ಆಳ್ವಾಸ್ ಕಾಲೇಜಿನ ಫ್ಯಾಷನ್ ಡಿಸೈನಿಂಗ್ ವಿಭಾಗವು ಹಮ್ಮಿಕೊಂಡ ‘ಅಭಿಕ್ಯ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಫ್ಯಾಷನ್ ಕ್ಷೇತ್ರವು ಇಂದು ಬೃಹದಾಕಾರವಾಗಿ ಬೆಳೆಯುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಿ ಎಂದರು.
ಉದ್ಯಮಿ ಉದಯ ಪೂಜಾರಿ ಮಾತನಾಡಿ, ಫ್ಯಾಷನ್ ಜಗತ್ತಿನಲ್ಲಿ ಮೂಲಜ್ಞಾನವು ಬಹಳ ಮುಖ್ಯ. ಇಲ್ಲಿ ಸೃಜನಶೀಲತೆಯು ನಮ್ಮನ್ನು ಎತ್ತರಕ್ಕೆ ಕೊಂಡೊಯುತ್ತದೆ. ಕೇವಲ ವಿನ್ಯಾಸ ಮಾತ್ರವಲ್ಲ, ಉದ್ಯಮವನ್ನೂ ಮಾಡಬಹುದು. ಆದರೆ, ಬದ್ಧತೆ ಹಾಗೂ ತಲ್ಲೀನರಾದಷ್ಟು ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ‘ ಫ್ಯಾಷನ್ ಎಂಬುದು ಇಂದು ಬೆಳೆಯುತ್ತಿರುವ ಪ್ರಪಂಚ. ಇಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಪ್ರಚಲಿತ ಬೆಳವಣಿಗೆ ಬಗ್ಗೆ ಜ್ಞಾನ ಅಗತ್ಯ ಎಂದರು.
ವಿಭಾಗದ ಮುಖ್ಯಸ್ಥೆಯಾದ ಸವಿತಾ ಕುಮಾರಿ, ಕಾರ್ಯಕ್ರಮ ಸಂಯೋಜಕಿ ಪದ್ಮಪ್ರಿಯ ಇದ್ದರು. ಬಳಿಕ ಫ್ಯಾಶನ್ ಶೋ ನಡೆಯಿತು.
‘ಅಭಿಕ್ಯ’ ಅಂಗವಾಗಿ ವಿವಿಧ ಸ್ಪರ್ಧೆಗಳ ವಿಜೇತರ ವಿವರ ಹೀಗಿವೆ.
ವೈಯಕ್ತಿಕ ಸಮಗ್ರ ಪ್ರಶಸ್ತಿ: ಶ್ರೀವಿಕಾ (ಪ್ರಥಮ), ರಮ್ಯಾ (ದ್ವಿತೀಯ), ಅತ್ಯುತ್ತಮ ಸಂಗ್ರಹ: ನಿಶಾ, ಅತ್ಯುತ್ತಮ ಔಟ್‍ಫಿಟ್: ಶ್ರೀವಿಕಾ, ಅತ್ಯುತ್ತಮ ನಡಿಗೆ ಶೈಲಿ: ಸ್ವಪ್ನಾ, ಅತ್ಯುತ್ತಮ ವಿನ್ಯಾಸ: ನಿಶಾ, ಅತ್ಯುತ್ತಮ ಪ್ರಾಯೋಗಿಕ ಉಡುಪು: ರಮ್ಯಾ, ಅತ್ಯುತ್ತಮ ಅನುಕ್ರಮ: ಸ್ವಪ್ನ, ಅತ್ಯುತ್ತಮ ಹೊಲಿಗೆ: ಶ್ರೀವಿಕಾ, ಅತ್ಯುತ್ತಮ ಸಂಗ್ರಹ (ಡಿಪ್ಲೊಮಾ): ದೀಕ್ಷಾ, ಅತ್ಯುತ್ತಮ ಪ್ರಾಯೋಗಿಕ ಉಡುಪು(ಡಿಪ್ಲೊಮಾ)
ಮದರಂಗಿ: ತೃತೀಯ ಬಿಕಾಂ ಅಲಿಫ್ಯಾ ಪ್ರಥಮ, ದ್ವಿತೀಯ ಬಿಬಿಎ ಅರ್ಶಿಯ ದ್ವಿತೀಯ, ರಂಗೋಲಿ: ದ್ವಿತೀಯ ಬಿಸಿಎ ಚೈತ್ರ ಪ್ರಥಮ, ದ್ವಿತೀಯ ಬಿಕಾಂ ಟ್ಯಾಕ್ಸ್ ಪ್ರೊಸೀಜರ್ ಸುಪ್ರಿತಾ ದ್ವಿತೀಯ, ಮುಖವರ್ಣಿಕೆ: ಶ್ರೀರಕ್ಷಾ ಹಾಗೂ ಚೈತ್ಯ ಶೆಟ್ಟಿ ಪ್ರಥಮ, ದೀಪಕ್ ದ್ವಿತೀಯ, ಚಿತ್ರಕಲೆ: ಸುಜನ್ ಡಿ ಶೆಟ್ಟಿ ಪ್ರಥಮ, ಫೋಟೋಗ್ರಪಿ: ತೃತೀಯ ಬಿಸಿಎ ದೀಪಕ್ ಪ್ರಥಮ, ತೃತೀಯ ಬಿಕಾಂ ಆತ್ಮಿಕ್ ದ್ವಿತೀಯ, ಪೋಸ್ಟರ್ ಮೇಕಿಂಗ್: ದ್ವಿತೀಯ ಬಿಕಾಂ ಟ್ಯಾಕ್ಸ್ ಪ್ರೊಸೀಜರ್ ಮೋನಿಕಾ ಮತ್ತು ಸ್ಟಾಫ್ನಿ ಪ್ರಥಮ, ತೃತೀಯ ಬಿಎಸ್ಸಿ ವಿನಿ ಮತ್ತು ಮೇಘಾ ದ್ವಿತೀಯ, ಬೆಸ್ಟ್ ಔಟ್ ಆಫ್ ವೇಸ್ಟ್: ಪ್ರತೀಕ್ಷಾ ಪ್ರಥಮ, ನೃತ್ಯ: ದ್ವಿತೀಯ ಬಿಕಾಂ ರೀಷ್ಮ ಮತ್ತು ತಂಡ ಪ್ರಥಮ, ತೃತೀಯ ಬಿಬಿಎ ಯಶ್ವಂತ್ ಮತ್ತು ತಂಡ ದ್ವಿತೀಯ, ಫ್ಯಾಷನ್ ಶೋ: ಅಂಕಿತ ಮತ್ತು ತಂಡ ಪ್ರಥಮ, ಶ್ರಿಯಾ ಮತ್ತು ತಂಡ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ