ರೇಡಿಯೊ ಮಣಿಪಾಲ್‌ನಲ್ಲಿ ಹುಲಿ ಸಂರಕ್ಷಣಾ ದಿನಾಚರಣೆ

Upayuktha
0

ಮಣಿಪಾಲ: ರೇಡಿಯೊ ಮಣಿಪಾಲ್ (90.4 Mhz) ಸಮುದಾಯ ಬಾನುಲಿ ಕೇಂದ್ರ ಅಂತರಾಷ್ಟ್ರೀಯ ಹುಲಿ ಸಂರಕ್ಷಣಾ ದಿನದ ವಿಶೇಷ ಮಾತುಕತೆಯನ್ನು ಈ ಸಂಜೆ 6ಗಂಟೆಗೆ ಪ್ರಸಾರ ಮಾಡಲಿದೆ. ಈ ಮಾತುಕತೆಯಲ್ಲಿ  ವನ್ಯಜೀವಿ ಸ್ನೇಹಿ ಮತ್ತು ಸಿವಿಲ್ ಎಂಜಿನಿಯರ್ ಆಗಿರುವ ಕೆ.ಹರೀಶ್ ಕುಮಾರ್,ಉಡುಪಿ ಇವರು ಭಾಗವಹಿಸಿ ಹುಲಿ ಸಂರಕ್ಷಣೆಯ ಮಹತ್ವ ಮತ್ತು ಹುಲಿಯ ಕುರಿತಾದ ಸಚಿತ್ರ ವಿವರಣೆಯನ್ನು ನೀಡಲಿದ್ದಾರೆ.


ಜುಲೈ 30 ರಂದು ಮಧ್ಯಾಹ್ನ 2 ಗಂಟೆಗೆ ಇದರ ಮರುಪ್ರಸಾರವಿರುವುದು ಎಂದು ಮಣಿಪಾಲ ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರಾಗಿರುವ ಡಾ.ರಶ್ಮಿ ಅಮ್ಮೆಂಬಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
To Top