ಪುತ್ತೂರು: ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ತಯಾರಿಸಿರುವ ಪರ್ವಂ ಕಿರುಚಿತ್ರದ ವೀಡಿಯೋ ಸಾಂಗ್ ಜೂನ್ 28ರಂದು ಪ್ರತುಕೃತಿ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ವಿಸಿ ಜರ್ನಲಿಸಂ ಅರ್ಪಿಸುವ ಪರ್ವಂ ಕಿರುಚಿತ್ರದ ನಿರ್ದೇಶನವನ್ನು ಅರುಣ್ ಕಿರಿಮಂಜೇಶ್ವರ ಮಾಡಿದ್ದರೆ, ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಕರುಣಾಕರ್ ಕೆ. ಎಸ್ ವಹಿಸಿದ್ದಾರೆ. ಸುರೇಶ್ ಗೌಡ ಛಾಯಾಗ್ರಹಣ, ಕೀರ್ತಿರಾಜ್ ಮೊಗೇರು ಸಂಗೀತ ಸಂಯೋಜನೆ, ಭರತ್ ಭವಾನಿ ಸಂಕಲನದಲ್ಲಿ ಚಿತ್ರ ಮೂಡಿ ಬಂದಿದೆ. ಬಿಡುಗಡೆಗೊಳ್ಳಲಿರುವ ಚಿತ್ರದ ಮೊದಲ ಹಾಡಿನ ಸಾಹಿತ್ಯವನ್ನು ತಾರಾ ಕರುಣ್, ಕಾರ್ತಿಕ್ ಅರುಣ್ ಕಿರಿಮಂಜೇಶ್ವರ ರಚಿಸಿದ್ದು, ವರುಣ್ ಹಿನ್ನೆಲೆ ಸಂಗೀತದಲ್ಲಿ ಹಾಡು ಮೂಡಿಬಂದಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ