ಸುರತ್ಕಲ್: ಇತ್ತೀಚೆಗೆ ಕಾಟಿಪಳ್ಳದ ಶ್ರೀಗಣೇಶಪುರ ದೇವಸ್ಥಾನದಲ್ಲಿ ಸಂಕಷ್ಟಹರ ಚತುರ್ಥಿಯಂದು ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ ವಿರಚಿತ ಶ್ರೀಮಾತೇ ಭದ್ರಕಾಳಿ ಎಂಬ ಪ್ರಸಂಗವನ್ನು ದಶಮಾನೋತ್ಸದ ಹೊಸ್ತಿಲಲ್ಲಿರುವ ರಥಬೀದಿಯ ನವಭಾರತ ಯಕ್ಷಗಾನ ಅಕಾಡೆಮಿ ಕಲಾವಿದರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಅಲೆವೂರಾಯ ಸಹೋದರರನ್ನು ಗೌರವಿಸಲಾಯಿತು. ದೇವಾಲಯದ ಪದಾಧಿಕಾರಿಗಳು, ಟ್ರಸ್ಟಿಗಳು, ಹಾಗೂ ಸಂಯೋಜಕ ಗಣೇಶಪುರ ಗಿರೀಶ್ ನಾವಡ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ