ಎಚ್.ಎಸ್. ಪ್ರತಿಮಾ ಹಾಸನ್ ಅವರಿಗೆ ರೋಟರಿ ಮೈಸೂರ್ ಸ್ಟಾರ್ ಪ್ರಶಸ್ತಿ ಪ್ರದಾನ

Upayuktha
0

ಮೈಸೂರು: ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ಪ್ರವೃತ್ತಿಯಲ್ಲಿ ಲೇಕಿ, ಗಾಯಕಿ, ಸಮಾಜಸೇವಕಿಯಾಗಿ ಗುರುತಿಸಿಕೊಂಡಿರುವ ಶ್ರೀಮತಿ ಎಚ್‌.ಎಸ್‌. ಪ್ರತಿಮಾ ಹಾಸನ್ ಅವರನ್ನು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್ ಮೈಸೂರು, ಹಿಮಾಲಯ ಪ್ರತಿಷ್ಠಾನ ಮೈಸೂರು, ರೋಟರಿ ಕ್ಲಬ್ ಆಫ್ ಮೈಸೂರು ಸ್ಟಾರ್ಸ್, ಈ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ರಾಜ್ಯಮಟ್ಟದ ಪ್ರಥಮ ಮುಕ್ತಕ ಸಾಹಿತ್ಯೋತ್ಸವ 2023ರಲ್ಲಿ ಸಮ್ಮಾನಿಸಲಾಯಿತು. 


ಬಹುಮುಖ ಪ್ರತಿಭೆಯ ಪ್ರತಿಮಾ ಅವರು ಆಶು ಕವಿಯಿತ್ರಿ ಹಾಗೂ ವಾಗ್ಮಿಯಾಗಿದ್ದು, ವಿವಿಧ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯಮಟ್ಟದ ಪ್ರಥಮ ಮುಕ್ತಕ ಸಾಹಿತ್ಯೋತ್ಸವದಲ್ಲಿ ಕಾವ್ಯ ಕ್ಷೇತ್ರದ ಕೃಷಿಗಾಗಿ ಎಚ್.ಎಸ್. ಪ್ರತಿಮಾ ಹಾಸನ್ ಅವರನ್ನು ಸನ್ಮಾನಕ್ಕೆ ಆಯ್ಕೆ ಮಾಡಿದ್ದರು. ಇವರಿಗೆ ರೋಟರಿ ಕ್ಲಬ್ ಆಫ್ ಮೈಸೂರು ಸ್ಟಾರ್ಟ್ ನ ಅಧ್ಯಕ್ಷ ಸಂತೋಷ್ ಗೌಡರವರು "ರೋಟರಿ ಮೈಸೂರು ಸ್ಟಾರ್" ಎಂಬ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಅದೇ ದಿನ ಹಾಸನ ಜಿಲ್ಲೆಯ ಕರ್ನಾಟಕ ಮುಕ್ತಕ ಕವಿ ಪರಿಷತ್ತಿನಲ್ಲಿ ಹಾಸನದ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಒಟ್ಟಾರೆ ಇವರನ್ನು ಸಾಮಾಜಿಕ, ಸಾಂಸ್ಕೃತಿಕ, ಸಾಹಿತಿಕ, ಶೈಕ್ಷಣಿಕ, ಕಲಾ ಕ್ಷೇತ್ರಗಳನ್ನು ಸೇವೆ ಗಮನಿಸಿ ಬಹುಮುಖ ಪ್ರತಿಭೆಯಾದ ಇವರು ಮುಕ್ತಕ ಪರಿಷತ್ತಿನಲ್ಲಿ ಸಲ್ಲಿಸಿರುವ ಸೇವೆಯನ್ನು ಗಮನಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರಿಗೆ ಹಲವಾರು ರಾಜ್ಯ ಪ್ರಶಸ್ತಿ ಮತ್ತು ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.


ಕಾರ್ಯಕ್ರಮದಲ್ಲಿ ಕರ್ನಾಟಕ ಮುಕ್ತಕ ಪರಿಷತ್ತಿನ ಸಂಸ್ಥಾಪಕ ಮುತ್ತುಸ್ವಾಮಿ, ಮುಕ್ತಕ ಸಮ್ಮೇಳನದ ಅಧ್ಯಕ್ಷೆ ಕಮಲಾ, ಹಿಮಾಲಯ ಪ್ರತಿಷ್ಠಾನದ ಸಂಸ್ಥಾಪಕ ಅನಂತ ಏನ್.ರವರು ರೋಟರಿ ಕ್ಲಬ್ ಆಫ್ ಮೈಸೂರು ಸ್ಟಾರ್ಸ್ ಅಧ್ಯಕ್ಷ ಸಂತೋಷ್ ಗೌಡ, ಶಾಸಕ ಶ್ರೀವತ್ಸ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top