಪ್ಟಂಬರ್ 6ರಂದು ಕಲ್ಕೂರ ಪ್ರತಿಷ್ಠಾನವು ಆಯೋಜಿಸಲಿರುವ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆಯ ಅಂಗವಾಗಿ ಶ್ರೀ ಕೃಷ್ಣನ ಕುರಿತು ಸ್ವರಚಿತ 'ಭಜನೆ 'ಹಾಗೂ 'ಭಕ್ತಿಗೀತೆ' ರಚನಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಲಯಬದ್ಧ ಹಾಗೂ ಲಾಲಿತ್ಯ ಪೂರ್ಣವಾಗಿ ಶಾಸ್ತ್ರೀಯ ಶೈಲಿಯಲ್ಲಿ ಸುಮಧುರವಾಗಿ ಹಾಡಲು ಯೋಗ್ಯವಾದ ಭಜನೆ ಹಾಗೂ ಭಕ್ತಿಗೀತೆಗಳಿಗೆ ಆದ್ಯತೆ ನೀಡಲಾಗುವುದು.ಮುಕ್ತ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ಕನ್ನಡ ಹಾಗೂ ತುಳು, ಭಾಷೆಗಳಲ್ಲಿ ರಚಿಸಿದ 'ಭಜನೆ' ಹಾಗೂ 'ಭಕ್ತಿಗೀತೆ'ಗಳನ್ನು ಸೆಪ್ಟಂಬರ್, 2 ರೊಳಗಾಗಿ ತಮ್ಮ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು ಅಥವಾ ವಾಟ್ಸಪ್ ಮಾಡಬಹುದಾಗಿದೆ. ಆಯ್ದ ಕೃತಿಗಳನ್ನು ಪುಸ್ತಕ ರೂಪದಲ್ಲಿ ಮುದ್ರಿಸಿ ಪ್ರಕಟಿಸಲಾಗುವುದು.
ವಿಳಾಸ: ಶ್ರೀಮತಿ ಗೀತಾ ಲಕ್ಷ್ಮೀಶ್, ಶ್ರೀ ಕೃಷ್ಣ ಭಜನೆ ಭಕ್ತಿಗೀತೆ ಸ್ಪರ್ಧಾ ವಿಭಾಗ, ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಸಂಕೀರ್ಣ, ಮಹಾತ್ಮ ಗಾಂಧಿ ರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು ಅಥವಾ 9535656805 ಗೆ ವಾಟ್ಸಪ್ ಕಳುಹಿಸಬೇಕು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ