ಬೆಂಗಳೂರು: ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯ, ಬಸವನಗುಡಿ, ಇಲ್ಲಿ ಜುಲೈ 27 ಹಾಗೂ 28ರಂದು, ಅಂತರ ಕಾಲೇಜು ಸಾಂಸ್ಕೃತಿಕ ಹಬ್ಬ ‘ಕಲಾಪರ್ವ್’ ಅನ್ನು ಆಯೋಜಿಸಲಾಗಿತ್ತು.
27 ಜುಲೈ ಗುರುವಾರದಂದು ರಾಜ್ ಬಿ ಶೆಟ್ಟಿರವರು ತಮ್ಮ 'ಟೋಬಿ' ಚಲನಚಿತ್ರ ತಂಡದವರೊಂದಿಗೆ ಆಗಮಿಸಿ, ಸಾಂಸ್ಕೃತಿಕ ಹಬ್ಬದ ಶೀರ್ಷಿಕೆಯನ್ನು ಅನಾವರಣಗೊಳಿಸಿಸುತ್ತ ಮಾತನಾಡಿ, ‘ಹೆಣ್ಣುಮಕ್ಕಳೇ ಈ ಕಾರ್ಯಕ್ರಮದ ಆಯೋಜನೆ ಹಾಗೂ ನಿರ್ವಹಣೆಯು ಅದ್ಭುತವಾಗಿದ್ದು, ಕಲೆಯು ಹಬ್ಬವಾಗಿ ಆಚರಿಸಬೇಕು, ಆಗಲೇ ಜೀವನ ಕೂಡ ಹಬ್ಬವಾಗುತ್ತದೆ. ಹಾಗಾಗಿ 'ಕಲಾಪರ್ವ್' ಎಂಬ ಶೀರ್ಷಿಕೆಯು ಈ ಆಶಯವನ್ನು ಹೊತ್ತಿದೆ. ಈ ವಯಸ್ಸು ಮತ್ತು ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುತ್ತಾ, ವಿದ್ಯಾರ್ಥಿ ಜೀವನವನ್ನು ಪೂರ್ಣವಾಗಿ ಜೀವಿಸಿ’ ಎಂದರು.
ಚಿತ್ರದ ನಟಿ ಚೈತ್ರ ಜೆ. ಆಚಾರ್ 'ಸೋಜುಗಾದ ಸೂಜುಮಲ್ಲಿಗೆ' ಗೀತೆಯನ್ನು ಹಾಡುತ್ತ ವಿದ್ಯಾರ್ಥಿನಿಯರನ್ನು ಮನರಂಜಿಸಿದರು. ನಂತರ, ಡಿಜೆ ಹ್ಯಾರಿಯವರಿಂದ ವಿದ್ಯಾರ್ಥಿಗಳಿಗಾಗಿ ಡಿಜೆ ಕಾರ್ಯಕ್ರಮ ನಡೆಯಿತು.
ಸಂಜೆ ಕಾರ್ಯಕ್ರಮದ ಅಧಿಕೃತ ಉದ್ಘಾಟನಾ ಸಮಾರಂಭದಲ್ಲಿ ಚಲನಚಿತ್ರ ನಟಿಯಾದ ಅರ್ಚನ ಕೊಟ್ಟಿಗೆಯವರು, ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯದ ಅಧ್ಯಕ್ಷರಾದ ಡಾ. ಬಿ.ಎಸ್. ರಾಗಿಣಿ ನಾರಾಯಣ್ರವರು, ಬಿ.ಎಂ.ಎಸ್. ಶಿಕ್ಷಣ ದತ್ತಿಯ ಆಜೀವನ ಧರ್ಮದರ್ಶಿಗಳಾದ ಡಾ. ಪಿ. ದಯಾನಂದ ಪೈರವರು, ಬಿ.ಎಂ.ಎಸ್. ಶಿಕ್ಷಣ ದತ್ತಿಯ ಧರ್ಮದರ್ಶಿಗಳಾದ ಅವಿರಾಮ್ ಶರ್ಮಾರವರು ಹಾಗೂ ರವಿ ವೆಂಕಟೇಸಂರವರು, ಬಿಎಂಎಸ್ ಆಸ್ಪತ್ರೆ ದತ್ತಿಯ ಅಧ್ಯಕ್ಷರಾದ ಗೌತಮ್ ವಿ ಕಲತ್ತೂರ್ರವರು, ಬಿಎಂಎಸ್ ಶಿಕ್ಷಣ ದತ್ತಿಯ ಆಡಳಿತ ನಿರ್ದೇಶಕರಾದ ಆರ್.ಎ. ರಾಘವನ್ರವರು, ಬಿಎಂಎಸ್ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಶುಪಾಲರಾದ ಶ್ರೀಮತಿ ಪದ್ಮ ಬಿ, ಬಿಎಂಎಸ್ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಡಿ.ಇ. ವಸುಂಧರರವರು, ಉಪಪ್ರಾಂಶುಪಾಲರಾದ ಶ್ರೀಮತಿ ಎ. ಗಾಯತ್ರಿರವರು, ಡೀನ್ ಅಕ್ಯಾಡೆಮಿಕ್ಸ್ರಾದ ಡಾ. ರೀಟಾ ಭಟ್ಟಾಚಾರ್ಜಿರವರು, ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಳೆದ ವರ್ಷ ರ್ಯಾಂಕ್ ಹಾಗೂ ಅತ್ಯುನ್ನತ ಅಂಕಗಳನ್ನು ಪಡೆದ ವಿದ್ಯಾರ್ಥಿನಿಯರಿಗೆ ದತ್ತಿ ಬಹುಮಾನಗಳನ್ನು ಗಣ್ಯರಿಂದ ನೀಡಲಾಯಿತು.
ಎರಡು ದಿನಗಳ ಅಂತರಕಾಲೇಜು ಕಲಾಹಬ್ಬದಲ್ಲಿ, ಕ್ವಿಜ್, ಕಾಸ್ಪ್ಲೇ, ಗ್ರೂಪ್ ಡ್ಯಾನ್ಸ್, ಸೋಲೋ ಸಿಂಗಿಂಗ್, ಫ್ಯಾಷನ್ ಶೋ, ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಿಸಿದರು.
28 ಜುಲೈ 2023ರಂದು ಖ್ಯಾತ ಸಂಗೀತ ಸಂಯೋಜಕರಾದ ಮಣಿಕಾಂತ್ ಕದ್ರಿ ಮತ್ತು ತಂಡ ಹಾಗೂ ಖ್ಯಾತ ಹಿನ್ನಲೆ ಗಾಯಕಿ ಹಂಸಿಕ ಅಯ್ಯರ್ರವರಿಂದ ಸಂಗೀತ ಸಂಜೆ ನಡೆಯಿತು, ವಿವಿಧ ಬಗೆಯ ಹಾಡುಗಳನ್ನು ಹಾಡಿ ಸಭೆಯನ್ನು ಆಹ್ಲಾದಿಸಿದರು.
ವಿದ್ಯಾಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಬಗೆಯ ಸ್ಟಾಲ್ಗಳು ಹಾಗೂ ಆಕರ್ಷಕ ಬಹುಮಾನಗಳು ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ