ಕಾಟರಗಿ: ದೈಹಿಕ, ಮಾನಸಿಕ ಫಿಟ್ನೆಸ್, ಪೂರಕ ಶಿಕ್ಷಣ ನೀಡುತ್ತಿರುವ ನಿರ್ಭಯ್ ಭಾವ ಅಕಾಡೆಮಿ

Upayuktha
0

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಇತ್ತೀಚೆಗೆ ಪ್ರಾರಂಭವಾದ ನಿರ್ಭಯ್ ಭಾವ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಎಂಬ ಸಂಸ್ಥೆಯನ್ನು ಜೂನ್ 14ರಂದು ಉದ್ಘಾಟಿಸಲಾಗಿದೆ. ಇಲ್ಲಿ ಕಿಡ್ಸ್ ಡ್ಯಾನ್ಸ್, ಲೇಡೀಸ್ ಫಿಟ್ನೆಸ್, ಡ್ಯಾನ್ಸ್, ಜೆನ್ಸ್ ಫಿಟ್ನೆಸ್, ಡ್ಯಾನ್ಸ್ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ತುಂಬಾ ಕಡಿಮೆ ಹಣದಲ್ಲಿ ಉತ್ತಮ ಫಲಿತಾಂಶ ನೀಡುವ ಸಂಸ್ಥೆ ಇದಾಗಿದೆ. ಕಾರಟಗಿಯಲ್ಲಿ ಈ ರೀತಿಯ ಸಂಸ್ಥೆಯ ಅವಶ್ಯಕತೆ ತುಂಬಾ ಇತ್ತು, ಅದನ್ನು ನಿರ್ಭಯ್ ಭಾವ ಅಕಾಡೆಮಿ ನಿರ್ವಹಿಸಿದೆ. 


ಶಿಕ್ಷಣವನ್ನು ಅಂಕಗಳಿಕೆಯ ಸಾಧನವಾಗಿ ಮಾತ್ರ ಪರಿಗಣಿಸದೇ ಕಲೆ ಸಾಹಿತ್ಯ ಕ್ರೀಡೆಯನ್ನೂ ಒಳಗೊಂಡಂತೆ ನೋಡುವುದರಿಂದ ಮಕ್ಕಳ ಬೌದ್ಧಿಕ ವಿಕಾಸಕ್ಕೆ ಸಾಧ್ಯವಾಗುತ್ತದೆ. ಅದೇ ರೀತಿಯಾಗಿ ಕಾರಟಗಿಯ ಸುತ್ತಲಿನ ಕಲಾ ಸಂಸ್ಥೆಗಳು ಪಠ್ಯಾಧಾರಿತ ಶಿಕ್ಷಣದಲ್ಲಿನ ಕೊರತೆಯನ್ನು ನೀಗಿಸುವಲ್ಲಿ ಶ್ರಮವಹಿಸುತ್ತಿದೆ. ಅದರಲ್ಲಿ ನಿರ್ಭಯ್ ಭಾವ ಅಕಾಡೆಮಿ ಕೂಡ ಒಂದು. ಇತ್ತೀಚೆಗೆ ಪ್ರಾರಂಭವಾದರೂ ಮಕ್ಕಳ ಮತ್ತು ಪಾಲಕರ ನೆಚ್ಚಿನ ಸಂಸ್ಥೆ ಇದಾಗಿದೆ.


ಹವ್ಯಾಸಗಳಿಲ್ಲದೆ ಶಿಕ್ಷಣ ಪರಿಪೂರ್ಣತೆಯನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಎಲ್ಲವೂ ಪೂರಕವಾಗಿ ಇದ್ದಾಗಲೇ ಮಕ್ಕಳ ಕಲಿಕೆ ಉತ್ತಮವಾಗುತ್ತದೆ. ವೇಗದ ಹಾಗೂ ತಾಂತ್ರಿಕ ಬದುಕಿನ ನಡುವೆ ಭಾವನಾತ್ಮಕ ಸಂಬಂಧಗಳು ದೂರವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಶಾಲಾ ಶಿಕ್ಷಣದ ಜತೆಗೆ ಕಲೆ, ಸಾಹಿತ್ಯ ಹಾಗೂ ಕ್ರೀಡೆಗಳನ್ನು ಒಳಗೊಂಡ ಸಂಸ್ಕಾರಯುತ ಶಿಕ್ಷಣದ ಕುರಿತು ನೈತಿಕವಾದ ಮಾರ್ಗದರ್ಶನ ನೀಡಬೇಕಾದ ಅನಿವಾರ್ಯತೆಯಿದೆ. ಆದ್ದರಿಂದ ಇಂತಹ ಸಂಸ್ಥೆಗಳು ತುಂಬಾ ಮುಖ್ಯವಾಗಿವೆ.


ನಿರ್ಭಯ್ ಭಾವ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ಇ ದರಲ್ಲಿ ಡಾನ್ಸ್ ಮತ್ತು ಫಿಟ್ನೆಸ್ ಮಾಸ್ಟರ್ ಆಗಿ ಸೌರವ್ ಕುಮಾರ್ (ಜಮ್ಮು ಮತ್ತು ಕಾಶ್ಮೀರ) ಮತ್ತು ಸುದೇಶ್ ಸಲಗಾಂವ್ಕರ್ (ಗೋವಾ) ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಕುಲ್ ಭಗತ್ (ಗೋವಾ) ಕೀರ್ತಿ ಪಾಟೀಲ್- ಕರ್ನಾಟಕದ ಬ್ರಾಂಡ್ ಅಂಬಾಸಿಡರ್ ಜೊತೆಗಿದ್ದಾರೆ. ಸಂಸ್ಥೆಯ ನಿರ್ವಹಣಾ ತಂಡದಲ್ಲಿ ಶ್ರೀ ಕೆ.ಅಮರೇಶ ಪಾಟೀಲ್ ಮತ್ತು ಸುಂದರಿ ಆರತಿ ಪಾಟೀಲ್ ಇದ್ದಾರೆ.


- ಸರಸ್ವತಿ ವಿಶ್ವನಾಥ್ ಪಾಟೀಲ್, ಕಾರಟಗಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top