ಚೀತಾ ಯಜ್ಞೇಶ್‌ ಶೆಟ್ಟಿಗೆ ಪಿಎಚ್‌ಡಿ ಪದವಿ

Upayuktha
0


ಮಂಗಳೂರು: ಬಾಲಿವುಡ್‍ನ ಹೆಸರಾಂತ ಮಾರ್ಷಲ್‌ ಆರ್ಟ್ಸ್ ಗುರು ಯಜ್ಞೇಶ್ ಶೆಟ್ಟಿ ಅವರು ಇತ್ತೀಚೆಗೆ ಗ್ಲೋಬಲ್ ಮಾರ್ಷಲ್‌ ಆರ್ಟ್ಸ್ ಯೂನಿವರ್ಸಿಟಿ ಗ್ರಾಂಟ್ ಕಮಿಷನ್‍ನಿಂದ ಮಾರ್ಷಲ್ ಆರ್ಟ್ಸ್ ಪ್ಯೂರ್ ಸೈನ್ಸ್‌ನಲ್ಲಿ ಪಿಎಚ್‍ಡಿ ಪದವಿ ಪಡೆದಿದ್ದಾರೆ.


ಕೋಲ್ಕತ್ತಾದ ವಿಶ್ವವಿದ್ಯಾಲಯವು ಯಜ್ಞೇಶ್‍ಗೆ ಪ್ರಮಾಣಪತ್ರ ನೀಡಿ ಗೌರವಿಸಿದೆ. ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಯಜ್ಞೇಶ್‌ ಶೆಟ್ಟಿ ಅವರನ್ನು ಸನ್ಮಾನಿಸಿದರು. ಮಾರ್ಷಲ್‌ ಆರ್ಟ್ಸ್ ಮೂಲಕ ಯುವಕರಲ್ಲಿ ಸ್ಫೂರ್ತಿ ತುಂಬುತ್ತಿರುವ ಯಜ್ಞೇಶ್ ಶೆಟ್ಟಿಯವರ ಸಾಧನೆಗೆ ಬಾಲಿವುಡ್ ಸ್ಟಾರ್ ಸೋನು ಸೂದ್ ಕೂಡ ಅಭಿನಂದಿಸಿದ್ದಾರೆ. ಯಜ್ಞೇಶ್ ಶೆಟ್ಟಿ ಇದುವರೆಗೆ 150ಕ್ಕೂ ಹೆಚ್ಚು ಬಾಲಿವುಡ್ ತಾರೆಯರಿಗೆ ಮಾರ್ಷಲ್‌ ಆರ್ಟ್ಸ್ ತರಬೇತಿ ನೀಡಿದ್ದಾರೆ. ನಿರ್ಭಯಾ ಮಹಿಳಾ ಸಬಲೀಕರಣ ಮತ್ತು ತರಬೇತಿ ಕಾರ್ಯಕ್ರಮದ ಅಡಿಯಲ್ಲಿ ಇದುವರೆಗೆ ಸುಮಾರು 10 ಲಕ್ಷ ಮಹಿಳೆಯರಿಗೆ ಮಾರ್ಷಲ್‌ ಆರ್ಟ್ಸ್ ತರಬೇತಿ ನೀಡಿದ್ದಾರೆ.

Post a Comment

0 Comments
Post a Comment (0)
To Top