ಯುವಜನತೆಯ ಕಣ್ತೆರೆಸಿ, ಒಳಿತಿನೆಡೆಗೆ ಸಾಗಿಸುವ ಸಿನಿಮಾ - "ಪಥ"

Upayuktha
0

 


ಸಿನಿಮಾ ಅಂದ ತಕ್ಷಣ ನಮ್ಮೆಲ್ಲರಲ್ಲೂ ಅದೇನೋ ಪುಳಕ. ಅದರಲ್ಲೂ ಕನ್ನಡ ಸಿನಿಮಾ ಎಂದರೆ ಕುಣಿಯದ ಕನ್ನಡಿಗರೇ ಇರಲು ಸಾಧ್ಯವಿಲ್ಲ. ನಮ್ಮನ್ನು ಮಾಯಾ ಲೋಕಕ್ಕೆ ಕರೆದುಕೊಂಡು ಹೋಗುವ ಅದ್ಭುತ ಶಕ್ತಿ ಇವುಗಳಿಗಿವೆ. ಹೀಗೆ ಜನಮಾನಸಗಳಲ್ಲಿ ಎಂದೆಂದಿಗೂ ನೆಲೆಯೂರುವ ಸಿನಿಮಾಗಳಲ್ಲಿ ನಮ್ಮೆಲ್ಲರನ್ನೂ ಒಳಿತಿನೆಡೆಗೆ ಸಾಗಿಸುವ ಪಥ ಎನ್ನುವ ಕಿರುಚಿತ್ರ ಕೂಡಾ ಒಂದು ಎಂದರೆ ಖಂಡಿತವಾಗಿಯೂ ಅತಿಶಯೋಕ್ತಿ ಅನಿಸದು. ಯುವಜನತೆಯನ್ನು ಕೆಡುಕಿನಿಂದ ಒಳಿತಿನೆಡೆಗೆ ಕೊಂಡೊಯ್ದು, ಅವರನ್ನು ದೇಶದ ಆಸ್ತಿಯನ್ನಾಗಿ ಮಾಡುವ ಸಾಹಸಕ್ಕೆ ಪಥ  ಕಿರುಚಿತ್ರ ಕೈ ಹಾಕಿದೆ.

          

ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಾದ ಅಚಲ್ ಉಬರಡ್ಕರವರ ನಿರ್ದೇಶನ, ಯೋಶಿತ್ ಬನ್ನೂರ್ ರವರ ಛಾಯಾಗ್ರಹಣದೊಂದಿಗೆ ಈ ಚಿತ್ರವು ಅದ್ಭುತವಾಗಿ ಮೂಡಿಬಂದಿದೆ. ನಮನ್ ಶೆಟ್ಟಿ ಸಂಕಲನ ಮಾಡಿದ್ದು, ಅಶ್ವಿನ್ ಬಾಬಣ್ಣ ಪಥ ಕಿರುಚಿತ್ರದ ಸಂಗೀತ ನಿರ್ದೇಶನ ವನ್ನು ನೆರವೇರಿಸಿದ್ದಾರೆ. ಇನ್ನು ಈ ಸಿನಿಮಾದ ಅಭಿನಯದ ಕುರಿತು ಹೇಳುವುದಾದರೆ ನಾಯಕ ಪಾತ್ರದಲ್ಲಿ ಅಚಲ್ ಉಬರಡ್ಕ  ಹಾಗೂ ನಾಯಕಿ ಪಾತ್ರದಲ್ಲಿ ವಿಶ್ರಿತ ಆಚಾರ್ಯರವರು ಮಿಂಚಿದ್ದಾರೆ. ಶರತ್ ಕೆ ಎನ್, ಅರಹಂತ್ ಜೈನ್, ಮಂಜುನಾಥ್ ಜೋಡುಕಲ್ಲು, ಗಗನ್ ದೀಪ್ ಮುಂತಾದವರು ಅಭಿನಯಿಸಿದ್ದಾರೆ.

          

ಸಾಮಾಜಿಕ ಕಳಕಳಿಯಿಂದ ಕೂಡಿರುವ ಪಥ ಕಿರುಚಿತ್ರ ವಿದ್ಯಾರ್ಥಿಗಳನ್ನು ಕತ್ತಲಿಂದ ಬೆಳಕಿನೆಡೆಗೆ ಕರೆದೊಯ್ಯುವುದರ ಅವಶ್ಯಕತೆಯನ್ನು ವಿವರಿಸುತ್ತದೆ. ದುಶ್ಚಟಗಳಿಂದ ದೂರವಾಗಬೇಕು ಹಾಗೂ ಹೆಲ್ಮೆಟ್ ಧರಿಸಿ ವಾಹನ ಸವಾರಿಮಾಡಬೇಕು ಎನ್ನುವ ಸಂದೇಶವನ್ನು ಈ ಸಿನಿಮಾವು ಒಳಗೊಂಡಿದೆ. ಇದರಲ್ಲಿ ಬರುವ ಎಲ್ಲಾ ಪಾತ್ರಧಾರಿಗಳ ಅಭಿನಯ ಅದ್ಭುತವಾಗಿದ್ದವು. ಅದರಲ್ಲೂ ನಾಯಕ ಪಾತ್ರಕ್ಕೆ ಬಣ್ಣ ಹಚ್ಚಿದ ಅಚಲ್ ಉಬರಡ್ಕರವರ ಅಭಿನಯ ಎಂಥವರಿಗೂ ಅಚ್ಚರಿ ಮೂಡಿಸುವಂತದ್ದು. ಒಂದು ಸಿನಿಮಾ ಅದ್ಭುತವಾಗಿ ಮೂಡಿಬರಲು ಅದರ ಛಾಯಾಗ್ರಹಣ ಕೂಡ ಮುಖ್ಯ. ಪಥ ಸಿನಿಮಾದ ಛಾಯಾಗ್ರಹಣವು ಪ್ರತಿಯೊಬ್ಬರ ಮನ ಮುಟ್ಟುವಂತಿದೆ.

          

ಅಚಲ್ ಉಬರಡ್ಕ ರಂತಹ ಅಭಿನಯ ಪ್ರತಿಭೆಗಳು, ಯೋಶಿತ್ ಬನ್ನೂರ್ ರವರಂತಹ ಉತ್ತಮ ಛಾಯಾಗ್ರಾಹಕರು ಕನ್ನಡ ಚಿತ್ರ ರಂಗಕ್ಕೆ ಒಂದು ಕೊಡುಗೆಯೇ ಸರಿ. ಪಥ ಕಿರುಚಿತ್ರ ಅದ್ಭುತವಾದ ಯಶಸ್ಸು ಕಾಣಲಿ. ಹಾಗೆಯೇ ಇಂತಹ ಸಾಮಾಜಿಕ ಕಾಳಜಿಯುಳ್ಳ ಚಿತ್ರಗಳು ಕನ್ನಡದಲ್ಲಿ ಇನ್ನಷ್ಟು ಹುಟ್ಟಿ, ರಾರಾಜಿಸುತ್ತಿರಲಿ.


ಸಂಶೀನ ಸೂರ್ಯ,

ಪ್ರಥಮ ಪತ್ರಿಕೋದ್ಯಮ,

ವಿವೇಕಾನಂದ ಕಾಲೇಜು.                                                                    

                                                                                               

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top