ಉಡುಪಿ : ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ರಾಜ್ಯ ಮಟ್ಟದಲ್ಲಿ ವಿಶೇಷ ಸಾಧನೆಗೈಯುತ್ತಿರುವ ಜಿಲ್ಲೆ.ಈ ಬಾರಿಯ ಮತದಾನದಲ್ಲೂ ನಮ್ಮ ಸಾಕ್ಷರತೆಯ ನೈಜತೆಯ ಸಾಮಥ್ಯ೯ವನ್ನು ಮತದಾನದ ಮೂಲಕ ದಾಖಲಿಸುವುದರ ಮೂಲಕ ಉಡುಪಿ ಜಿಲ್ಲೆಯನ್ನು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ರಾಜಕೀಯ ವಿಶ್ಲೇಷಕ ಅಂಕಣಕಾರ ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯಿಸಿದರು.ಮಣಿಪುರ ರೇೂಟರಿ ಸಂಸ್ಥೆ ಆಯೇೂಜಿಸಿದ ಮತದಾನದ ಅರಿವು ಮಾಹಿತಿ ಕಾರ್ಯಕ್ರಮದಲ್ಲಿ ಮತದಾನದ ಮಹತ್ವದ ಕುರಿತಾಗಿ ಉಪನ್ಯಾಸ ನೀಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇೂಟರಿ ಅಧ್ಯಕ್ಷ ರೇೂ.ಜೇೂಸೆಫ್ ಕುಂದರ್ ವಹಿಸಿದ್ದರು.ಮಣಿಪುರ ಗ್ರಾಮ ಪಂಚಾಯಿತ್ ಪಿ.ಡಿ.ಓ.ಮೇೂಹನ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಗ್ರಾಮ ಪಂಚಾಯಿತಿ ಸಿಬ್ಬಂದಿ ನಿತೀನ್ ಮತದಾನದ ಕುರಿತಾಗಿ ಪ್ರಮಾಣ ವಚನ ಬೇೂಧಿಸಿದರು.ರೇೂಟರಿ ಕಾರ್ಯದರ್ಶಿ ಮಹಮದ್ ಷರೀಫ್ ವಂದಿಸಿರು.ಮಣಿಪುರ ವಾರದ ಸಂತೆ ಮಾರುಕಟ್ಟೆ ಪರಿಸರದಲ್ಲಿ ಕಾರ್ಯಕ್ರಮ ನಡೆಯಿತು.ಸಾವ೯ಜನಿಕರು ಪ್ರಜಾ ಶಿಕ್ಷಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ