ಜೀವನದಲ್ಲಿ ಸಂಬಂಧಗಳು ವಿಶೇಷವಾದ ಪಾತ್ರವಹಿಸುತ್ತದೆ.ಅದು ನಿಜ ಏಕೆಂದರೆ ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬ ಆದ್ದರಿಂದ ಏನು ಮನೆ ತುಂಬಾ ಮಕ್ಕಳು ಇದ್ದರು.ಇಂದಿನ ಕಾಲದಲ್ಲಿ ಕುಟುಂಬಗಳು ಒಡೆದು ಅವಿಭಕ್ತ ಕುಟುಂಬಗಳಾಗಿ ಬದಲಾದ ಅದರ ಪರಿಣಾಮ ಏನು ಗೊತ್ತಿಲ್ಲ ಒಂದು ಜೋಡಿಗೆ ಒಂದೇ ಮಗುವಿದೆ. ನನ್ನ ಪರಿಸ್ಥಿತಿ ಕೂಡ ಇದೆ,ನಾನು ಯಾವಾಗಲೂ ಒಂಟಿ ತಂದೆ ತಾಯಿಗೆ ಒಬ್ಬಳೇ ಮಗಳು. ನನ್ನ ಕೆಲವೊಂದು ಸ್ನೇಹಿತರು ಹೇಳುತ್ತಾರೆ, ಒಬ್ಬರ ಮಕ್ಕಳಿದ್ದರೆ ಎಲ್ಲಾ ತಂದೆ ತಾಯಿ ಎಲ್ಲ ಪ್ರೀತಿಯನ್ನು ಒಬ್ಬರಿಗೆ ಧಾರೆ ಎಳೆಯುತ್ತಾರೆ ಎಂದು ಅದು ಸರಿಯಾಗಿದ ಮಾತು ಹೌದು ಆದರೆ ಅಣ್ಣ -ತಮ್ಮ,ಅಕ್ಕ -ತಂಗಿ ಎಂಬ ಭಾಂಧವ್ಯವನ್ನು ಅರಿತುಕೊಳ್ಳಲು ಸಾಧ್ಯವಾಗುವುದಿಲ್ಲ.ನನ್ನ ಸ್ನೇಹಿತರು ಹೇಳುವ ಕೆಲವೊಂದು ವಿಚಾರಗಳು ನನ್ನ ತಮ್ಮ, ತಂಗಿ ಹೀಗೆ ಮಾಡಿದರು, ನಾವು ಸದಾ ಜಗಳ ಆಡುತ್ತಾ ಇರುತ್ತೇವೆ ಎಂದು ಹೇಳಿದಾಗ ಆ ಭಾಗ್ಯ ನನಗೆ ಸಿಗದೇ ಹೋಯಿತೆ ಎಂದು ಮನ ಮರಗುತ್ತದೆ.
ಈಗಿನ ಕಾಲದಲ್ಲಿ ದಂಪತಿಗೆ ಒಂದೇ ಮಗು,ಆ ಮಗುವಿನ ಭಾವನೆಯನ್ನು ಹಂಚಿಕೊಳ್ಳಲು ಯಾರು ಇರುವುದಿಲ್ಲ. ಸದಾ ಒಂಟಿತನದಿಂದ, ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಯಾರು ಇಲ್ಲದ ಕಾರಣದಿಂದಾಗಿ ಮಾನಸಿಕ ಖಿನ್ನತೆಗೆ ಬಲಿಯಾಗುವುದನ್ನು ನಾವು ಈ ಜಗತ್ತಿನಲ್ಲಿ ನೋಡುತ್ತೇವೆ.
-ದೇವಿಶ್ರೀ ಶಂಕರಪುರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ