ಹಾಸನ: ಅರಕಲಗೂಡು ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ನಡೆದ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಜನ್ಮದಿನದ ಸ್ಮರಣಾಥ೯ ಗೊರೂರಿನಲ್ಲಿ ಏರ್ಪಡಿಸಲಾಗಿದ್ದ
ಸಮಾರಂಭದಲ್ಲಿ ಹಾಸನದ ಹಿರಿಯ ಸಾಹಿತಿ ಗೊರೂರು ಅನಂತರಾಜು ಅವರಿಗೆ ಡಾ. ಎಸ್.ಕೆ. ಕರೀಂಖಾನ್ ಪ್ರಶಸ್ತಿ ಘೋಷಣೆ ಮಾಡಿದ್ದು ಹಾಸನದಲ್ಲಿ ಹಾಸನಾಂಬ ಥಿಯಾಸೊಫಿಕಲ್ ಸೊಸೈಟಿ ಆವರಣದಲ್ಲಿ ಭಾನುವಾರ ನಡೆದ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಅರಕಲಗೂಡು ತಾಲ್ಲೂಕು ಅಧ್ಯಕ್ಷರು ಉಡುವೇರೆ ಡಿ. ಸುಂದರೇಶ್ ಪ್ರದಾನ ಮಾಡಿದರು.
ನಿವೃತ್ತ ಪ್ರಾಂಶುಪಾಲರು ಡಾ. ಎಂ.ಆರ್. ಚಂದ್ರಶೇಖರ್, ನಿವೃತ್ತ ತಹಸೀಲ್ದಾರ್ ಎ.ವಿ. ರುದ್ರಪ್ಪಾಜಿರಾವ್, ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಾಯ ಹೋಬಳಿ ಘಟಕದ ಅಧ್ಯಕ್ಷರು ಜಗದೀಶ್ ರಾಮಘಟ್ಟ, ಕನಾ೯ಟಕ ರಾಜ್ಯ ಬರಹಗಾರರ ಸಂಘ ಚನ್ನರಾಯಪಟ್ಟಣ ತಾಲ್ಲೂಕು ಘಟಕದ ಅಧ್ಯಕ್ಷರು ಉಪನ್ಯಾಸಕರು ಡಾ. ಬರಾಳು ಶಿವರಾಮ್, ಉಪನ್ಯಾಸಕರು ಉಮೇಶ್ ಹೊಸಹಳ್ಳಿ, ಕವಿ ಎನ್.ಎಲ್. ಚನ್ನೇಗೌಡ, ನಿವ್ಯತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಿ.ಡಿ. ಗುರುಲಿಂಗಪ್ಪ, ನಿವೃತ್ತ ಎ.ಎಸ್.ಐ. ಶಿವನಂಜೇಗೌಡರು, ಕವಯಿತ್ರಿಯರಾದ ವನಜ ಸುರೇಶ್, ಮಾಳೇಟರ ಸೀತಮ್ಮ ವಿವೇಕ್, ಸಾವಿತ್ರಿ ಬಿ. ಗೌಡ, ಹೆಚ್.ಬಿ. ಚೂಡಾಮಣಿ, ರೇಖಾ ಪ್ರಕಾಶ್, ಸರೋಜಮ್ಮ, ಹೆಚ್.ಜಿ. ಕಾಂಚನ ಮಾಲಾ, ಕಲಾವಿದರು ಕಾಳಾಚಾರ್, ಯಾಕುಬ್, ಅತ್ನಿ ಸುರೇಶ್, ತಬಲ ನಾಗೇಶ್, ಶ್ರೀಕಾಂತ್ ಗೊರೂರು, ಕೆ.ವಿ. ಮಾರೆಸನ್, ಎಸ್.ಎಸ್. ಚಂದ್ರಣ್ಣ, ಪ್ರಜ್ವಲ್ ಕೆ.ಎಂ. ಕೌಡಳ್ಳಿ, ದ್ಯಾವಪ್ಪ ಮೊದಲಾದವರು ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ