ಶ್ರೀ ಧ.ಮಂ ಪ.ಪೂ ಕಾಲೇಜು: ರಾ.ಸೇ. ಯೋಜನೆಯ ಪ್ರಕೃತಿ ಸೇವೆ

Upayuktha
0

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಪ್ರಕೃತಿ ಸೇವೆ ಎಂಬ ಧ್ಯೇಯದೊಂದಿಗೆ ಒಂದು ದಿನದ ಪರಿಸರ ಸ್ವಚ್ಛತೆ, ಇಂಗುಗುಂಡಿಗಳ ನಿರ್ಮಾಣ ಹಾಗೂ ಕೊಡೆ ನಾ ನಿನ್ನ ಬಿಡೆ ಎಂಬ ಕೊಡೆ ಬಳಕೆಯ ಅಭಿಯಾನದ ಸಮಾರೋಪ ಸಮಾರಂಭ ನಡೆಯಿತು.


ಸ್ವಯಂ ಸೇವಕರು ರಾಷ್ಟ್ರೀಯ ಸೇವಾ ಯೋಜನೆಯ ನಾಯಕರಾದ ಸುದರ್ಶನ ನಾಯಕ್ ಹಾಗೂ ದಕ್ಷಾ ಅವರ ನಾಯಕತ್ವದಲ್ಲಿ ಪರಿಸರದ ಪ್ಲಾಸ್ಟಿಕ್ ಇತ್ಯಾದಿ ಕಸಗಳನ್ನು ಸ್ವಚ್ಛಗೊಳಿಸಿದರು. ಸ್ಥಳೀಯ ಬಸ್ ತಂಗುದಾಣದ ಸ್ವಚ್ಛತೆ ಮಾಡಿದರು. ಕಾಲೇಜು ಪರಿಸರದಲ್ಲಿ ಸ್ವಯಂ ಸೇವಕ ಕಿಶೋರ್ ಪಾಟೀಲ್ ನೇತೃತ್ವದಲ್ಲಿ ಹಲವು ಇಂಗುಗುಂಡಿಗಳ ನಿರ್ಮಾಣ ಮಾಡಿದರು. ಕೊನೆಯಲ್ಲಿ ಕೊಡೆ ಬಳಕೆಯ ಜಾಗೃತಿ ಮೂಡಿಸುವ 'ಕೊಡೆ ನಾ ನಿನ್ನ ಬಿಡೆ' ಎಂಬ ಧ್ಯೇಯದೊಂದಿಗೆ ನಡೆಸಿದ ಅಭಿಯಾನದ ಸಮಾರೋಪ ಸಮಾರಂಭ ನಡೆಯಿತು.

ಯೋಜನಾಧಿಕಾರಿ ಡಾ. ಪ್ರಸನ್ನಕುಮಾರ ಐತಾಳ್ ಹಾಗೂ ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top