ಮಂಗಳೂರು: ತಂತ್ರಜ್ಞಾನ ಯುಗದಲ್ಲಿ ನಿರಂತರ ಕಲಿಕೆಯಿಲ್ಲದಿದ್ದರೆ ಉದ್ಯೋಗಭದ್ರತೆ ಎಂಬುದು ಕನಸಿನ ಮಾತು. ವಯಸ್ಸಿನ ಹಂಗಿಲ್ಲದೆ ಹೊಸ ಆವಿಷ್ಕಾರಗಳನ್ನು ಕರಗತಮಾಡಿಕೊಂಡರೆ ಮಾತ್ರ ಸ್ಪರ್ಧೆ ಎದುರಿಸಲು ಸಾಧ್ಯ, ಎಂದು ಕೊಯಮತ್ತೂರಿನ ಅಮೃತಾ ವಿಶ್ವವಿದ್ಯಾನಿಲಯದ ಸಂಶೋಧನಾರ್ಥಿ ಹರ್ಷರಾಜ್ ಗಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳವಾರ ಪತ್ರಿಕೋದ್ಯಮ ವಿಭಾಗದ ಮಾಧ್ಯಮ ವೇದಿಕೆ, ಐಕ್ಯೂಎಸಿ ಸಹಯೋಗದೊಂದಿಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ 'ಕೃತಕ ಬುದ್ಧಿಮತ್ತೆ- ಅವಕಾಶಗಳು ಮತ್ತು ಸವಾಲುಗಳು' ಎಂಬ ಕುರಿತು ಮಾತನಾಡಿದ ಅವರು, ನಿಪುಣ ವರದಿಗಾರನೊಬ್ಬ ಒಂದು ವರದಿಯನ್ನು ತಯಾರಿಸಲು 40 ನಿಮಿಷಗಳಷ್ಟು ಸಮಯ ತೆಗೆದುಕೊಂಡರೆ ಕೃತಕಬುದ್ಧಿ ಮತ್ತೆಯ ಸಹಾಯದಿಂದ ಕೇವಲ ಏಳುಸೆಕೆಂಡ್‌ಗಳಲ್ಲಿ ವರದಿ ತಯಾರಿಸಬಹುದು. ಆದರೆ ಶಾರ್ಟ್ ಕಟ್ ನ ಆಯುಷ್ಯವೂ ಶಾರ್ಟ್ ಎಂಬುದು ನೆನಪಿರಬೇಕು, ಎಂದರು.
ಕೃತಕಬುದ್ಧಿ ಮತ್ತೆಯಿಂದ ಬಹಳಷ್ಟು ಮಂದಿ ಉದ್ಯೋಗ ಕಳೆದುಕೊಂಡರೂ, ಪರ್ಯಾಯವಾಗಿ ಬಹಳಷ್ಟು ಉದ್ಯೋಗದ ಅವಕಾಶಗಳನ್ನು ಕೂಡ ಸೃಷ್ಟಿಸುವಲ್ಲಿ ಸಹಾಯಕವಾಗಿದೆ. ಮಾತೃಭಾಷೆಯನ್ನು ಬಲ್ಲವರಿಗೆ ಡಿಜಿಟಲ್ ಯುಗ ಒಂದು ಹೊಸ ವೇದಿಕೆಯನ್ನೇ ಸೃಷ್ಟಿಸಿದೆ. ಹಾಗಾಗಿ 'ಕೃತಕಬುದ್ಧಿ ಮತ್ತೆ ತಂತ್ರಜ್ಞಾನ ವಿಕೇಂದ್ರೀಕರಣಕ್ಕೆ ಅನುವು ಮಾಡಿಕೊಟ್ಟಿದೆ' ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ತಂತ್ರಜ್ಞಾನ ಎಂಬುದು ಈಗ ಕೆಲವರಿಗೆ ಸಂಬಂಧಿಸಿದ್ದಲ್ಲ. ಹೊಸತನ್ನು ಕಲಿಯುವುದು ಈಗ ಎಲ್ಲಾ ಕ್ಷೇತ್ರಗಳಲ್ಲಿ ಅನಿವಾರ್ಯ ಎಂದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಶಾನಿಕೆ ಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಡಾ. ಸೌಮ್ಯ ಹಾಗೂ ಗುರುಪ್ರಸಾದ್ ಟಿ. ಎನ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಿಸರ್ಗ ಕಾರ್ಯಕ್ರಮ ನಿರೂಪಿಸಿ ಕೃತಿ ಕಾವಂದಿಸಿದರು. ಶಿವಪ್ರಸಾದ್ ಬೋಳಂತೂರು ಅತಿಥಿಗಳನ್ನು ಸ್ವಾಗತಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ