ಮಧುವಾಹಿನಿ ಗ್ರಂಥಾಲಯ ವತಿಯಿಂದ ಅಧಿಕಾರಿಗಳಿಗೆ ಕ್ರಮಕೈಗೊಳ್ಳಲು ಒತ್ತಾಯ
ಬೋವಿಕ್ಕಾನ: ಮುಳಿಯಾರು ಗ್ರಾಮದ ಬಳ್ಳಮೂಲೆಯಲ್ಲಿ ಆನೆಗಳು ಕೃಷಿಕರ ಆಸ್ತಿಯನ್ನು ನಾಶ ಮಾಡುತ್ತಲೇ ಇವೆ. ನಿನ್ನೆ- ಸೋಮವಾರ ಸಂಜೆ ಬೇಪು ಶಾಲೆಯ ಬಳಿ ಇದ್ದ ಆನೆ ಬೆಳ್ಳಿಪ್ಪಾಡಿ ರಸ್ತೆಯ ಮೇಲ್ಭಾಗದ ಮೂಲಕ ಬಳ್ಳಮೂಲೆಗೆ ಆಗಮಿಸಿ ಬಿ. ಗೋಪಾಲಕೃಷ್ಣ ಭಟ್ ಎಂಬುವರಿಗೆ ಸೇರಿದ ಸುಮಾರು ಬಾಳೆ, ಕಾಳುಮೆಣಸು ಇತ್ಯಾದಿ ಬೆಳೆಗಳನ್ನು ನಾಶಪಡಿಸಿದೆ. ಆನೆ ಇನ್ನೂ ಅದೇ ಪರಿಸರದಲ್ಲಿ ನಿಂತಿದೆ ಎಂಬ ಮಾಹಿತಿ ಇದೆ. ಬೆಳ್ಳಿಪ್ಪಾಡಿ, ಬಳ್ಳಮೂಲೆ ಭಾಗದ ಜನವಸತಿ ಪ್ರದೇಶಗಳಿಗೆ ಯಾವುದೇ ಸಮಯದಲ್ಲಿ ಆನೆಗಳು ನುಗ್ಗುವಂತಿದೆ ಪರಿಸ್ಥಿತಿ.
ಈ ಆನೆಗಳನ್ನು ಸ್ಥಳದಿಂದ ತೆರವುಗೊಳಿಸಬೇಕೆಂದು ಮಧುವಾಹಿನಿ ಗ್ರಂಥಾಲಯದ ಕಾರ್ಯಕಾರಿ ಸಮಿತಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ