ಸ್ನೇಹಕ್ಕೆ ಇನ್ನೊಂದು ಹೆಸರೇ ಹನುಮ. ಯೋಗ ಹುಟ್ಟಿದ್ದು ಇವನಿಂದಲೇ. ಇವನ ತಾಯಿ ಅಂಜನಾದೇವಿ ಮಗುವಾಗಿ ಇದ್ದಾಗ ಅವನಿಗೆ ಕಿವಿಯಲ್ಲಿ ವಜ್ರದ ಓಲೆಗಳನ್ನು ಹಾಕಿ ಅವನಿಗೆ ಹೇಳಿದಳಂತೆ. ಕಂದ ಈ ಓಲೆಗಳನ್ನು ನಿನ್ನ ಕಿವಿಯಲ್ಲಿ ಇರೋದನ್ನು ಯಾರು ಗುರುತಿಸುವರೋ ಆ ಮಹಾಪುರುಷನೇ ನಿನ್ನ ಗುರುವಾಗಿ ಸ್ವೀಕಾರ ಮಾಡು.
ಶ್ರೀರಾಮನಿಗೆ ಹನುಮನ ಓಲೆಗಳು ನೋಡೀ ಎಷ್ಟು ಚಂದ ಅಂತ ರಾಮನಿಗೆ ಅನಿಸಿ ಹೇಳುತ್ತಾನೆ. ಯಾರಿಗೂ ಕಾಣದ ಓಲೆಗಳು ಶ್ರೀರಾಮನಿಗೆ ಕಂಡ ಮೇಲೆ ತಾಯಿ ಮಾತುಗಳು ನೆನಪು ಆಗುತ್ತೆ. ಅಂತೆಯೇ ಶ್ರೀರಾಮನನ್ನು ಎದೆಯೊಳಗೆ ಸ್ಥಾಪನೆ ಮಾಡಿ ಕೊಂಡನು.
ಮಗುವಾಗಿ ಇದ್ದಾಗ ಸೂರ್ಯನ ಕಂಡು ಏನೋ ಹಣ್ಣು ಇರಬೇಕು ಅಂತ ಆಕಾಶಕ್ಕೆ ಜಿಗಿದನು. ಸೂರ್ಯನ ತಾಪಕ್ಕೆ ಕೆಳಗೆ ಬಿದ್ದಾಗ ಅವನ ಮುಸುಡಿ ಬಿದ್ದು ಏಟಾಗಿ ಊದಿ ಕೊಂಡಿತು. ಅವನ ಅಂಗಗಳಿಗೆ ಪೆಟ್ಟು ಬಿದ್ದು ಊನ ಆದವು ಅಂತೆ. ಎಲ್ಲ ಪ್ರಾಣಿ ಪಕ್ಷಿಗಳು ಅವನಿಗೆ ಒಂದೊಂದು ಅಂಗಗಳನ್ನು ಕೊಟ್ಟವು ಅಂತೆ. ನೀರಲ್ಲಿ ಇದ್ದ ಏಡಿ ಕೂಡ ತನ್ನ ಕಣ್ಣುಗಳಲ್ಲಿ ಒಂದು ಕಣ್ಣನ್ನು ಹನುಮನಿಗೆ ನೀಡಿತು. ಒಂದೇ ಕಣ್ಣು ಇಟ್ಟುಕೊಂಡು ನಾನೇಗೆ ನಡೆಯಲಿ ಅಂತಾಗ ಉಳಿದ ಪ್ರಾಣಿಗಳು ನೀನು ಒಂದೇ ಕಣ್ಣು ಇರೋನು ಅಡ್ಡನಡೆ ಅಂತ ನಗಾಡಿದವು ಅಂತೆ. ಅದಕ್ಕೆ ಏಡಿ ಅಡ್ಡ ನಡೆಯುವುದು ಅಂತೆ.
ಲಂಕೆಯಲ್ಲಿ ಸೀತೆ ಇರೋದು ಗೊತ್ತಾದಾಗ ಎಲ್ಲರೂ ಸಾಗರದ ಬಳಿ ಮಂಕಾಗಿ ಕೂತರು ಅಂತೆ. ಅಲ್ಲಿಗೆ ಬಂದ ಜಾಂಬವಂತ ಹನುಮನಿಗೆ ಹುರಿದುಂಬಿಸಿ ಹೇಳುತ್ತಾನೆ, "ಹೇ ಹನುಮ ನಿನ್ನ ಶಕ್ತಿ ಯನ್ನು ನೀನೇ ಗೊತ್ತು ಮಾಡಿಕೊಂಡಿಲ್ಲ, ನೀನು ಮಗುವಾಗಿ ಇದ್ದಾಗಲೇ ಆಕಾಶಕ್ಕೆ ಜಿಗಿದು ಸೂರ್ಯನ ಹಿಡಿಯಲು ಹೋದವನು. ನಿನ್ನ ಕೈಲಿ ಯಾಕೆ ಸಾಧ್ಯವಿಲ್ಲ, ಈ ಸಾಗರ ದಾಟಿ ಲಂಕೆಗೇ ಹಾರಬಲ್ಲೆ, ನಿನ್ನಿಂದ ಇದು ಸಾದ್ಯೆ" ಅಂತಾನೆ.
ಆ ಪ್ರೋತ್ಸಾಹದ ನುಡಿಗಳು ಹನುಮನನ್ನು ಸಮುದ್ರ ದಾಟಲು ನೆರವಾಯ್ತು. ಅಂತೆಯೇ ಹಾರಿದ ಹನುಮಂತ, ಲಂಕೆ ಸೇರಿದ. ಸೀತೆಯ ಹುಡುಕಿ ಚೂಡಾಮಣಿ ಕೊಟ್ಟು ಬಂದ. ಮುಂದೆ ರಾಮ ರಾವಣರ ಯುದ್ಧ. ಕೊನೆಗೆ ರಾಮನಿಗೆ ಜಯ ವಾಯ್ತು...ರಾಮಾಯಣ ದಲ್ಲಿ ಹನುಮನಪಾತ್ರ ತುಂಬಾ ದೊಡ್ಡದು. ಹನುಮನ ಸೈನ್ಯವೆ ಲಂಕೆ ಗೇ ಸೇತುವೆ ನಿರ್ಮಾಣ ಮಾಡಿದ್ದು, ಯುದ್ಧದಲ್ಲಿ ಕಪಿ ಸೈನ್ಯವೆ ರಾಮನಿಗೆ ಯುದ್ಧ ಸೇನೆ.
ನಾವು ಯಾರಿಗೂ ಕೆಟ್ಟದ್ದು ಬಯಸೋದು ಬೇಡಾ, ಇಲ್ಲಾ ಸಹಾಯ ಮಾಡಲು ಆಗದಿದ್ದರೆ ಅವರಿಗೆ ಎರಡು ಪ್ರೋತ್ಸಾಹದ ನುಡಿಗಳು ಹೇಳೋಣ. ಇವೆಲ್ಲ ನನ್ನ ತಾಯಿ ಹೇಳಿದ ಕಥೆಗಳು. ಇಂದಿಗೂ ಆಗಾಗ ನೆನಪು ಆಗುತ್ತವೆ. ಓದಿದ್ದು, ಕೇಳಿದ್ದು ನಿಜಕ್ಕೂ ಮರೆಯಲು ಆಗದು. ನಿಜಕ್ಕೂ ಎಂತಹ ಅಚ್ಚರಿಯ ಮೆದುಳು ಅಲ್ಲವಾ?
- ಶ್ರೀ ಗಂಧ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ