ಹಳೆ ವಿದ್ಯಾರ್ಥಿ ನಿರಂಜನ್ ರಾವ್ ಕೊಡುಗೆಯಾಗಿ ನೀಡಿದ ಪ್ರೊಜೆಕ್ಟರನ್ನು ಹಾಗೂ ದೇವದಾಸ್ ಕುಳಾಯಿ ನೀಡಿರುವ ಧ್ವನಿವರ್ಧಕ ವ್ಯವಸ್ಥೆಯನ್ನು ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ ಪಿ.ಉದ್ಘಾಟಿಸಿದರು.
ಹಳೆ ವಿದ್ಯಾರ್ಥಿಸಂಘದ ಕೋಶಾಧಿಕಾರಿ ಹಾಗೂ ಕೂಳೂರು ಮೊಗವೀರ ಮಹಾಸಭಾದ ಅಧ್ಯಕ್ಷ ಭರತ್ ಕುಳಾಯಿ, ಹಳೆ ವಿದ್ಯಾರ್ಥಿ ಸಂಘದ ಸದಸ್ಯ ತೇಜ್‍ಪಾಲ್, ಮಕ್ಕಳ ಸುರಕ್ಷಾ ಸಮಿತಿ ಸದಸ್ಯಕುಮಾರ್ ಬಂಗೇರ, ನಿವೃತ್ತ ಶಿಕ್ಷಕಿ ಪುಷ್ಪಾವತಿ ಹಾಗೂ ಶ್ರೀನಿವಾಸ ರಾವ್ ಮುಖ್ಯ ಅತಿಥಿಗಳಾಗಿದ್ದರು. ಸಹ ಶಿಕ್ಷಕಿ ಸುಕೇಶಿನಿ ಅಭಿನಂದನಾ ಭಾಷಣ ಮಾಡಿದರು. ಸಮ್ಮಾನ ಸ್ವೀಕರಿಸಿದ ಕಾಮಾಕ್ಷಿ ಕೃತಜ್ಞತೆಯ ನುಡಿಗಳನ್ನಾಡಿದರು.
ಪುಷ್ಪಾವತಿ ಶ್ರೀನಿವಾಸ ರಾವ್ ಹಾಗೂ ಕಾಮಾಕ್ಷಿ ಶಾಲಾಭಿವೃಧ್ಧಿಗೆ ಧನ ಸಹಾಯ ಹಸ್ತಾಂತರಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶೋಭಾ ಸ್ವಾಗತಿಸಿದರು. ಸಿಂತಿಯಾ ವಂದಿಸಿದರು. ನೀತಾ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ