ಭಾರತದ ಪ್ರಜಾ ದೇಗುಲವೆಂದೇ ಕರೆಯಲ್ಪಡುವ ಇಂದಿನ ನವ ಸಂಸತ್ತ ಭವನವನ್ನು ಯಾರು ಉದ್ಘಾಟನೆ ಮಾಡ ಬೇಕಾಗಿತ್ತು ಅನ್ನುವ ಕುರಿತಾಗಿ ಈಗ ಚಚೆ೯ ಪ್ರಾರಂಭವಾಗಿದೆ. ಈಗಿನ ನಿಯೇೂಜಿತ ಕಾರ್ಯಕ್ರಮದ ಪ್ರಕಾರ ಸರ್ಕಾರದ ಮುಖ್ಯಸ್ಥರಾದ ಪ್ರಧಾನಿ ನರೇಂದ್ರ ಮೇೂದಿಯವರು ಉದ್ಘಾಟನೆ ಮಾಡುತ್ತಾರೆ ಅನ್ನುವ ಮಾಹಿತಿ ಇದೆ. ಇದು ಸರಿಯಲ್ಲ ದೇಶದ ಮುಖ್ಯಸ್ಥರಾದ ರಾಷ್ಟ್ರಪತಿಗಳೇ ಉದ್ಘಾಟನೆ ಮಾಡುವುದು ಉತ್ತಮ ನಡವಳಿಕೆ ಅನ್ನುವುದು ಇನ್ನೊಂದು ಅಭಿಪ್ರಾಯವೂ ಮೂಡಿ ಬಂದಿದೆ. ಈ ಎರಡು ಅಭಿಪ್ರಾಯಗಳನ್ನು ಇಟ್ಟು ಕೊಂಡು ಒಂದಿಷ್ಟು ಆರೇೂಗ್ಯ ಪೂರ್ಣವಾದ ಚಚೆ೯ ಮಾಡುವುದು ನಮ್ಮ ಉದ್ದೇಶ.
ನಮ್ಮ ಸಂಸತ್ತು ಭವನದ ಪರಿಕಲ್ಪನೆ ಅತೀ ಐತಿಹಾಸಿಕವಾದದು. ಭಾರತ ಸಂಸತ್ತು ಭವನ ಮೂಲತಃ "ಕೌನ್ಸಿಲ್ ಹೌಸ್"ಎಂದು ಕರೆಯಲ್ಪಡುತ್ತಿತ್ತು. 1921 ಫೆ.12ರಂದು ವಿಕ್ಟೋರಿಯಾ ರಾಣಿಯ ಮೂರನೇಯ ಮಗ ಪ್ರಿನ್ಸ್ ಅಥ೯ರ್ ಶಂಕು ಸ್ಥಾಪನೆ ನೆರವೇರಿಸಿದರು. 1927 ಜನವರಿ 18ರಂದು ಆಗಿನ ಭಾರತದ ಗವರ್ನರ್ ಜನರಲ್ ಲಾಡ್೯ ಐರ್ವಿನ್ ಉದ್ಘಾಟನೆಗೈದರು. ಈ ನಮ್ಮ ಸಂಸತ್ತ ಭವನದ ಇತಿಹಾಸದ ಹಿನ್ನೆಲೆಯಲ್ಲಿ ಇಂದಿನ ನವ ಸಂಸತ್ತ ಭವನವನ್ನು ಯಾರು ಉದ್ಘಾಟನೆ ಮಾಡಬೇಕಾಗಿತ್ತು ಅನ್ನುವುದನ್ನು ವಿವೇಚಿಸುವುದು ಹೆಚ್ಚು ಸೂಕ್ತ.
ಈ ಸಂಸತ್ತು ಭವನ ಕೇವಲ ಬರೇ ಇಟ್ಟಿಗೆ ಕಟ್ಟಿಗೆಗಳಿಂದ ಕಟ್ಟುವ ಸೌಧವಲ್ಲ.ಇದು ಇಡಿ ಭಾರತಿಯವರ ಭಾವನಾತ್ಮಕವಾದ ಸೌಧವೂ ಹೌದು.ಹಾಗಾಗಿ ಇದಕ್ಕೊಂದು ಉತ್ಕೃಷ್ಟವಾದ ಸ್ಥಾನವಿದೆ.ಇದು ಪಕ್ಷ ರಾಜಕೀಯ ಮೀರಿ ನಿಲ್ಲ ಬಲ್ಲ ಶಕ್ತಿ ಸೌಧ ;ಜ್ಞಾನ ಸೌಧ; ಪ್ರಜಾ ಸೌಧವುಾ ಹೌದು.ಹಾಗಾದರೆ ಇಂತಹ ಪವಿತ್ರವಾದ ಸೌಧವನ್ನು ಯಾರು ಉದ್ಘಾಟನೆ ಮಾಡ ಬೇಕೆನ್ನುವ ಜಿಜ್ಞಾಸೆ ಮೂಡುವುದು ಸಹಜ ತಾನೇ?.
ಸಂವಿಧಾನದ ಹಿನ್ನೆಲೆಯಲ್ಲಿ ನೇೂಡಿದಾಗ ಕೂಡಾ ಕಾಣುವ ಪ್ರಮುಖ ಅಂಶವೆಂದರೆ ಅನುಚ್ಛೇದ 79ರಲ್ಲಿ ಉಲ್ಲೇಖಿಸಿರುವಂತೆ "ಸಂಸತ್ತು ಅಂದರೆ ರಾಷ್ಟ್ರಪತಿ + ಲೇೂಕಸಭೆ ಮತ್ತು ರಾಜ್ಯ ಸಭೆಯ ಒಂದು ಸಮಷ್ಟಿ ಸಂಸ್ಥೆಯೇ ನಮ್ಮ ಸಂಸತ್ತು ಅನ್ನುವುದು ವ್ಯಾಖ್ಯಾನ. ಸಂಸತ್ತು ಅಂದಾಗ ನಾವು ಮೊದಲು ಗುರುತಿಸುವ ವ್ಯಕ್ತಿ ರಾಷ್ಟ್ರಪತಿ. ಸಂವಿಧಾನದ ಸೈದ್ಧಾಂತಿಕ ದೃಷ್ಟಿಯಿಂದ ಕೂಡಾ ರಾಷ್ಟ್ರಪತಿಗಳಿಗೆ ಮೊದಲ ಪೂಜೆ ಸಲ್ಲುತ್ತದೆ. ಪ್ರಧಾನಿಗಳನ್ನು ನೇಮಿಸಿ ಪ್ರತಿಜ್ಞಾ ವಿಧಿ ಬೇೂಧಿಸುವುದು ಕೂಡ ರಾಷ್ಟ್ರಪತಿಗಳು. ದೇಶದ ಮೊದಲ ಪ್ರಜೆ ಅನ್ನುವ ಗೌರವ ರಾಷ್ಟ್ರಪತಿಗಳಿಗೆ ಸಂದಿದೆ. ಈ ಎಲ್ಲಾ ಸಂವಿಧಾನದ ಗೌರವ ಸ್ಥಾನ ಮಾನ ಮಾತ್ರವಲ್ಲ ರಾಜಕೀಯ ಮೀರಿದ ಸ್ಥಾನ ಮಾನ ಪಡೆದಿರುವ ರಾಷ್ಟ್ರಪತಿಗಳು ಸಂಸತ್ತು ಭವನ ಉದ್ಘಾಟನೆ ಮಾಡುವುದು ಸಂಸದೀಯ ಪ್ರಜಾಪ್ರಭುತ್ವದ ಶ್ರೇಷ್ಠ ನಡವಳಿಕೆ ಅನ್ನುವುದು ನನ್ನ ಅಭಿಮತವೂ ಹೌದು.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ