|| ಬಹುರೂಪಾಂತರ್ಗತ ಶ್ರೀ ಶ್ರೀಶಾಯ ನಮಃ ||
ಶ್ರೀಕೃಷ್ಣನು ತನ್ನ ಅವತಾರದ ಪೂರ್ಣ ಕಾಲವನ್ನು ಧರ್ಮ ರಕ್ಷಣೆಗಾಗಿಯೇ ಮೀಸಲಿಟ್ಟನು ಬಾಲ್ಯದಿಂದಲೇ ದುಷ್ಟರ ಸಂಹಾರಕ್ಕೆ ಸಿದ್ಧನಾದನು. ವಿಷ ಪೂರಿತ ಹಾಲನ್ನು ಕುಡಿಸಿ ಸಾಯಿ ಸಲು ಬಂದ ಪೂತನಿ ಎಂಬ ರಕ್ಕಸಿಯನ್ನು ಕೃಷ್ಣ ಸಂಹಾರ ಮಾಡಿದ. ಶಕಟ ಎಂಬ ಅಸುರ ನನ್ನು ಸಂಹಾರ ಮಾಡಿದ. ಗಾಳಿರೂಪದಿಂದ ಬಂದ ತೃಣಾಸುರನನ್ನು ಸಂಹಾರ ಮಾಡಿದನು.
ದುಷ್ಟ ಸಂಹಾರದ ಜೊತೆ ಜೊತೆ ಅನುಗ್ರಹಿಸಿದ ಕಾರ್ಯವನ್ನೂ ಮಾಡಿದನು ಶ್ರೀಕೃಷ್ಣ. ಮರಗಳಾಗಿದ್ದ ನಳಕೂಬರ ಮತ್ತು ಮಣೀಗ್ರೀವರ ಶಾಪವನ್ನು ವಿಮೋಚನೆ ಮಾಡಿದನು. ಕಾಳಿಂದಿ ಮಡುವಿಗೆ ಬಂದು ಅಲ್ಲಿ ತೊಂದರೆಯನ್ನು ಕೊಡುತ್ತಿದ್ದ ಕಾಲಯ ಎಂಬ ಸರ್ಪ ವನ್ನು ಮರ್ದನ ಮಾಡಿದನು. ಗೋಪಾಲರ ವೇಷದಲ್ಲಿ ಬಂದ ಪ್ರಲಂಬ ಎಂಬ ದೈತ್ಯ ನನ್ನು ಸಂಹಾರ ಮಾಡಿದನು. ದಾವಾಗ್ನಿಯಿಂದ ಅಮಾಯಕ ಹಸುಗಳನ್ನು ರಕ್ಷಣೆ ಮಾಡಿದನು.
ಇಂದ್ರನ ಕೋಪಕ್ಕೆ ಗೋಪಾಲಕರು ಬಲಿಯಾದಾಗ ಗೋವರ್ಧನ ಬೆಟ್ಟವನ್ನೇ ಎತ್ತಿ ಅವರನ್ನು ರಕ್ಷಿಸಿದ. ಇಂದ್ರನ ಗರ್ವ ಭಂಗವೂ ಆಯಿತು.
ಗೋಪಾಲಕರಿಗೆ ಯಮುನೆಯಲ್ಲಿಯೇ ಕೃಷ್ಣನು ವೈಕುಂಠವನ್ನೇ ತೋರಿಸಿ ಅನುಗ್ರಹಿಸಿದನು. ಗೋಪಿಯರ ಗರ್ವ ನಾಶಮಾಡಿದ. ಶಂಖಚೂಡ ಎಂಬ ಅರಿಷ್ಟ ಎಂಬ ದೈತ್ಯನನ್ನು ಸಂಹಾರ ಮಾಡಿದನು. ಶ್ರೀಕೃಷ್ಣ. ಅಕ್ರೂರನಿಗೆ ತನ್ನ ದಿವ್ಯರೂಪವನ್ನು ತೋರಿಸಿದನು. ಕುಬ್ಜಳಾದ ಪಿಂಗಳೆಯೆಂಬುವಳು ಗಂಧವನ್ನು ಅರ್ಪಿಸಿದಾಗ ಕೃಷ್ಣನು ಪ್ರತಿಯಾಗಿ ಅವಳ ಕುಬ್ಜದೇಹವನ್ನು ಸರಿಮಾಡಿ ಹೆಚ್ಚು ಸುಂದರಿಯಾಗಿ ಕಾಣುವಂತೆ ತಂದನು. ಉಗ್ರಸೇನನಿಗೆ ರಾಜ್ಯದ ಪಟ್ಟ ಕಟ್ಟಿದನು.
ಶ್ರೀಕೃಷ್ಣನು ಮುಚಕುಂದನಿಗೆ ದರ್ಶನವನ್ನು ಕೊಟ್ಟು ಅವನಿಂದಲೇ ಕಾಲಯವನ ಎಂಬ ದೈತ್ಯನನ್ನು ಸಂಹಾರ ಮಾಡಿಸಿದನು. ಹೀಗೆ ಕೃಷ್ಣನು ಅನೇಕ ಸಮಾಜಮುಖೀ ಕಾರ್ಯಗಳನ್ನು ಮಾಡಿ ದುಷ್ಟ ನಿಗ್ರಹ ಶಿಷ್ಟರ ಪಾಲನೆಯನ್ನು ಮಾಡಿದನು.
ಶ್ರೀಕೃಷ್ಣನಿಗೆ ಬೆಣ್ಣೆ ಎಂದರೆ ಬಹಳ ಇಷ್ಟ. ಗೆಳೆಯರೊಂದಿಗೆ ಸೇರಿಕೊಂಡು, ಮನೆಮನೆಗೆ ಹೋಗಿ ಬೆಣ್ಣೆ ಕದ್ದು ಮೆಲ್ಲುತ್ತಿದ್ದ. ಯಶೋದೆ ಬೆಣ್ಣೆ ಗಡಿಗೆಗಳನ್ನು ಎತ್ತರದಲ್ಲಿ ನೇತು ಹಾಕಿರುತ್ತಿದ್ದಳು. ಆದರೂ ಗೆಳೆಯರ ನೆರವಿನೊಂದಿಗೆ ಗಡಿಗೆಯಲ್ಲಿದ್ದ ಬೆಣ್ಣೆಯನ್ನು ಖಾಲಿ ಮಾಡುತ್ತಿದ್ದ ತುಂಟ ಕೃಷ್ಣ. ಒಂದು ದಿನ ಯಶೋದೆ ಯಾವುದೋ ಕಾರಣಕ್ಕೆ ಹೊರಗೆ ಹೋಗಿದ್ದಳು. ಆಗ ಶ್ರೀಕೃಷ್ಣ ಎಲ್ಲ ಸ್ನೇಹಿತರನ್ನು ಒಟ್ಟುಗೂಡಿಸಿ ಗಡಿಗೆಯಲ್ಲಿದ್ದ ಬೆಣ್ಣೆ ಕದ್ದು ತಿನ್ನುತ್ತಿದ್ದರು. ಅಷ್ಟರಾಗಲೇ ಯಶೋದೆ ಅಲ್ಲಿಗೆ ಬರುತ್ತಾಳೆ. ಆದರೆ ಶ್ರೀಕೃಷ್ಣನಿಗೆ ಅದು ತಿಳಿಯುವುದಿಲ್ಲ. ಎಲ್ಲರೂ ಓಡಿ ಹೋಗಿ ತಪ್ಪಿಸಿ ಕೊಳ್ಳುತ್ತಾರೆ. ಶ್ರೀಕೃಷ್ಣನ ತುಂಟಾಟಕ್ಕೆ ಯಶೋದೆ ಸೋತು ಹೋಗುತ್ತಾಳೆ. ಅವನ ತುಂಟಾಟದಿಂದ ತಪ್ಪಿಸಿಕೊಳ್ಳಲು ಮುದ್ದುಕೃಷ್ಣನನ್ನು ಹಗ್ಗದಲ್ಲಿ ಕಟ್ಟಿಬಿಡುತ್ತಾಳೆ. ಆದರೂ ಅದನ್ನು ಬಿಡಿಸಿಕೊಂಡು ಓಡಿಹೋಗುತ್ತಾನೆ ಮುದ್ದುಕೃಷ್ಣ.
ದುಷ್ಟತನವನ್ನು ನಿಗ್ರಹಿಸಿ ಸಾಧುಗಳನ್ನು ಸಂರಕ್ಷಿ ಸುವ ಉದ್ದೇಶದೊಂದಿಗೆ ತಾನು ಕಾಲಕಾಲಕ್ಕೆ ಹುಟ್ಟಿಬರುತ್ತೇನೆ ಎನ್ನವುದಾತನ ವಚನ. ದುಷ್ಟತನ ಏನಾಗುತ್ತದೋ, ಯಾವ ಮಟ್ಟಿಗೆ ಅದು ವಿಜೃಂ ಭಿಸುತ್ತದೋ, ಅದನ್ನು ನಿಗ್ರಹಿಸಬೇಕೆಂದು ವಿಧಿಗೆ ಯಾವಾಗ ಅನ್ನಿಸುತ್ತದೋ, ಅದಾವುದೂ ನಮಗೆ ಬೇಡದ ಸಂಗತಿ. ಬದಲಿಗೆ ಸಾಧುಗಳಾಗುವತ್ತ, ಅರ್ಥಾತ್ ಸಜ್ಜನರಾಗುವತ್ತ ನಮ್ಮಷ್ಟಕ್ಕೆ ನಾವು ಹೆಜ್ಜೆಯಿಡೋಣ. ಹಾಗೆ ಮಾಡಿದಾಗ ತನ್ನ ವಚನದಂತೆಯೇ ನಮ್ಮನ್ನು ಸಂರಕ್ಷಿಸುವ ಜವಾಬ್ದಾರಿ ಯನ್ನು ಶ್ರೀಕೃಷ್ಣ ಹೊರಲೇಬೇಕಾಗುತ್ತದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ