ಬೆಂಗಳೂರು: ಕರ್ನಾಟಕ ಅಂಚೆವೃತ್ತವು 'ಡೋರ್ ಸ್ಟೆಪ್ ಬುಕಿಂಗ್ ಆಫ್ ಪಾರ್ಸೆಲ್ಸ್ ಥ್ರೂ ಮೊಬೈಲ್ ವ್ಯಾನ್ಸ್' ಸೇವೆಯ ಮುಂದುವರಿದ ಭಾಗವಾಗಿ ಇಂದು (ಜೂ.26) ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಮಣಿಪಾಲ್ ಸೆಂಟರ್‌ನಲ್ಲಿ ಈ ಸೇವೆಯನ್ನು ಪ್ರಾರಂಭಿಸಿತು. ಈ ಮೊದಲು ಈ ಸೇವೆಯನ್ನು ಅಬ್ಬಿಗೆರೆ ಮತ್ತು ಪೀಣ್ಯ ಪ್ರದೇಶಗಳಲ್ಲಿ ಜೂ.6ರಿಂದ ಒದಗಿಸಲಾಗುತ್ತಿದೆ. ಸಾರ್ವಜನಿಕರು ಯಾವುದೇ ರೀತಿಯ ಹೆಚ್ಚಿನ ಶುಲ್ಕವನ್ನು ಪಾವತಿಸದೇ ಈ ಸೇವೆಯನ್ನು ಪಡೆಯಬಹುದಾಗಿದೆ.
ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ಹಾಗೂ ಮಣಿಪಾಲ ಕೇಂದ್ರ ಮಾಲೀಕರ ಸಂಘದ ಗೌರವ ಕಾರ್ಯದರ್ಶಿ ಗಾಯತ್ರಿ ನಾಯಕ್ ಇವರು ಹಸಿರು ಬಾವುಟ ತೋರಿಸುವ ಮೂಲಕ ಈ ಸೇವೆಗೆ ಚಾಲನೆ ನೀಡಿದರು. ಬೆಂಗಳೂರು ಮುಖ್ಯಾಲಯ ಕ್ಷೇತ್ರದ ಪೋಸ್ಟ್ ಮಾಸ್ಟರ್ ಜನರಲ್ ಎಲ್.ಕೆ. ಡ್ಯಾಷ್ ಹಾಗೂ ಕರ್ನಾಟಕ ಅಂಚೆ ವೃತ್ತದ ಡೈರೆಕ್ಟರ್ ಪೋಸ್ಟಲ್ ಸರ್ವೀಸಸ್ (HQ) ಶ್ರೀಮತಿ ಕೈಯ ಆರೋರಾ ರವರು ಉಪಸ್ಥಿತರಿದ್ದರು.
ಈ ವಾಹನವು ಪ್ರತಿದಿನ 14.30 ಗಂಟೆಗೆ ಮಣಿಪಾಲ್ ಸೆಂಟರ್‌ಗೆ ಬರಲಿದೆ ಮತ್ತು 15.30 ಗಂಟೆಗಳವರೆಗೆ ಅಲ್ಲಿಯೇ ಲಭ್ಯವಿರುತ್ತದೆ. ಸಾರ್ವಜನಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದು. ಬೆಂಗಳೂರು ಅಂಚೆ ಮಹಾ ಕಾರ್ಯಾಲಯದ ವ್ಯಾಪ್ತಿಯಲ್ಲಿ ಪಾರ್ಸಲ್ ಬುಕಿಂಗ್‌ಗಾಗಿ ಈ ವಾಹನವನ್ನು ಮೊಬೈಲ್ ಸಂಖ್ಯೆ 9480809797 ಮೂಲಕ ಸಂಪರ್ಕಿಸಬಹುದು.
ಬೇಡಿಕೆಯ ಆಧಾರದ ಮೇಲೆ ಈ ಸೇವೆಯನ್ನು ಬೆಂಗಳೂರಿನ ಇತರ ಸ್ಥಳಗಳಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಸೇವೆಯ ಉದ್ದೇಶಿತ ಸ್ಥಳಗಳು ಇಂತಿವೆ:
ಬೆಂಗಳೂರು ದಕ್ಷಿಣ ಭಾಗದಲ್ಲಿ ಬಿಕಾಸೀಪುರ ಕೈಗಾರಿಕಾ ಪ್ರದೇಶ
ಮಹಾದೇವಪುರ ಕೈಗಾರಿಕಾ ಪ್ರದೇಶ – ಹೂಡಿ
ಈ ಸೇವೆಯನ್ನು ಎಲ್ಲಾ ರೀತಿಯ ದೇಶೀಯ ಅಂಚೆ ರವಾನಿಸಲು ಬಳಸಬಹುದಾಗಿದೆ.
ಬೆಂಗಳೂರಿನ ಬೇರೆ ಯಾವುದೇ ಪ್ರದೇಶದಲ್ಲಿ ಈ ಮೇಲಿನ ಸೇವೆಗೆ ಬೇಡಿಕೆಯಿದ್ದಲ್ಲಿ, ಸೇವೆಯನ್ನು ಒದಗಿಸುವ ಕಾರ್ಯ ಸಾಧ್ಯತೆಯನ್ನು ಪರಿಶೀಲಿಸಲು ದಯವಿಟ್ಟು bd.karbg@indiapost.gov.in ಗೆ ಮಿಂಚಂಚೆಯನ್ನು ಕಳುಹಿಸುವಂತೆ ಕೋರಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ