ಅಮರ ಬಾಪು ಚಿಂತನ ಪತ್ರಿಕೆಗೆ 'ದಿ.ಡಾ. ನಾಡಿಗ ಕೃಷ್ಣಮೂರ್ತಿ ಪತ್ರಿಕೋದ್ಯಮ ಪ್ರಶಸ್ತಿ' ಪ್ರದಾನ

Upayuktha
0

ತುಮಕೂರು: ತುಮಕೂರಿನ ಕವಿತಾ ಕೃಷ್ಣ ಸಾಹಿತ್ಯ ಮಂದಿರ,  ನಾಡಿಗ್ ಸಾಹಿತ್ಯ ಪ್ರತಿಷ್ಠಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ 'ರಾಜ್ಯಮಟ್ಟದ 2022ನೇ ಸಾಲಿನ ದಿ. ಡಾ. ನಾಡಿಗ್ ಕೃಷ್ಣಮೂರ್ತಿ ಪತ್ರಿಕೋದ್ಯಮ ಪ್ರಶಸ್ತಿ'ಯನ್ನು ಬೆಂಗಳೂರಿನ 'ಅಮರ ಬಾಪು ಚಿಂತನ' ಪತ್ರಿಕೆಯ ಸಂಪಾದಕರಾದ ಜೀರಿಗೆ ಲೋಕೇಶ್ ಅವರ ಪರವಾಗಿ ಸಂಪಾದಕೀಯ ವಿಭಾಗದ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಹಾಗೂ ಸುಮ ಚಂದ್ರಶೇಖರ್ ರವರು ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷ ಎಂ. ಎನ್. ಸುಂದರ್ ರಾಜ್ ರವರಿಂದ ಸ್ವೀಕರಿಸಿದರು. ತುಮಕೂರಿನ ಅಮರ ಸಂದೇಶ ದಿನಪತ್ರಿಕೆಯ ತೊಗ ಅಡವಿಷಪ್ಪರವರು  ಪ್ರಶಸ್ತಿಗೆ ಭಾಜನರಾದರು. 


ಇದೇ ಸಂದರ್ಭದಲ್ಲಿ ಡಾ. ಪ್ರಕಾಶ್ ಕೆ ನಾಡಿಗ್ ಸಂಪಾದಿತ ಡಾ. ಕವಿತಾಕೃಷ್ಣ ರವರ 'ಕನ್ನಡ ಗೇಯ ಗೀತೆಗಳು' ಮತ್ತು 'ಆಯುರಾರೋಗ್ಯ' ಕೃತಿಯನ್ನು ಲೇಖಕ ಡಾ. ಆರ್ ವಾದಿರಾಜು ಬಿಡುಗಡೆಗೊಳಿಸಿದರು;  ಹಿರಿಯ ಸಾಹಿತಿ ಜಿ.ಕೆ ಕುಲಕರ್ಣಿ ಕೃತಿ ಪರಿಚಯ ಮಾಡಿದರು .ಧರ್ಮಾಧಿಕಾರಿ ಎ. ಆರ್. ಚಿಕ್ಕರಂಗಯ್ಯ, ಗುರುಸಿದ್ದಪ್ಪ ,ನಾಗರಾಜ್ ಎಂ ಎಸ್ ,ಡಾ ಸಮತ ಎಸ್ ,ಈ ಲೇಪಾಕ್ಷಿಯ ರವರನ್ನು ಬಾಪೂಜಿ ಶಿಕ್ಷಣ ಸಂಸ್ಥೆಯ ಎಂ. ಬಸವಯ್ಯ ಹಾಗೂ ಹಿರಿಯ ಸಾಹಿತಿ ಎಂ .ವಿ ನಾಗರಾಜ ರಾವ್ ಸನ್ಮಾನಿಸಿದರು .ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷ ಕೆ. ಎಸ್ . ಸಿದ್ದಲಿಂಗಪ್ಪ ಲೇಖಕರಾದ ಪ್ರಮೋದ್ ಕುಲಕರ್ಣಿ  ಮತ್ತು ಡಾ.ಭರತ್ ರಾಜ್ ರವರಿಗೆ 'ವಿದ್ಯಾವಾಚಸ್ಪತಿ ಡಾ. ಕವಿತಾ ಕೃಷ್ಣ ಸಾಹಿತ್ಯ ಪ್ರಶಸ್ತಿ' ಯನ್ನು ನೀಡಿ ಗೌರವಿಸಿದರು.


 

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ಕವಿತಾಕೃಷ್ಣರವರು ಯುವಜನರಲ್ಲಿ ನಶಿಸುತ್ತಿರುವ ನೈತಿಕ ಮೌಲ್ಯಗಳ ಪುನರುತ್ಥಾನದಲ್ಲಿ ಇಂತಹ ಸಾಂಸ್ಕೃತಿಕ; ಸಾಹಿತ್ಯಕ ಸೇವಾ ಚಟುವಟಿಕೆಗಳು ಮಾದರಿ ಎನಿಸಿದೆ ಹಾಗೂ ಕರ್ನಾಟಕ ಪತ್ರಿಕಾ ಅಕಾಡೆಮಿ ಸ್ಥಾಪಿಸಲು ಕಾರಣಕರ್ತರಾಗಿ,  ಧ್ಯೇಯನಿಷ್ಠ ಪತ್ರಕರ್ತರಾಗಿ ಹೆಸರಲ್ಲಿ ನೀಡುವ  ಡಾ. ನಾಡಿಗ್ ಕೃಷ್ಣಮೂರ್ತಿ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿರುವ ಅಮರ ಬಾಪು ಚಿಂತನ  ಪತ್ರಿಕೆ ಗಾಂಧಿ ವಿಚಾರಧಾರೆಗಳನ್ನು ಯುವ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಳೆದೊಂದು ದಶಕದಿಂದ  ಪ್ರಕಟಿಸುತ್ತಿರುವುದು ಶ್ಲಾಘನೀಯ  ಎಂದು ಅಭಿಪ್ರಾಯಪಟ್ಟರು . ಅಶ್ವಿನಿ ಪಿ ನಾಡಿಗ್ ಕಾರ್ಯಕ್ರಮ ನಿರ್ವಹಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top