ಅಕ್ಷರ ಆರಾಧನೆ-6: ಒಂದು ಅವತಾರ - ಕಾರ್ಯಗಳು ನೂರಾರು

Upayuktha
0

ಶ್ರೀಕೃಷ್ಣ ಒಂದೇ ಅವತಾರದಲ್ಲಿ ನೂರಾರು ಕಾರ್ಯಗಳನ್ನು ಮಾಡಿದ. ನೂರಾರು ಪ್ರಕಾರದ ಜನರಿಗೆ ನೂರಾರು ರೀತಿಯಿಂದ ಎದುರಾದ. ಕೆಲವರಿಗೆ ಅನುಗ್ರಹಿಸಿದ, ಕೆಲವರಿಗೆ ಸಹಾಯ ಮಾಡಿದ. ಕೆಲವರ ಪ್ರೇಮ ಸಂಪಾದಿಸಿದ. ಕೆಲವರ ಆರ್ಭಟ ಅಡಗಿಸಿದ. ಕೆಲವರಿಗೆ ಮಾರ್ಗದರ್ಶನ ಮಾಡಿದ. ಕೆಲವರ ಅಳಿಸಿದ. ಕೆಲವರ ನಗಿಸಿದ. ಕೆಲವರಿಗೆ ಮುಕ್ತಿ ಕರುಣಿಸಿದ. ಕೆಲವರನ್ನು ನರಕಕ್ಕೆ ದೂಡಿದ! 

ಗೋವುಗಳ ಕಾಯ್ದು ಗೋಪಾಲನಾದ. ಜನರನ್ನೂ ಕಾಯ್ದು ಭೂಪಾಲನಾದ. ಬಯಕೆಯಿಲ್ಲದೇ ಬೇಕಾದುದೆಲ್ಲವನ್ನೂ ತಾನೂ ಪಡೆದು ಇತರರಿಗೂ ಕರುಣಿಸಿದ. ಜ್ಞಾನ ಮತ್ತು ಭಕ್ತಿಯೇ ಯಶಸ್ಸಿನ ಗುರಿ ಎಂದು ತಿಳಿಸಿದ. ಜಟಿಲ ಸಮಸ್ಯೆಗಳನ್ನು ನಗುತ್ತಲೇ ಪರಿಹರಿಸಿದ. ಸ್ಫೂರ್ತಿಗೆಸೆಲೆಯಾದ. ಬಯಸುವವರಿಗೆ ನೆಲೆಯಾದ. ಅರಸೊತ್ತಿಗೆ ಇವನಿಗೊಂದು ಆಟವಾಯಿತು. ಈ ಆಟದಲ್ಲಿ ಅನ್ಯಾಯ ಎಸಗಿದವರಿಗೆ ಸೋಲುಂಟು ಮಾಡಿದ. ಹಿರಿಯರ ಗೌರವಿಸಿದ. ಕಿರಿಯರ ಪ್ರೀತಿಯಿಂದ. ಕೋಪಕ್ಕಾಗಿಯೋ, ಪ್ರೇಮಕ್ಕಾಗಿಯೋ ಎಲ್ಲರ ಮನದಲ್ಲಿ ಗಾಢವಾಗಿ ಉಳಿದ. 

ಅವತಾರದ ಸಮಯದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿ ತೋರಿಸಿದ. ಅಸಾಮಾನ್ಯ ಕಾರ್ಯಗಳನ್ನು ಸಹಜ ರೀತಿಯಲ್ಲೇ ಮಾಡಿ ತೋರಿಸಿದ. ಬಂಧನದಲ್ಲೇ ಹುಟ್ಟಿದ. ಅದನ್ನೇ ಪ್ರೀತಿಸಿದ. ಕೊನೆಗೆ ಬಂಧಮುಕ್ತರಾಗ ಬಯಸುವವರಿಗೆ ದಾರಿದೀಪದಂತಾದ. 

ಜೀವನ ಒಂದು ಕಲೆ. ಅದನ್ನೇ ಬಹುವಿಧವಾಗಿ ಬದಲಾಯಿಸಿ ತೋರಿಸಿದ. ಕಲೆಯು ಕಲೆಯಾಗದಂತೆ ಬಾಳಿಗೆ ಬಲೆಯಾಗದಂತೆ ಸಾಧನೆಯ ದಾರಿಗೆ ಬೆಳಕು ಚೆಲ್ಲಿದ. ಕೆಲವರ ಕಣ್ಣೀರು ಒರೆಸಿದ. ಇನ್ನು ಕೆಲವರ ಅಹಂಕಾರವನ್ನು ಅಳಿಸಿದ. ನಗುವವರನ್ನು ಅಳಿಸಿದ. ಅಳುವವರನ್ನು ನಗಿಸಿದ. ಕೃಷ್ಣನ ಶಕ್ತಿ ಅನಂತ, ಅವನ ವೈಭವವೂ ಅನಂತ. ಅಂತ್ಯವಿಲ್ಲದ ದುಷ್ಟರಿಗೆ ಅಂತ್ಯವನ್ನು ತೋರಿಸಿದ. ಸಂತರಿಗೆ ಸಂತಸವನ್ನೂ ತಂದ. ಬಾಳೊಂದು ಪೂರ್ಣ. ಅಪೂರ್ಣವಾದುದನ್ನು ಪೂರ್ಣಗೊಳಿಸಿದ. 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top