ಪರಿಸರ ಕುರಿತು ಸೂಕ್ಷ್ಮದೃಷ್ಟಿ ಅಗತ್ಯ : ಡಾ. ಬಿ. ಪಿ. ಸಂಪತ್ ಕುಮಾರ್

Upayuktha
0

ವಿದ್ಯಾಗಿರಿ (ಮೂಡುಬಿದಿರೆ): ‘ಪರಿಸರ ಸೌಂದರ್ಯದ ಕುರಿತು ಸೂಕ್ಷ್ಮದೃಷ್ಟಿ ಅಗತ್ಯ’ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಬಿ. ಪಿ. ಸಂಪತ್ ಕುಮಾರ್ ಹೇಳಿದರು.


ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಕನ್ನಡ ವಿಭಾಗ ಆಯೋಜಿಸಿದ ‘ಪರಿಸರ ಮತ್ತು ಸಾಹಿತ್ಯ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. 


‘ಪ್ರಕೃತಿ ಅತ್ಯಮೂಲ್ಯ ಸಂಪತ್ತು. ನಮ್ಮ ಒಳನೋಟದಿಂದ ಪ್ರಕೃತಿಯ ಸಾಕಷ್ಟು ವಿಚಾರಗಳನ್ನು ತಿಳಿಯಬಹುದು. ಆದರೆ, ನಾವು ಪ್ರಕೃತಿಯನ್ನು ಅಧ್ಯಯನ ಮಾಡದೇ ಕಲಿಕೆಯಿಂದ ವಂಚಿತರಾಗುತ್ತಿದ್ದೇವೆ’ ಎಂದರು. 


ಈಚಿನ ದಿನಗಳಲ್ಲಿ ನಾವೆಲ್ಲ ಧರ್ಮ ಗ್ರಂಥಗಳನ್ನು ಆಧರಿಸಿಕೊಂಡು ಜೀವನದ ಮೌಲ್ಯಗಳನ್ನು ಹುಡುಕಾಡುತ್ತಿದ್ದೇವೆ. ಆದರೆ, ಪ್ರಾಣಿ-ಪಕ್ಷಿಗಳು ಪರಿಸರವನ್ನು ಅವಲಂಬಿಸಿಕೊಂಡು ಸಹಜವಾಗಿ ಬದುಕುತ್ತಿವೆ. ಪರಿಸರವನ್ನು ಪ್ರೀತಿಸಿ, ಸೂಕ್ಷ್ಮತೆಯಿಂದ ಬದುಕು ರೂಪಿಸಿಕೊಳ್ಳಿ’ ಎಂದರು. 

 

ಆಳ್ವಾಸ್ ಕಾಲೇಜು ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ‘ಪರಿಸರದ ಜೊತೆಗಿನ ನಮ್ಮ ಒಡನಾಟದ ಮೇಲೆ ನಮ್ಮ ಭವಿಷ್ಯ ನಿರ್ಧರಿತವಾಗುತ್ತದೆ. 

ಮನುಷ್ಯ ಪ್ರಕೃತಿಯ ಭಾಗ ಎನ್ನುವುದನ್ನು ಮರೆತು ಪ್ರಕೃತಿಯ ಒಡೆಯನಂತೆ ವರ್ತಿಸುತ್ತಿದ್ದಾನೆ’ ಎಂದರು. 


ವಿಜ್ಞಾನ, ಸಾಹಿತ್ಯ, ವಾಣಿಜ್ಯ ಮತ್ತಿತರ ಜ್ಞಾನ ಶಾಖೆಯನ್ನು ನಾವು ಯಾವ ರೀತಿಯಾಗಿ ತೆಗೆದುಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಅಳಿವು-ಉಳಿವು ನಿಂತಿದೆ ಎಂದರು. 


ಉರಗ ತಜ್ಞ ಹಾಗೂ ಸಾಹಿತಿ ಗುರುರಾಜ್ ಸನಿಲ್, ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ. ಜ್ಯೋತಿ ರೈ, ಪ್ರಾಧ್ಯಾಪಕ ಕೃಷ್ಣರಾಜ ಕರಬ ಇದ್ದರು. 

ಕನ್ನಡ ವಿಭಾಗದ ಮುಖ್ಯಸ್ಥ ಡಾ ಯೋಗೀಶ ಕೈರೋಡಿ ಸ್ವಾಗತಿಸಿ, ಪ್ರಾಧ್ಯಾಪಕ ಹರೀಶ್ ಟಿ.ಜಿ. ವಂದಿಸಿದರು. ವಿದ್ಯಾರ್ಥಿನಿ ಸುಶ್ಮಿತಾ ನಿರೂಪಿಸಿದರು. 


ವಿಚಾರ ಸಂಕಿರಣ: 

ಬಳಿಕ ನಡೆದ ವಿಚಾರಸಂಕಿರಣದಲ್ಲಿ ಶಶಾಂಕ್ (ನೆಲ-ಜಲ ಸಂರಕ್ಷಣೆ-ಶ್ರೀ ಪಡ್ರೆ)

ಕಿರಣ್ ಆರ್. ಕುಮಾರ್ (ಕೆನ್ನಾಯಿಯ ಜಾಡಿನಲ್ಲಿ-ಕೃಪಾಕರ ಸೇನಾನಿ),

ಜೀವನ್ (ಹಾವು ಮತ್ತು ನಾವು-ಗುರುರಾಜ್ ಸನಿಲ್), ಗಗನ ಲೋಕೇಶ್- (ದೇರ್ಲರ-ಕೃಷಿಕ ಮನಸ್ಸಿನ ಅವಲೋಕನ), ವೈಷ್ಣವಿ (ಅಪ್ಪಿಕೋ ಚಳವಳಿ-ಸುಂದರ್ ಲಾಲ್ ಬಹುಗುಣ), ಶ್ರೀ ಲಕ್ಷ್ಮಿ (ಕಜೆ ಕೃಷಿ ಅಭಿಯಂತ-ವಸಂತ ಕಜೆ), 

ಶ್ರೀಯ ಜಿ.ಶೆಟ್ಟಿ (ಸುಸ್ಥಿರ ಕೃಷಿ ಪಾಠಗಳು-ಎಲ್.ನಾರಾಯಣ ರೆಡ್ಡಿ), 

ಪ್ರತೀಕ್ಷಾ (ಆನಂದ ತೀರ್ಥ ಪ್ಯಾಟಿಯವರ ಆಹಾ! ಇಸ್ರೇಲಿ ಕೃಷಿ), ದಿವ್ಯಾ ಪ್ರಭು (ದೇರ್ಲರ- ನಂದನವನ ಮತ್ತು ಚೌಟರ ತೋಟ), ವೀಕ್ಷಿತಾ ವಿ. (ಕುವೆಂಪು ಮತ್ತು ಪರಿಸರ ಪ್ರಜ್ಞೆ), ತೃಪ್ತಿ (ಕಾರಂತರ-ನಗರೀಕರಣ ಬೇಡ, ನೈಸರ್ಗಿಕತೆ ಬೇಕು), ಸುಶ್ಮಿತಾ ನಾಯ್ಕ್ (ಕೊಪೆನ್ ಹೇಗನ್ ಋತು ಸಂಹಾರ-ನಾಗೇಶ್ ಹೆಗಡೆ), ವೈಷ್ಣವಿ ಎಸ್ (ಕೆ.ಎಮ್ ಚಿಣ್ಣಪ್ಪರ ಕಾಡಿನೊಳಗೊಂದು ಜೀವ),

ಸುನಿಲ್.ಎಸ್  (ಪೆರಾಜೆ ಕಾರಂತರ-ನೆಲದ ನಾಡಿ) ವಿಷಯ ಮಂಡಿಸಿದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Advt Slider:
To Top