ವಿವಿ ಕಾಲೇಜಿನಲ್ಲಿ 'ಅರ್ಥ'ಅರ್ಥಶಾಸ್ತ್ರ ಉತ್ಸವ- 2023
ಮಂಗಳೂರು: ಭಾರತೀಯರಿಗೆ ಅರ್ಥ ಎಂದರೆ ಬದುಕಿನ ಮೌಲ್ಯಗಳು, ಸತ್ಯಗಳು. ದೇಶದ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರ ಕಂಡುಹುಡುಕುವ ಸಾಮರ್ಥ್ಯ ಅರ್ಥಶಾಸ್ತ್ರಕ್ಕಿರುವುದರಿಂದ ಅದಕ್ಕೆ ತನ್ನದೇ ಆದ ಮಹತ್ವವಿದೆ, ಎಂದು ವಿಶ್ವಕರ್ಮ ಸಹಕಾರಿಬ್ಯಾಂಕ್ ಲಿಮಿಟೆಡ್‌ನ ಅಧ್ಯಕ್ಷ ಡಾ. ಎಸ್ ಆರ್ ಹರೀಶ್ ಆಚಾರ್ಯ ಹೇಳಿದ್ದಾರೆ.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಅರ್ಥಶಾಸ್ತ್ರವಿಭಾಗವು ಯೋಜನಾ ವೇದಿಕೆ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ 'ಅರ್ಥ'ಅರ್ಥಶಾಸ್ತ್ರ ಉತ್ಸವ- 2023ನ್ನು ರವೀಂದ್ರ ಕಲಾಭವನದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಉತ್ಸವಗಳು ಸಾಮಾನ್ಯ ಅರ್ಥಶಾಸ್ತ್ರ ವಿದ್ಯಾರ್ಥಿಯನ್ನು ಅರ್ಥಶಾಸ್ತ್ರಜ್ಞನಾಗಿ ಬೆಳೆಸುವ ಕೆಲಸ ಮಾಡುತ್ತವೆ. “ವಿವಿ ಕಾಲೇಜನ್ನು ಒಂದು ಸಂಶೋಧನಾ ಕೇಂದ್ರವಾಗಿ ಬೆಳೆಸುವ, ಸ್ವಾಯತ್ತತೆ ಪಡೆಯುವ ಪ್ರಯತ್ನಗಳಾಗಲಿ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲೆ ಡಾ. ಅನಸೂಯ ರೈ, ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಪ್ರಯತ್ನವನ್ನು ಶ್ಲಾಘಿಸಿ, ಉತ್ಸವ ವಿದ್ಯಾರ್ಥಿಗಳ ಮನಸ್ಸಲ್ಲಿ ಹೊಸ ಯೋಚನೆಗಳು ಬರುವಂತೆ ಮಾಡಲಿ,ಎಂದು ಹಾರೈಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅರ್ಥಶಾಸ್ತ್ರವಿಭಾಗದ ಮುಖ್ಯಸ್ಥ ಡಾ. ಜಯವಂತನಾಯಕ್, ಸಂಪನ್ಮೂಲ ಹಂಚಿಕೆ, ಸದ್ಭಳಕೆ, ಸರ್ಕಾರದ ಯೋಜನೆಗಳು, ಆರ್ಥಿಕಪರಿಣಾಮಗಳನ್ನು ಅರಿಯಲು ಅರ್ಥಶಾಸ್ತ್ರದ ತಿಳುವಳಿಕೆ ಅಗತ್ಯ, ಎಂದರು.
ಸ್ನಾತಕೋತ್ತರ ಅರ್ಥಶಾಸ್ತ್ರವಿಭಾಗದ ಸಂಯೋಜಕ ಡಾ. ಬಿ ಎಂ ರಾಮಕೃಷ್ಣ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕಿ ಶಮಾ ಐಎನ್ಎಂ ವಿಭಾಗದ ಕಿರುಪರಿಚಯ ಮಾಡಿಕೊಟ್ಟರು. ಫಾತಿಮಾನಜ್ ಮನ್ನಿಶಾ ಕಾರ್ಯಕ್ರಮ ನಿರೂಪಿಸಿದರು. ಐಕ್ಯೂಎಸಿ ಸಂಯೋಜಕ ಡಾ. ಸಿದ್ಧರಾಜು ಎಂಎನ್, ಯೋಜನಾವೇದಿಕೆಯ ಉಪಾಧ್ಯಕ್ಷ ಡಾ. ಸುರೇಶ್, ಉಪನ್ಯಾಸಕಿ ಮಧುರಾ, ವಿದ್ಯಾರ್ಥಿ ಸಂಯೋಜಕರಾದ ಶೃತಿ, ಶಿವಾನಿ ಮೊದಲಾದವರು ಉಪಸ್ಥಿತರಿದ್ದರು.
ಫೆಸ್ಟ್‌ನಲ್ಲಿ 20 ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಪಿಪಿಟಿಪ್ರಸ್ತುತಿ, ರಸಪ್ರಶ್ನೆ, ಚರ್ಚೆ, ಪ್ರಬಂಧ, ಕೊಲಾಜ್ ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಹಳೆವಿದ್ಯಾರ್ಥಿ, ಸ್ವರ್ಣಲಕ್ಷ್ಮಿಜ್ಯುವೆಲ್ಲರ್‍ಸನ ರವೀಶ್ ಎಲ್.ವಿ ಮತ್ತು ಎಂಯುಇಎ ಮುಖ್ಯಸ್ಥ ಡಾ. ಶ್ರೀನಿವಾಸಯ್ಯ ಅತಿಥಿಗಳಾಗಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ