`ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಹಿಂದುತ್ವನಿಷ್ಠರಿಂದ ಕಾಂಗ್ರೆಸ್ ಸರಕಾರದ ಆಘಾತಕಾರಿ ನಿರ್ಣಯಕ್ಕೆ ತೀವ್ರ ವಿರೋಧ
ಪಣಜಿ: ಇಲ್ಲಿಯ ಪೊಂಡಾದ ಶ್ರೀ ರಾಮನಾಥ ದೇವಸ್ಥಾನದ ಸಭಾಗೃಹದಲ್ಲಿ ನಡೆದ 'ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ`ದಲ್ಲಿ, ಇಂದು ಸಮಾಜದಲ್ಲಿ ಯಾವ ರೀತಿ ಹಿಂದುತ್ವದ ವಿರುದ್ಧ ನರೆಟಿವ್ ನಿರ್ಮಿಸಲಾಗುತ್ತಿದೆ, ಇದಕ್ಕಾಗಿ ಹಿಂದೂಗಳು ಜಾಗೃತರಾಗುವುದು ಅವಶ್ಯಕವಾಗಿದೆ, ಎಂಬುವುದರ ಬಗ್ಗೆ ಅತ್ಯಂತ ಗಂಭೀರತೆಯಿಂದ ಚರ್ಚಿಸಲಾಯಿತು.
ಇಂದು ನಾವು ಯುವ ಪೀಳಿಗೆಗೆ ಹಿಂದೂ ಧರ್ಮದ ಮಹಾನ್ ಯೋಧರ ಇತಿಹಾಸದ ಬಗ್ಗೆ ಕಲಿಸಲು ಪ್ರಯತ್ನಿಸಿದರೆ 'ಶಿಕ್ಷಣದ ಕೇಸರಿಕರಣ` ಎಂದು ಹೇಳಲಾಗುತ್ತದೆ. ಆದರೆ ದುರದೃಷ್ಟವಶಾತ್ ಕರ್ನಾಟಕದ ಕಾಂಗ್ರೆಸ್ ಸರಕಾರವು ಇತ್ತೀಚಿಗೆ ಆಘಾತಕಾರಿ ನಿರ್ಧಾರವನ್ನು ತೆಗೆದುಕೊಂಡಿದೆ. ಸ್ವತಂತ್ರವೀರ ಸಾವರ್ಕರ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೌರವಾನ್ವಿತ ಸಂಸ್ಥಾಪಕರಾದ ಡಾ. ಹೆಡ್ಗೇವಾರ್ ಮತ್ತು ಅವರ ಜೊತೆಗೆ ಹಿಂದೂ ಧರ್ಮವೀರ ಚಕ್ರವರ್ತಿ ಸೂಲಿಬೆಲೆಯವರ ಯಾವುದೇ ಅಂಶಗಳು ಪಠ್ಯಕ್ರಮದಲ್ಲಿದ್ದರೂ, ಅದನ್ನು ಪಠ್ಯಕ್ರಮದಿಂದ ತೆಗೆದುಹಾಕಲು ಕರ್ನಾಟಕದ ಕಾಂಗ್ರೆಸ್ ಸರ್ಕಾರ ನಿರ್ಣಯವನ್ನು ತೆಗೆದುಕೊಂಡಿದೆ. ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸದಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಈ ನಡೆಯನ್ನು ಖಂಡಿಸಲಾಯಿತು. ಉಪಸ್ಥಿತ ಹಿಂದೂ ಧರ್ಮಾಭಿಮಾನಿಗಳು ಜಯತು ಜಯತು ಹಿಂದೂ ರಾಷ್ಟ್ರಮ್ ಘೋಷಣೆಯೊಂದಿಗೆ ತಮ್ಮ ವಿರೋಧ ವ್ಯಕ್ತಪಡಿಸಿದರು. ಈ ಅಧಿವೇಶನದಲ್ಲಿ ನೇಪಾಳ ಮತ್ತು ಭಾರತ ಸೇರಿದಂತೆ 22 ರಾಜ್ಯಗಳಿಂದ 350ಕ್ಕೂ ಹೆಚ್ಚು ಸಂಘಟನೆಗಳ 725ಕ್ಕೂ ಹೆಚ್ಚು ಪ್ರತಿನಿಧಿಗಳು ಉಪಸ್ಥಿತರಿದ್ದರು.
ಇದರ ಜೊತೆಗೆ ಹಿಂದೂ ರಾಷ್ಟ್ರ ಸ್ಥಾಪನೆಯ ಬಗ್ಗೆ ಸಮಾಜದಲ್ಲಿ ಜಾಗೃತಿ ನಿರ್ಮಾಣ ಮಾಡಲು ಸಮಾನ ಅಂಶಗಳ ಕಾರ್ಯಕ್ರಮದಡಿ 'ಲವ್ ಜಿಹಾದ್’ ಮತ್ತು 'ಹಲಾಲ್ ಜಿಹಾದ್’ನ ಕುರಿತು ಜನಜಾಗೃತಿ ಸಭೆಗಳು ಹಾಗೂ ಆಂದೋಲನಗಳು’, 'ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’, 'ಹಿಂದೂ ರಾಷ್ಟ್ರ ಅಧಿವೇಶನ’, 'ದೇವಸ್ಥಾನಗಳಲ್ಲಿ ಪ್ರಬೋಧನಾ ಸಭೆಗಳು’, ’ರಾಜ್ಯ ಮಟ್ಟದ ದೇವಸ್ಥಾನ ಪರಿಷತ್ತಿನ ಆಯೋಜನೆ ಮಾಡುವುದು’, ಇತ್ಯಾದಿ ವಿವಿಧ ಚಟುವಟಿಕೆಗಳನ್ನು ವರ್ಷವಿಡೀ ನಡೆಸಲು ಅಧಿವೇಶನದಲ್ಲಿ ನಿರ್ಧರಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ