ಬೆಂಗಳೂರು: ಚಿಶ್ತಿಯ ವಂಶಸ್ಥರು ಮತ್ತು ಯೂತ್ ಕಾಂಗ್ರೆಸ್‌ನ ಫಾರೂಕ್, ನಫೀಸ್ ಮತ್ತು ಅನ್ವರ್ ಚಿಶ್ತಿ ಅಜ್ಮೇರ್ ಅತ್ಯಾಚಾರ ಪ್ರಕರಣವನ್ನು ಮಾಡಿದ್ದಾರೆ. ಈ ಕುರಿತು ‘ಅಜ್ಮೇರ್ ಕಾಂಡ್` ಈ ಚಲನಚಿತ್ರವನ್ನು 2023ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಚಲನಚಿತ್ರದ ಪೋಸ್ಟರ್, ಬ್ಯಾನರ್ ಹಾಗೂ ಡೈಲಾಗ್ ಗಳಿಗೆ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ. ನನಗೂ ಮತ್ತು ನನ್ನ ಸಿನಿಮಾ ನಟರಿಗೂ ಬೆದರಿಕೆ ಹಾಕಲಾಗುತ್ತಿದೆ. ಸತ್ಯ ಘಟನೆಯನ್ನು ಹೇಳಲು ವಿರೋಧ ಏಕೆ ? ಇದರಲ್ಲಿ ಸೆಕ್ಯುಲರ್ ಹಿಂದೂಗಳೇ ನಮ್ಮನ್ನು ವಿರೋಧಿಸುತ್ತಿದ್ದಾರೆ. ‘ಅಜ್ಮೇರ್ ರೇಪ್ ಕಾಂಡ’ ಸಿನಿಮಾವನ್ನು ಬಿಡುಗಡೆ ಮಾಡಲು ಬಿಡದಿದ್ದರೆ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ‘ಅಜ್ಮೇರ್ ಕಾಂಡ್’ ಸಿನೆಮಾದ ಲೇಖಕ ಮತ್ತು ನಿರ್ದೇಶಕ ಸಚಿನ್ ಕದಮ್ ಇವರು ಎಚ್ಚರಿಕೆ ನೀಡಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಅಜ್ಮೇರ್ ಅತ್ಯಾಚಾರ ಕಾಂಡ : ಮುಸ್ಲಿಂ ಓಲೈಕೆಯ ಪರಿಣಾಮಗಳು ?’ ಎಂಬ ವಿಷಯದ ಕುರಿತು ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು. ಇತ್ತೀಚೆಗಷ್ಟೇ ‘ಅಜ್ಮೇರ್ 92’ ಸಿನಿಮಾ ದೇಶಾದ್ಯಂತ ಬಿಡುಗಡೆಯಾಗಿದೆ. ಅದಾದ ನಂತರ ‘ಅಜ್ಮೇರ್ ಕಾಂಡ್’ ಚಿತ್ರ ಬಿಡುಗಡೆಯ ಹಾದಿಯಲ್ಲಿದೆ.
ಈ ಸಂದರ್ಭದಲ್ಲಿ ದೆಹಲಿಯ ಸರ್ವೋಚ್ಚ ನ್ಯಾಯಾಲಯದ ವಕೀಲ ಮಣಿ ಮಿತ್ತಲ್ ಇವರು ಮಾತನಾಡಿ, 'ಅಜ್ಮೇರ್ ಅತ್ಯಾಚಾರ ಕಾಂಡ'ದಲ್ಲಿ ಎಷ್ಟು ಹಿಂದೂ ಹುಡುಗಿಯರ ಮತ್ತು ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬುದಕ್ಕೆ 100, 200 ಅಥವಾ 250 ಹೀಗೆ ನಿರ್ದಿಷ್ಟ ಸಂಖ್ಯೆ ನೀಡುವುದು ಕಷ್ಟವಿದೆ. ಅತ್ಯಾಚಾರದ ನಂತರ ಈ ಅಪ್ರಾಪ್ತ ಬಾಲಕಿಯರ ಫೋಟೋ ತೆಗೆದು 'ಬ್ಲಾಕ್‌ಮೇಲ್' ಮಾಡಲಾಯಿತು. ಇದಾದ ನಂತರ ಅನೇಕ ಹುಡುಗಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತ್ಯಾಚಾರದಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಪೋಲೀಸರ ಪಾತ್ರ ಸಕಾರಾತ್ಮಕವಾಗಿರುತ್ತದೆ; ಆದರೆ ಈ ಪ್ರಕರಣದಲ್ಲಿ ಪೊಲೀಸರ ಪಾತ್ರ ನಕಾರಾತ್ಮಕವಾಗಿತ್ತು. 'ಕಾಶ್ಮೀರ್ ಫೈಲ್ಸ್', 'ದಿ ಕೇರಳ ಸ್ಟೋರಿ' ಸಿನೆಮಾಗಳ ನಂತರ ಈಗ 'ಅಜ್ಮೇರ್ 92' ಸಿನೆಮಾ ಬಂದಿದೆ. ಆ ಸಮಯದಲ್ಲಿ ಅಜ್ಮೀರ್ ಅತ್ಯಾಚಾರ ಪ್ರಕರಣವು ದೊಡ್ಡ ರೀತಿಯಲ್ಲಿ ನಡೆಯಿತು; ಆದರೆ ಇಂದಿಗೂ ಹಲವೆಡೆ ಸಣ್ಣ ರೂಪದಲ್ಲಿ ನಡೆಯುತ್ತಿದೆ. ಇಂದು ಹಿಂದೂಗಳು ಎಚ್ಚೆತ್ತುಕೊಂಡು ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆ ಮಾಡದೆ ಜಾಗೃತರಾಗಬೇಕು ಹಾಗೂ ತಮ್ಮ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಈ ವೇಳೆ ರಾಜಸ್ಥಾನದ 'ಸದ್ಗುರು' ಪತ್ರಿಕೆ ಮತ್ತು ವೆಬ್ ಪೋರ್ಟಲ್‌ನ ಸಂಪಾದಕ ವಿಜಯ ಸಿಂಹ ಇವರು ಮಾತನಾಡಿ, ಅಜ್ಮೇರ್ ಅತ್ಯಾಚಾರ ಪ್ರಕರಣದಲ್ಲಿ 200 ಕ್ಕೂ ಹೆಚ್ಚು ಹಿಂದೂ ಹುಡುಗಿಯರ ಮೇಲೆ ಅತ್ಯಾಚಾರ ಮಾಡಿದ ನಂತರವೂ ಅನೇಕ ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು. ಇದಕ್ಕೆ ಅಂತಿಮವಾಗಿ ಏನಾಯಿತು ಎಂದು ಆ ಸಮಯದಲ್ಲಿಯೂ ತಿಳಿಯಲಿಲ್ಲ ಮತ್ತು ಇಂದಿಗೂ ಇನ್ನೂ ಸಾರ್ವಜನಿಕರಿಗೆ ತಿಳಿದಿಲ್ಲ. ಆ ಸಮಯದಲ್ಲಿ ಸೀಮಿತ ಸಂಖ್ಯೆಯ ಪತ್ರಿಕೆಗಳು ಅದರ ಬಗ್ಗೆ ಸುದ್ದಿಗಳನ್ನು ಮುದ್ರಿಸಿದ್ದವು, ಆದ್ದರಿಂದ ಈ ವಿಷಯವು ಬೆಳಕಿಗೆ ಬಂದಿತು. ‘ಅಜ್ಮೇರ್ 92’ ಸಿನಿಮಾ ರಿಲೀಸ್ ಆದ ನಂತರ ಮುಂದಿನ ಪೀಳಿಗೆಗೂ ಹಿಂದೂ ಹುಡುಗಿಯರ ಮೇಲೆ ದೌರ್ಜನ್ಯ ನಡೆದಿದ್ದು ಗೊತ್ತಾಗುತ್ತದೆ. ಇಂದು ಅಜ್ಮೀರ್ ದರ್ಗಾಗೆ ಸಂಬಂಧಿಸಿದವರನ್ನು ಪವಿತ್ರವೆಂದು ಪರಿಗಣಿಸಲಾಗಿದೆ, ಅವರೇ 'ಅಜ್ಮೇರ್ ಅತ್ಯಾಚಾರ ಘಟನೆ'ಯ ಪಾಪಗಳನ್ನು ಮಾಡಿದವರು. ಅನೇಕ ಹಿಂದೂಗಳು ಇಂದು ಅಜ್ಮೇರ್ ದರ್ಗಾಕ್ಕೆ ಶ್ರದ್ಧೆಯಿಂದ ಹೋಗುತ್ತಿದ್ದಾರೆ. ಈಗ ಹಿಂದೂಗಳು ಏನು ಮಾಡಬೇಕೆಂದು ಸ್ವತಃ ನಿರ್ಧರಿಸಬೇಕು ಎಂದು ಹೇಳಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ