ಬೆಂಗಳೂರು: ಗಾನಸುಧಾ ಮ್ಯೂಸಿಕಲ್ ಅಕಾಡೆಮಿಯ ವತಿಯಿಂದ ಜಯನಗರದ ನಾಲ್ಕನೇ ಬಡಾವಣೆಯಲ್ಲಿರುವ ವಿವೇಕ ಆಡಿಟೋರಿಯಂ ನಲ್ಲಿ ಜುಲೈ 30 ರಂದು ಬೆಳಗ್ಗೆ ಇಂದ ರಾತ್ರಿಯವರೆಗೆ ಏರ್ಪಡಿಸಿದ್ದ "ಗಾನೋತ್ಸವ-2023" ಕಾರ್ಯಕ್ರಮದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಸ್ತ್ರೀಯ ಸಂಗೀತ ಮತ್ತು ಲಘು ಸಂಗೀತ ಗಾಯನ ಪ್ರಸ್ತುತ ಪಡಿಸಿದರು.
ಈ ಸಮಾರಂಭದಲ್ಲಿ ನಾಡಿನ ಸಂಗೀತ ದಿಗ್ಗಜರುಗಳಾದ ಶೃಂಗೇರಿ ನಾಗರಾಜ್ ಹೆಚ್.ಎಸ್. ಮತ್ತು ಪುತ್ತೂರು ನರಸಿಂಹ ನಾಯಕ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರೂ, ಗುರುಗಳೂ ಆದ ವಿದುಷಿ ಶ್ರೀಮತಿ ದಿವ್ಯಾ ಗಿರಿಧರ್ ಅವರು ಏರ್ಪಡಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ