ಅಕ್ಷರ ಆರಾಧನೆ-5: ಶ್ರೀಕೃಷ್ಣ ಕೇವಲ ಒಂದು ಹೆಸರಲ್ಲ

Upayuktha
0

ಶ್ರೀಕೃಷ್ಣನು ಅನಂತ ವಿಚಾರಗಳ ಒಂದು ಭಂಡಾರ ನೊಂದವರಿಗೆ, ಬೆಂದವರಿಗೆ, ಮುಕ್ತರಾಗ ಬಯಸುವವರಿಗೆ ಮಾರ್ಗದರ್ಶಕ. ನುಡಿದಂತೆ ನಡೆದು ನಡೆದಂತೆ ನುಡಿದು ದಾರಿ ತೋರಿದ ಒಂದು ಶಕ್ತಿ. 

ಧರ್ಮದಲ್ಲಿ ಶ್ರದ್ಧೆಯಿಂದ ಮುಂದುವರಿಯ ಬಯಸುವವರಿಗೆ ಒಂದು ಪ್ರೇರಣಾ ಶಕ್ತಿ. ಈತನು ಅನೇಕ ಅವತಾರಗಳನ್ನು ತೆಗೆದುಕೊಂಡಿದ್ದಾನೆ. ದಶಾವತಾರಗಳೂ ಈತನದೇ. ಆದರೆ ಕೃಷ್ಣಾವತಾರದಲ್ಲಿ ಭಗವಂತನಾಗಿ ಬ್ರಹ್ಮಜ್ಞಾನಿಯಾಗಿ ಆಪದ್ಭಾಂಧವನಾಗಿ ನಮ್ಮಲ್ಲಿ ಅವನೂ ಒಬ್ಬ ಎನ್ನುವಂತೆ ಕಾಣುತ್ತಾನೆ. ಕೆಲಕಾಲ ಆತ ದೇವ ಎನ್ನುವುದನ್ನೂ ಮರೆಯುತ್ತೇವೆ. 

ಕೃಷ್ಣ ಸಾಮಾನ್ಯರಲ್ಲಿ ಸಾಮಾನ್ಯನಾದ. ತುಂಟಾಟ ಮಾಡುವ ಮುದ್ದು ಮಗನಾದ. ಗೋಪಾಲಕನಾದ, ಗುರುವಿಗೆ ಶಿಷ್ಯನಾದ. ಗೆಳೆಯರಿಗೆ ಗೆಳೆಯನಾದ, ಬಂಧನದಲ್ಲಿದ್ದ ಸಾವಿರಾರು ಕನ್ಯೆಯರಿಗೆ ಪತಿಯಾದ. ಕೃಷ್ಣನು ಯಾವಾಗಲೂ ನ್ಯಾಯಪರ, ದೇಶ, ಭಾಷೆ ಮೀರಿ ಅವನ ಮಹಿಮೆ ತುಂಬಿದೆ. ಧರ್ಮರಕ್ಷಣೆ, ಧರ್ಮವಂತರ ರಕ್ಷಣೆ ಅವನ ಗುರಿಯಾಗಿತ್ತು. ದುಷ್ಟರ ನಾಶ ಅವನ ಹಿರಿಮೆಯಾಗಿತ್ತು. ಕೃಷ್ಣ ಎಲ್ಲರಿಗೂ ಮಾರ್ಗದರ್ಶಕ. ಆಧ್ಯಾತ್ಮಿಕವಾಗಿ ಧಾರ್ಮಿಕವಾಗಿ, ಲೌಕಿಕವಾಗಿ ತತ್ವದರ್ಶನ ಮಾಡಿದ್ದಾನೆ. ಧರ್ಮ ಸ್ಥಾಪನೆಯೇ ಅವನ ಸುರಾಜ್ಯದ ಕಲ್ಪನೆಯಾಗಿತ್ತು. ವೇದ ಸಂಸ್ಕೃತಿಯ ಸಂಪತ್ತು ಆತ ಬೆಳಗಿಸಿದ್ದು. 

ಒಂದೊಮ್ಮೆ ದೊಡ್ಡ ಕಾಳಿಂಗ ಸರ್ಪವೊಂದು ವೃಂದಾವನದೊಳಕ್ಕೆ ಬಂದು ಅದರ ಪಕ್ಕದಲ್ಲೇ ಹರಿಯುವ ಯಮುನಾ ನದಿಯಲ್ಲಿ ವಾಸಿಸತೊಡಗುತ್ತದೆ. ಹಾಗಾಗಿ ನದಿಯ ನೀರು ವಿಷಪೂರಿತವಾಗುತ್ತದೆ. ಇದರಿಂದ ಅಲ್ಲಿನ ಜನರು ಚಿಂತೆಗೀಡಾಗುತ್ತಾರೆ. ಆಗ ಕಾಳಿಂಗನನ್ನು ವಧಿಸಲು ಶ್ರೀಕೃಷ್ಣ ಮುಂದೆ ಬರುತ್ತಾನೆ. ಶ್ರೀಕೃಷ್ಣ ಕಾಳಿಂಗನ ಹೆಡೆಯ ಮೇಲೆ ಹತ್ತಿ. ನರ್ತಿಸಿ ಕಾಳಿಂಗನನ್ನು ಮದವನ್ನು ಹತ್ತಿಕ್ಕುತ್ತಾನೆ. ಅಸುರನನ್ನು ಸಂಹರಿಸುತ್ತಾನೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top