ಸುರತ್ಕಲ್: ಜೀವನ ಪ್ರೀತಿ ಯಶಸ್ಸಿಗೆ ತಳಹದಿ ಇನ್ನರ್ ವ್ಹೀಲ್ ಕ್ಲಬ್ ಮತ್ತು ರೋಟರಿ ಕ್ಲಬ್ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮಾದರಿಯಾಗಿವೆ ಎಂದು ಆಳ್ವಾಸ್ ಕಾಲೇಜಿನ ಡಾ. ಸುಧಾರಾಣಿ ನುಡಿದರು. ಇವರು ಸುರತ್ಕ್‌ಲ್ ಇನ್ನರ್ ವ್ಹೀಲ್ ಕ್ಲಬ್ ನ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇನ್ನರ್ ವ್ಹೀಲ್ ಕ್ಲಬ್‌ನ ನೂತನ ಅಧ್ಯಕ್ಷೆಯಾಗಿ ಸಾವಿತ್ರಿ ರಮೇಶ ಭಟ್, ಕಾರ್ಯದರ್ಶಿಯಾಗಿ ಪಾವನಾ, ಜೊತೆ ಕಾರ್ಯದರ್ಶಿಯಾಗಿ ಶುಭರಾವ್, ಖಜಾಂಚಿಯಾಗಿ ಡಾ.ಶುಭದಾ ಭಟ್, ಈ.ಎಸ್ ಆಗಿ ಪರಿಮಳರಾವ್, ಸಂಪಾದಕಿಯಾಗಿ ಶೈಲಾ ಮೋಹನ್ ಜವಾಬ್ದಾರಿಯನ್ನು ಸ್ವೀಕರಿಸಿದರು. ಇನ್ನರ್ ವ್ಹೀಲ್ ಕ್ಲಬ್ ನ ಜಿಲ್ಲಾಕೋಶಾಧಿಕಾರಿ ರಜನೀಭಟ್, ಮಂಗಳೂರು ನೂತನವಾಗಿ ಆಯ್ಕೆಯಾದ ಕ್ಲಬ್‌ನ ಪದಾಧಿಕಾರಿಗಳನ್ನು ಅಭಿನಂದಿಸಿ 2023-24ಸಾಲಿನ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ನಿಕಟಪೂರ್ವ ಅಧ್ಯಕ್ಷೆ ಡಾ. ರೇಶ್ಮಾರಾವ್ ಸ್ವಾಗತಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ನಿಕಟಪೂರ್ವ ಕಾರ್ಯದರ್ಶಿ ಸುನೀತಾ ಗುರುರಾಜ್ ಕ್ಲಬ್‌ನ ಚಟುವಟಿಕೆಗಳ ವರದಿವಾಚಿಸಿದರು.
ರೋಟರಿಕ್ಲಬ್‌ನ ಸದಸ್ಯ ಪಿ. ಪುರುಶೋತ್ತಮರಾವ್ ಕ್ಲಬ್‌ನ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಸೇವಾ ಹಾಗೂ ಮಹಿಳಾಸಬಲೀಕರಣ ಕಾರ್ಯವಾಗಿ ಸರ್ವಮಂಗಳ ಸೇವಾಸಂಸ್ಥೆಗೆ ರೂ. 25000/-ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಪರಿಸರ ರಕ್ಷಣಯೋಜನೆಯ ಅಂಗವಾಗಿ ಔಷದೀಯ ಗಡದ ಬೀಜವನ್ನು ಹಾಗೂ ಅಂತರ್ ರಾಷ್ಟ್ರೀಯ ಇನ್ನರ್ ವ್ಹೀಲ್ ಕ್ಲಬ್‌ನ ಶತಮಾನೋತ್ಸವದ ಅಂಗವಾಗಿ ನೂರುಸಸಿಗಳನ್ನು ವಿತರಿಸಲಾಯಿತು.
ಐ.ಎಸ್ ಪರಿಮಳರಾವ್ ಹಾಗೂ ಜೊತೆ ಕಾರ್ಯದರ್ಶಿ ಶುಭರಾವ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ಮಾಲತಿ ಸಚ್ಚಿದಾನಂದ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ