ಸಾಹಿತ್ಯಕ್ಷೇತ್ರದಲ್ಲಿ ಎಸ್.ವಿ. ರಂಗಣ್ಣನವರ ಸೇವೆ ಸದಾ ಸ್ಮರಣೀಯ : ಡಾ. ಶಿವರಾಂ ಬರಾಳು

Upayuktha
0

 


ಹಾಸನ: ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಹಾಸನ ಜಿಲ್ಲೆಯ ಕೊಡುಗೆ ಅಪಾರ. ಸರ್ವಶ್ರೇಷ್ಠ ಸಾಹಿತಿಗಳ ಸಾಲಿನಲ್ಲಿ ಎಸ್.ವಿ.ರಂಗಣ್ಣನವರು ಸಾಹಿತ್ಯಕ್ಷೇತ್ರದಲ್ಲಿ ನಿರಂತರ ಸೇವೆಯನ್ನು ನೀಡಿದ್ದು, ಸ್ಥಳೀಯ, ರಾಜ್ಯ , ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿತ್ಯವೂ ನಿಲ್ಲುವ ಸಾಹಿತಿಗಳಾಗಿದ್ದಾರೆ ಎಂದು ಡಾ. ಶಿವರಾಂ ಬರಾಳುರವರು ತಿಳಿಸಿದರು. 


ನಗರದ ಬೂವನಹಳ್ಳಿಯ ಭುವನೇಶ್ವರಿ ಮದ್ಯವ್ಯಸನಿಗಳ ಸಮಗ್ರ ಪುನರ್ವಸತಿ ಕೇಂದ್ರದಲ್ಲಿ ಆಯೋಜನೆಗೊಂಡಿದ್ದ 306 ನೇಮನೆ ಮನೆಕವಿಗೋಷ್ಠಿಯಲ್ಲಿ ಎಸ್. ವಿರಂಗಣ್ಣ ಬದುಕು - ಬರಹ ಕುರಿತು ಉಪನ್ಯಾಸ ನೀಡುತ್ತಾ ಎಸ್. ವಿ. ರಂಗಣ್ಣನವರು ಸಾಹಿತಿಗಳಷ್ಟೇ ಅಲ್ಲದೇ ಖ್ಯಾತ ವಿಮರ್ಶಕರಾಗಿಯೂ ಸಾಹಿತ್ಯಕ್ಷೇತ್ರದಲ್ಲಿ ದುಡಿದಿದ್ದಾರೆ ಎಂದರು. ಅವರ ಜೀವನಗಾಥೆಯನ್ನು ಅಧ್ಯಯನ ಮಾಡುವ ಮೂಲಕ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಸಾವಿಗೆ ಹತ್ತೆಂಟು ದಾರಿ ಆದರೆ ಬದುಕುವುದು ಹೊಣೆಗಾರಿಕೆಯಾಗಿದೆ. ಸಾವಿಗೆ ಯಾರೂ ಅಂಜಬಾರದು ಆದರೆ ಬದುಕಿಗೆ ಅಂಜಿ ಬಾಳಬೇಕು ಎಂದರು. ಎಸ್. ವಿ. ರಂಗಣ್ಣನವರು ಪಂಪ, ರನ್ನ, ಪೊನ್ನ ,ರಾಘವಾಂಕ, ಕಾಳಿದಾಸರಂತಹ ಮಹಾನ್ ಕವಿಚೇತನಗಳ ಕೃತಿಗಳನ್ನು ವಿಮರ್ಶಿಸಿ ಅನೇಕ ವಿಮರ್ಶೆಯ ಲೇಖನಗಳನ್ನು ಬರೆಯುವ ಮೂಲಕ ಆಕೃತಿಗಳ ಒಳನೋಟಗಳನ್ನು ವಿವಿಧ ಆಯಾಮಗಳಲ್ಲಿ ವಿಭಿನ್ನ ರೀತಿಯಲ್ಲಿ ವಿಮರ್ಶಿಸಿರುವುದು ಕನ್ನಡಸಾಹಿತ್ಯವನ್ನು ಮೇಲ್ಪಂಕ್ತಿಗೆ ಕೊಂಡುಹೋಗಿರುವುದು ಗೊತ್ತಾಗುತ್ತದೆ ಎಂದು ತಿಳಿಸಿದರು. ಅವರ ಕೃತಿಗಳನ್ನು ಹೆಸರಿಸುತ್ತಾ ಕುಮಾರವ್ಯಾಸ ಶೈಲಿ ಭಾಗ-೧,೨,೩ , ಹೊನ್ನಶೂಲ, ಪಾಶ್ಚಾತ್ಯ ಗಂಭೀರ ನಾಟಕಗಳು, ನಾಟುನುಡಿ ರನ್ನಕವಿ ಪ್ರಶಸ್ತಿ, ರಂಗಬಿನ್ನಪ , ಕವಿಕಥಾಮೃತ, ಕೋಲ್ಕೋಲ್ಕೂಡಿಬರಲಿ, ಕುಮಾರವ್ಯಾಸವಾಣಿ, ವಿಡಂಬನೆ, ಕನ್ನಡಸಾಹಿತ್ಯದಲ್ಲಿ ಹಾಸ್ಯ. ಅವರ ಇಂಗ್ಲಿಷ್ ಕೃತಿಗಳು ಓಲ್ಡಟೇಲ್ಸ್ರಿಟೋಲ್ಡ, ಆನ್ದಿಸೆಲ್ಫ್ ಮುಂತಾದವುಗಳ ಕುರಿತು ಮಾಹಿತಿ ನೀಡಿದರು.


ಕಾರ್ಯಕ್ರಮದ ಪ್ರಾಯೋಜಕರಾದ ಅಂಜಲಿಯವರು ಅಧ್ಯಕ್ಷತೆ ವಹಿಸಿದ್ದು ಮನೆಮನೆ ಕವಿಗೋಷ್ಠಿಯಂತಹ ಕಾರ್ಯಕ್ರಮಗಳು ಮದ್ಯವ್ಯಸನಿಗಳ ಮನಸ್ಸುಗಳನ್ನು ಧನಾತ್ಮಕವಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇಂತಹ ಕಾರ್ಯಕ್ರಮಗಳು ಆಗಾಗ್ಗೆ ಆಯೋಜನೆಗೊಳ್ಳುತ್ತಿದ್ದರೆ ಸರ್ವರ ಬದುಕು ಸಂತಸಮಯವಾಗುತ್ತದೆ ಎನ್ನುತ್ತಾ ಹಾಸನದಲ್ಲಿ ಭುವನೇಶ್ವರಿ ಮದ್ಯವ್ಯಸನಿಗಳ ಸಮಗ್ರ ಪುನರ್ವಸತಿಕೇಂದ್ರ ಮದ್ಯವ್ಯಸನಿಗಳನ್ನು ತಮ್ಮ ದುಶ್ಚಟಗಳಿಂದ ದೂರಮಾಡುವಲ್ಲಿ ಮತ್ತು ಪುನರ್ವಸತಿ ಕಲ್ಪಿಸುವಲ್ಲಿ ಯಶಸ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. 


ನಂತರ ಭಾಗವಹಿಸಿದ ಕವಿಕವಯಿತ್ರಿಯರು ತಮ್ಮ ಸ್ವರಚಿತ ಕವನವಾಚಿಸಿದರು. ರೇಷ್ಮಾ ಶೆಟ್ಟಿಯವರ ಮೌಢ್ಯ, ಕೆ. ಎನ್. ಚಿದಾನಂದರವರ 'ಭಾರತ ದೇಶದ ಚರಿತೆ ಲಾವಣಿ' ,ಸುಂದರೇಶ್ಡಿ. ಉಡುವಾರೆ  'ನನ್ನಪ್ಪ' ಉಮೇಶ್ ಹೊಸಳ್ಳಿಯವರ 'ಅಪ್ಪ' ,ಎನ್.ಎಲ್. ಚನ್ನೇಗೌಡರ 'ಕುಡುಕನಬಾಳು' ಗೊರೂರು ಅನಂತರಾಜುರವರ 'ಬಾಲ್ಯದ ನೆನಪುಗಳು' ಕುಮಾರಸ್ವಾಮಿ ಉಡುವಾರೆ, ಸಮುದ್ರವಳ್ಳಿ ವಾಸು, ರಾಜಣ್ಣ ರಾಶಿಟಿ. ಶಂಕರಪ್ಪರವರು ಕವನಗಳನ್ನು ವಾಚಿಸಿದರು. 


ಮುಂದಿನ ತಿಂಗಳ 307 ನೇ ಮನೆಮನೆ ಕವಿಗೋಷ್ಠಿಯು ದಿನಾಂಕ 02 /07/2023 ಭಾನುವಾರದಂದು ಕಟ್ಟೆಮನೆ ನಾಗೇಂದ್ರರವರ ಪ್ರಾಯೋಜಕತ್ವದಲ್ಲಿ ಜಯಸೂರ್ಯ ಸಭಾಂಗಣ, ಅನುಗ್ರಹನಿಲಯ, ಕಟ್ಟೆಮನೆವಠಾರ, ಕಲ್ಪತರುರಸ್ತೆ, ತಣ್ಣೀರುಹಳ್ಳ, ಹಾಸನ. ಇಲ್ಲಿನಡೆಯಲಿದೆ. ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ :ಬದುಕು - ಬರಹ ಕುರಿತಂತೆ ಉಪನ್ಯಾಸವನ್ನು ಸಾಹಿತಿ ಎನ್.ಎಲ್. ಚನ್ನೇಗೌಡರು ನೀಡಲಿದ್ದಾರೆ ಎಂದು ಕವಿಗೋಷ್ಠಿಯ ಸಂಚಾಲಕರಾದ ಗೊರೂರು ಅನಂತರಾಜು ತಿಳಿಸಿದ್ದಾರೆ.  ಕು|| ಶಿಖ ರ್ಪ್ರಾರ್ಥಿಸಿದರು. ಗೊರೂರು ಯಾಕೂಬ್, ಜೆ. ಓ .ಮಹಾಂತಪ್ಪ, ರಾಘವೇಂದ್ರ ಸದಾಶಿವ ಉಪಸ್ಥಿತರಿದ್ದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top