ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ ವಿಭಾಗವು 'ಫ್ರೇಮ್ವರ್ಕ್ ಫಾರ್ ಲೈಫ್-ಸ್ಟೈಲ್ ಮ್ಯಾನೇಜ್ಮೆಂಟ್ ಎಮಾಂಗ್ ಜೆಂಡರ್ಸ್ ಫಾರ್ ಇನ್ಸ್ಟಿಟ್ಯೂಶನಲ್ ಬಿಲ್ಡಿಂಗ್' ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ 5 ದಿನಗಳ ಹೈಬ್ರಿಡ್ ಮೋಡ್ ಎಫ್‌ಡಿಪಿ ಜೂನ್ ೬ ರಂದು ಮುಕ್ತಾಯಗೊಂಡಿತು. ಸಾಂಸ್ಥಿಕ ನೀತಿಗಳು, ಆಹಾರ, ಸಾಮಾಜಿಕ ಕಾನೂನು ಮತ್ತು ಆರೋಗ್ಯ ಸಂಬಂಧಿತ ಸವಾಲುಗಳು, ಎಲ್‌ಜಿಬಿಟಿ ಸೇರ್ಪಡೆ, ಒತ್ತಡ ಮತ್ತು ಋತುಚಕ್ರ, ಆರೋಗ್ಯ ಮತ್ತು ಯೋಗ ಭವಿಷ್ಯದ ಬಗ್ಗೆ ಎಫ್‌ಡಿಪಿಯಲ್ಲಿ ಚರ್ಚಿಸಲಾಯಿತು.
ಜೂನ್ 08 ರಂದು ಸಮಾರೋಪ ಸಮಾರಂಭದೊಂದಿಗೆ ಎಫ್‌ಡಿಪಿ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಕಾರ್ಯಕ್ರಮವನ್ನು ಇಇಇ ಸಹಾಯಕ ಪ್ರಾಧ್ಯಾಪಕಿ ಡಾ.ಅನಿತಾ ಮರೀನಾ ಕೊಲಾಕೊ ಮತ್ತು ಐಎಸ್ಇ ವಿಭಾಗದ ಪ್ರಾಧ್ಯಾಪಕಿ ಡಾ.ಕರುಣಾ ಪಂಡಿತ್ ಸಂಯೋಜಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಂಕರ್, ಇಇಇ ವಿಭಾಗದ ಮುಖ್ಯಸ್ಥ ಡಾ.ಸೂರ್ಯನಾರಾಯಣ ಕೆ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ