ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಡಾ.ವೇಣುಗೋಪಾಲ ಪಿ.ಎಸ್ ಅವರ ಮಾರ್ಗದರ್ಶನದಲ್ಲಿ ಎಡ್ರಿಕ್ ಆಸ್ಕರ್ ಡಿಸಿಲ್ವಾ, ಓಂ ರೋಹಿತ್ ಕನ್ಸಾಗರ ಮತ್ತು ಪ್ರಹಲ್ಯಾ ಮಥಿಯಾಸ್ ಅವರು ಮಾಡಿರುವ 'ಫೇಸ್ ಟ್ರ್ಯಾಕಿಂಗ್ & ಮ್ಯಾನಿಪ್ಯುಲೇಶನ್ ಮಾಡೆಲ್' ಎಂಬ ಶೀರ್ಷಿಕೆಯ ಯೋಜನೆಗೆ ನಿಟ್ಟೆ ಎಕ್ಸ್-ಪ್ರೋ 2023 ರ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿ ದೊರೆತಿದೆ.
ಈ ಯೋಜನೆಯು ಪೈಥಾನ್ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾಗಿದೆ. ಇದು ಮಾನವ ಮುಖವನ್ನು ಟ್ರ್ಯಾಕ್ ಮಾಡುತ್ತದೆ ಹಾಗೂ ಜಿಎಎನ್ ಬಳಸಿ ಮಾನವ ಮುಖವನ್ನು ಗುರುತಿಸುತ್ತದೆ. ಈ ಯೋಜನೆಯ ಸಾಧನೆಗೆ ವಿಭಾಗದ ಪ್ರಾಧ್ಯಾಪಕ ಹಾಗೂ ಬೋಧಕೇತರ ವರ್ಗ ಅಭಿನಂದಿಸಿರುವರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ