some (ಸಂ) ಬಂಧಗಳ ಮಮಕಾರ...

Upayuktha
0


ನ ಮರ್ಕಟ ಹುಚ್ಚು ಕುದುರೆಯಂತೆ ಲಗಾಮಿಲ್ಲದೆ ಓಡುತ್ತಿರುತ್ತದೆ.  ಮನಸ್ಸನ್ನು ತಹಬದಿಯಲ್ಲಿಡಲು ದುಃಸ್ಸಾಹಸ ಮಾಡಲೇಬೇಕು.  ನೋಡಿದ್ದು ಕಂಡಿದ್ದು ನನ್ನದೆಂಬ ಅಹಂಭಾವ ಮಿಕ್ಕೆಲ್ಲವನ್ನು ಮರೆಸಿ ಕುರುಡಾಗಿಸುತ್ತದೆ.


ನಮ್ಮೆಲ್ಲರ ಸಹಜ ಧರ್ಮವೆಂದರೆ ನಮಗೆ ಹತ್ತಿರವಾದವರೆಲ್ಲ ನಮ್ಮವರೆಂಬ ಭಾವನೆ.  ಮಾತಿನ ಶೂಲದಿಂದ ತಿವಿದಾಗಲೇ ಅಂತರಂಗದ ಘಾಸಿಯ ಅರಿವಾಗುವುದು.  ಅವರಲ್ಲಾಗುವ ನಡುವಳಿಕೆಯ ಬದಲಾವಣೆ ಮಾತಿನ ಧಾಟಿ ಹಂಗಿಸುವ  ನಾಟಕೀಯ ವ್ಯಂಗ್ಯ ಭಾವಗಳು ಹೊರಬಂದಾಗ ಒಮ್ಮೆಲೆ ದಂಗಾಗುವುದು ಸಹಜ..ವ್ಯಕ್ತಿತ್ವದ ಅರಿವಾಗುವಷ್ಟರಲ್ಲಿ ಅವರ ಮಾತಿನ‌ ಮೋಡಿಯ ಬೆಂಕಿಯಲ್ಲಿ ಸುಡುತ್ತಿರುತ್ತೇವೆ..


ಯಾವ ಸಂಬಂಧಗಳ ಆಳಕ್ಕೆ ಸಾಗುವ ಮೊದಲು ಒರೆ ಹಚ್ಚಿ ನೋಡಬೇಕಾದ ಪರಿಸ್ಥಿತಿ ಉಂಟಾಗಿದೆ.  ಅಂತರಂಗದ ಕುಹಕಕ್ಕೆ ಬಹಿರಂಗದ ವೇಷ ಅಸಹನೀಯ.  ಮಾನವೀಯತೆಯ ತೊಟ್ಟಿಲು ಉಯ್ಯಾಲೆಯಂತೆ ತೂಗುತ್ತ ನೆಲಕ್ಕೆ ಕಚ್ಚದಂತೆ ಮಾಡದಿರೆ ಭದ್ರವಾಗಿ ಜೀಕಾಡಿದರೆ ಸಾಕು..


ನೂರೆಂಟು ಕನಸುಗಳ ಒಡಲಲ್ಲಿ ಆಸೆಯ ಬೀಜ ಚಿಗುರಿ ಭವಿಷ್ಯದ ಆಸರೆಯೆಂಬ ಮರಕ್ಕೆ ಬಲವಾದ ಕೊಡಲಿಯ ಪೆಟ್ಟು ತಾಳಲಾದೀತೇ..

ಮಮತೆ ವಾತ್ಸಲ್ಯಗಳ ಚಿವುಟಿ ತಮ್ಮತನವ ಮರೆತು ಅಂಧಕಾರದ ಗೂಡಲ್ಲಿ ಅಡಗಿದವರಿಗೆ ಬೆಳಕ ಕಿಂಡಿ ಕಾಣುವ ಬಗೆ ತಮ್ಮ ವೈದ್ದಾಪ್ಯದಲ್ಲಷ್ಟೆ.  ಯಥಾ ರಾಜ ತಥಾ ಪ್ರಜಾ.‌.


ಒಲುಮೆಯ ಪೊರೆಯಲ್ಲಿ ಜಗವ ಮರೆತ ಜೋಡಿಗೆ ನೈಜತೆಯ ಅರಿವು ಪೊರೆ ಕಳಚಿದಾಗಲೇ.. ಸತ್ಯಾಸತ್ಯಗಳ ಪರದೆ ಸರಿದು ಬಾಳ‌ನೌಕೆ  ಚಲಿಸಿದಾಗ ಮಾತ್ರ ಸಾಧ್ಯ. ಹೊಂದಾಣಿಕೆಯ ಸಮಸ್ಯೆ ಎರಡು ಮನೆ ಮನಗಳ ಬಿರುಕಿಗೆ ನಾಂದಿಯಷ್ಟೆ. 


ಗೆಳೆತನದ ನಿಷ್ಕಲ್ಮಶ ಬಾಂಧವ್ಯಕ್ಕೆ ಅನುಮಾನದ ತೆರೆ ಮುಚ್ಚಿ ವೈಶಾಲ್ಯತೆಯ ಕದ ಸದಾ ತೆರೆದಿದ್ದರೆ ಹಚ್ಚಹಸಿರ ನಂದನವನವಿದ್ದಂತೆ.  ಎಂತಹ ಸಂದರ್ಭದಲ್ಲೂ ನೈರ್ಮಲ್ಯ ತೆಯ ಸಹಕಾರ ಆಶ್ವಾಸನೆಯಿದ್ದಲ್ಲಿ ಸ್ನೇಹಲೋಕದ ಸಿಂಚನವೇ ಸುಮಧುರ..


 ಯಾವುದೇ ಬಂಧಕ್ಕೆ ತನ್ನದೇ ಆದ ಬಿಗಿತ ಬದ್ರವಾದ ಕೋಟೆಯಿರಬೇಕು.  ತೂಗಿಸಿ ನಡೆಸುವ ಛಲದೊಡನೆ ಆತ್ಮತೃಪ್ತಿ ಆತ್ಮ ವಿಶ್ವಾಸದ ಸಾಮರಸ್ಯ ಅತಿ ಮುಖ್ಯ. ಸಮತೋಲನದಲ್ಲಿ ಏರುಪೇರಾದರೂ ಜಾಣ್ಮೆಯಿಂದ ಸಂಭಾಳಿಸುವ ಕಲೆ ತಿಳಿದಿದ್ದರೆ ಸೂಕ್ತ. ಆಲಿಸುವುದು ಸುಲಭ ಪಾಲಿಸುವುದು ಅಸಾಧ್ಯವಲ್ಲವೇ..

ಸಂಬಂಧಗಳ ಆಳ ಇದೇ ಅಲ್ಲವೇ.. ಅರಿತು ಎಚ್ಚರಿಕೆಯಿಂದ ಸಾಗಬೇಕಷ್ಟೇ..


-ಶ್ರೀ..

ನಾಗಶ್ರೀ ಪ್ರಸಾದ್                                                     

                                                              


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top