ಮಣಿಪುರ ಸಂತ್ರಸ್ತರಿಗೆ ಆಳ್ವಾಸ್ ಸಹಾಯಧನ

Upayuktha
0

ವಿದ್ಯಾಗಿರಿ: ಮಣಿಪುರದಲ್ಲಿ ಸಂಘರ್ಷದಲ್ಲಿ ನೊಂದ ಕುಟುಂಬಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನೆರವು ನೀಡಲಾಯಿತು. 


ಕಾಲೇಜಿನಲ್ಲಿ ನಡೆದ ಟ್ರೆಡಿಷನಲ್ ಡೇ ಸಂಧರ್ಭದಲ್ಲಿ  ಸಂಗ್ರಹಿಸಿದ ಸುಮಾರು 1 ಲಕ್ಷ  ರೂಪಾಯಿಯನ್ನು  ವಿವಿಧ ಪರಿಹಾರ ಶಿಬಿರಗಳಿಗೆ ಮತ್ತು ರಾಜ್ಯದ ಬಿಸ್ನುಪುರ್ ಜಿಲ್ಲೆ (ಮೊಯಿರಾಂಗ್ ನ್ಯಾಯವ್ಯಾಪ್ತಿಯಲ್ಲಿರುವ ಕುಂಬಿ ಪ್ರದೇಶ), ತೌಬಲ್ ಜಿಲ್ಲೆ ಮತ್ತು ಕಾಕ್ಚಿಂಗ್ ಜಿಲ್ಲೆಯ ಹಾಲಿ ಗ್ರಾಮಗಳಿಗೆ ವಿತರಿಸಲಾಯಿತು.


7 ಪರಿಹಾರ ಶಿಬಿರಗಳಿಗೆ ತಲಾ 10 ಸಾವಿರ ರೂಪಾಯಿ, 2 ಮುಂಚೂಣಿ ಗ್ರಾಮ ರಕ್ಷಣಾ ಸಂಸ್ಥೆಗೆ ತಲಾ 10 ಸಾವಿರ ರೂಪಾಯಿ ಮತ್ತು 3 ಸ್ಥಳಗಳಿಗೆ ಆಲೂಗಡ್ಡೆ, ಸಕ್ಕರೆ, ಅಡುಗೆ ಎಣ್ಣೆ, ಟೂತ್ ಬ್ರμï, ಮಸೂರ, ನೀರಿನ ಬಾಟಲಿ ಇತ್ಯಾದಿ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. 


ಮಿಜಾರಿನ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ  ಜರುಗಿದ ಆಳ್ವಾಸ್ ಟ್ರೆಡಿಷನಲ್ ಡೇ ಸಂಧರ್ಭದಲ್ಲಿ ಹತ್ತಕ್ಕೂ ಅಧಿಕ ಆಹಾರ ಮಳಿಗೆಗಳನ್ನು ವಿದ್ಯಾರ್ಥಿಗಳು ತೆರೆದಿದ್ದರು. ಆ ಸಂಧರ್ಭದಲ್ಲಿ  ವಿವಿಧ ಮಳಿಗೆಗಳಿಂದ ಗಳಿಸಿದ ಲಾಭವನ್ನು ಒಟ್ಟು ಗೂಡಿಸಿ ಮಣಿಪುರ ಸಂತ್ರಸ್ತರಿಗೆ ಸಹಾಯಧನದ ರೂಪದಲ್ಲಿ ನೀಡಲಾಗಿದೆ. 


ಉದಾತ್ತ ಸಹಾಯಕ್ಕಾಗಿ ಆಳ್ವಾಸ್ ಕಾಲೇಜು ಮತ್ತು ಕಾಲೇಜಿನ ವಿದ್ಯಾರ್ಥಿಗಳಿಗೆ ನಾನು ಅಭಾರಿಯಾಗಿದ್ದೇನೆ - ಅಜಂತಾ ಮೊಯಿರಾಂಗ್ತೆಂ, ಮಣಿಪುರ


ತೆಂತಾ ಖೋಂಗ್ಬಾಲ್ ವೆಲ್ಫೇರ್ ಅಸೋಸಿಯೇಷನ್ ಯುವ ಸ್ವಯಂಸೇವಾ ಸಂಸ್ಥೆಯ ಸ್ವಯಂಸೇವಕರು ವಿತರಣೆ ಮಾತನಾಡಿದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top