ಬೆಂಗಳೂರು: ನೃತ್ಯ ದಿಶಾ ಟ್ರಸ್ಟ್ ಬೆಂಗಳೂರಿನ ಒಂದು ಪ್ರತಿಷ್ಠಿತ ಸಂಸ್ಥೆ. ಈ ಸಂಸ್ಥೆಯ ರೂವಾರಿ 'ಕಲಾಭೂಷಿಣಿ' ಗುರು ಶ್ರೀಮತಿ ದರ್ಶಿನಿ ಮಂಜುನಾಥ್ ರವರ ಮಾರ್ಗದರ್ಶನದಲ್ಲಿ ಕು|| ಸಂಧ್ಯಾ ಮಣಿಕಂಡನ್ ರವರ "ಭರತನಾಟ್ಯ ರಂಗಪ್ರವೇಶ" ಕಾರ್ಯಕ್ರಮವನ್ನು ಜೂನ್ 9, ಶುಕ್ರವಾರ ಸಂಜೆ 5-00 ಗಂಟೆಗೆ ನಗರದ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.
ಕು|| ಸಂಧ್ಯಾ ಕಳೆದ 10 ವರ್ಷಗಳಿಂದ ನೃತ್ಯ ಅಭ್ಯಸಿಸುತ್ತಿದ್ದು, ಕರ್ಣಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಜೂನಿಯರ್, ಸೀನಿಯರ್ ಹಾಗೂ ಮೀರಜ್ ಯೂನಿವರ್ಸ್ ಯ- ಮಧ್ಯಮ ದ್ವಿತೀಯ ಪರೀಕ್ಷೆಗಳಲ್ಲಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಾಳೆ.
ನೃತ್ಯ ದಿಶಾ ಸಂಸ್ಥೆಯ ಅಡಿಯಲ್ಲಿ ಅನೇಕ ಕಾರ್ಯಕ್ರಮ ನೀಡಿರುವ ಸಂಧ್ಯಾ ಪ್ರಸ್ತುತ ಚೈತನ್ಯ ಕಾಲೇಜ್ ನಲ್ಲಿ 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಈ ಕಾರ್ಯಕ್ರಮದಲ್ಲಿ ಕಲಾಪ್ರೋತ್ಸಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಯುವ ಕಲಾವಿದೆಯನ್ನು ಆಶೀರ್ವದಿಸಬೇಕೆಂದು ಶ್ರೀಮತಿ ದರ್ಶಿನಿ ಮಂಜುನಾಥ್ ಅವರು ವಿನಂತಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ