ಮಂಗಳೂರು: ಕಲಾಶ್ರೀ ಬೆದ್ರ ತಂಡದ ಹೊಸ ನಾಟಕದ ಶೀರ್ಷಿಕೆ ಬಿಡುಗಡೆ, ಸಾಧಕರಿಗೆ ಸನ್ಮಾನ

Upayuktha
0

ಮಂಗಳೂರು: ಕರಾವಳಿ ಕರ್ನಾಟಕದಲ್ಲೇ ಪ್ರಸಿದ್ಧ ತಂಡ ಎಂದೇ ಗುರುತಿಸಿಕೊಂಡಿರುವ ತುಳು -ಕನ್ನಡ ಚಿತ್ರ ನಟ ಸಂದೀಪ್ ಶೆಟ್ಟಿ ರಾಯಿ ಇವರ ನಾಯಕತ್ವದ ಹಾಗೂ ರಮೇಶ್ ಶೆಟ್ಟಿ ಮಿಜಾರು ಸಾರಥ್ಯದ ಕಲಾಶ್ರೀ ಕುಸಾಲ್ದ ಕಲಾವಿದೆರ್ ಬೆದ್ರ ಇವರ ಈ ವರ್ಷದ ಹೊಸ ನಾಟಕದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಪುರ ಭವನದಲ್ಲಿ ನಡೆಯಿತು.


ಕಾರ್ಯಕ್ರಮಕ್ಕೆ ಆಗಮಿಸಿದ ಡಾ.ದೇವದಾಸ್ ಕಾಮಿಕಾಡ್, ವಿಜಯ ಕುಮಾರ್ ಕೊಡಿಯಾಲ್ ಬೈಲ್, ಭೋಜರಾಜ್ ವಾಮಂಜೂರು, ಸುನಿಲ್ ಕುಮಾರ್ ನೆಲ್ಲಿಗುಡ್ಡೆ, ಶಾಸಕ ವೇದವ್ಯಾಸ್ ಕಾಮತ್ ಹಾಗೂ ಬ್ರಿಜೇಶ್ ಚೌಟ ಹಾಗೂ ಗಣ್ಯಾತಿ ಗಣ್ಯರ ಉಪಸ್ಥಿತರಿದ್ದು ದೀಪ ಬೆಳಗಿಸುವುದರ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಈ ಸಂಧರ್ಭದಲ್ಲಿ ನಾಲ್ಕು ಜನ ಸಾಧರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಶ್ವಾನ ಪ್ರೇಮಿ ರಜನಿ ಶೆಟ್ಟಿ ಹಾಗೂ ಹಿರಿಯ ನಾಟಿ ವೈದ್ಯರಾದ ಉಗ್ಗಪ್ಪ ಪೂಜಾರಿ, ರಂಗಭೂಮಿ ಮತ್ತು ತುಳು ಸಿನಿಮಾ ರಂಗಕ್ಕೆ ಕೊಡುಗೆ ನೀಡಿದ ಪ್ರಕಾಶ್ ಶೆಟ್ಟಿ ಧರ್ಮನಗರ ಹಾಗೂ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಸನ್ಮಾನ‌ವನ್ನು ಮಾಡಲಾಯಿತು. ಆನಂತರ ವೇದಿಕೆಯಲ್ಲಿ ಈ ವರ್ಷದ ಹೊಸನಾಟಕದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.


ಸಂದೀಪ್ ಶೆಟ್ಟಿ ರಾಯಿ ನಿರ್ದೇಶನದ ತಿಗಲೆಗ್ ದಿವೊಂಡೆರ್ ಎನ್ನುವ ಹೊಸ ನಾಟಕ ಈ ವರ್ಷ ಮೂಡಿಬರಲಿದೆ. ಆ ಬಳಿಕ ಮಾತನಾಡಿದ ಡಾ.ದೇವದಾಸ್ ಕಾಪಿಕಾಡ್, ತಂಡ ಕಟ್ಟುವುದು ಅಷ್ಟು ಸುಲಭದ ಕೆಲಸವಲ್ಲ, ಈ ತಂಡ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಎಲ್ಲಾ ನಾಟಕ ತಂಡದ ಜೊತೆ ನಾವು ಇದ್ದೇವೆ ಎಂದು ಶುಭಹಾರೈಸಿದರು. ಈ ಸಂದರ್ಭ ಕಲಾಶ್ರೀ ತಂಡದ ಎಲ್ಲಾ ಕಲಾವಿದರಿಗೆ ಗೌರವಿಸಲಾಯಿತು. ಇನ್ನು ಕಾರ್ಯಕ್ರಮದಲ್ಲಿ ರಶ್ಮಿತ್ ಶೆಟ್ಟಿ, ಬಿಜೆಪಿ ವಕ್ತಾರ ಕಿರಣ್ ರೈ, ಶಿವಶರಣ್ ಶೆಟ್ಟಿ, ಲೀಲಾಕ್ಷ ಕರ್ಕೆರಾ, ಅನುಪ್ ಸಾಗರ್, ಸ್ವರಾಜ್ ಶೆಟ್ಟಿ, ಶೇಖರ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು. ಖ್ಯಾತ ನಿರೂಪಕ ಹೇಮಚಂದ್ರ ಕೈರಂಗಳ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top