ಸುರತ್ಕಲ್: ನಿರಂತರ ಪ್ರಯತ್ನ ಹಾಗೂ ಅಚಲ ಗುರಿಯಿಂದ ರೋಟರಿ ಸಂಸ್ಥೆಯು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪೋಲಿಯೋ ಮುಕ್ತ ಸಮಾಜವನ್ನು ರೂಪಿಸಲು ಸಾಧ್ಯವಾಗಿದೆ. ಪೋಲಿಯೋ ಮರುಕಳಿಸದಂತೆ ನಿರಂತರ ಪ್ರಯತ್ನಗಳು ಅಗತ್ಯವಿದ್ದು ಅರಿವಿನ ಕಾರ್ಯ ನಡೆಯುತ್ತಿರುವುದು ಸ್ವಾಗತಾರ್ಹ ಎಂದು ರೋಟರಿ ಜಿಲ್ಲಾ 3181 ರ ಗವರ್ನರ್ ರೊ. ಪ್ರಕಾಶ್ ಕಾರಂತ್ ನುಡಿದರು. ಅವರು ಸುರತ್ಕಲ್ ರೋಟರಿ ಕ್ಲಬ್ ಆಶ್ರಯದಲ್ಲಿ ಕರ್ನಾಟಕ ಸೇವಾವೃಂದ ಸಭಾಭವನದಲ್ಲಿ ಆಯೋಜಿಸಿದ್ದ ಪಲ್ಸ್ ಪೋಲಿಯೋ ಅರಿವಿನ ಹಾಡಿನ ಅಧಿಕೃತ ಬಿಡುಗಡೆ ಸಮಾರಂಭ ಹಾಗೂ ಸ್ವಚ್ಛತಾ ಯೋಧರು – ತೆರೆಮರೆಯ ನಾಯಕರು– ಆಂಟೋನಿ ವೇಸ್ಟ್ ಸಂಸ್ಥೆಯ ಸ್ವಚ್ಛತಾ ಕಾರ್ಮಿಕರಿಗೆ ಗೌರವಾರ್ಪಣೆ ಹಾಗೂ ಆಶಾ ಕಾರ್ಯಕರ್ತೆಯರ ಸಮ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸ್ವಚ್ಛತೆಯೇ ದೇವರು ಎಂಬ ಪರಿಕಲ್ಪನೆಯಲ್ಲಿ ನಗರದ ಸ್ವಚ್ಛತೆಯನ್ನು ಕಾಪಾಡಿ ಸ್ವಾಸ್ಥ್ಯ ಸಮಾಜವನ್ನು ರೂಪಿಸುವ ಶ್ರೇಷ್ಠತರ ಕಾರ್ಯಮಾಡುವ ಸ್ವಚ್ಛಾತಾ ಯೋಧರನ್ನು ಗೌರವಿಸುವ ಮೂಲಕ ರೋಟರಿ ಕ್ಲಬ್ ಮೇಲ್ಪಂಕ್ತಿಯನ್ನು ಹಾಕಿದೆ.
ನಿರಂತರವಾಗಿ ನಾಗರಿಕರಿಗೆ ಆರೋಗ್ಯ ಸೇವೆಯನ್ನು ನೀಡುವ ಅಶಾ ಕಾರ್ಯಕರ್ತರ ಶ್ರಮವನ್ನು ಗುರುತಿಸ ಬೇಕಾಗಿದೆ ಎಂದು ಅವರು ನುಡಿದರು.
ರೋಟರಿ ವಲಯ 2 ರ ಸಹಾಯಕ ಗವರ್ನರ್ ರೊ.ಬಾಲಕೃಷ್ಣ ಶೆಟ್ಟಿ, ಮಹಾನಗರ ಪಾಲಿಕೆ ಸದಸ್ಯರಾದ ವೇದಾವತಿ ಮತ್ತು ಸರಿತಾ.ಎಸ್ ಶುಭ ಹಾರೈಸಿದರು.
ರೋಟರಿ ಜಿಲ್ಲಾ ಪಲ್ಸ್ ಪೋಲಿಯೋ ಅಧ್ಯಕ್ಷ ಡಾ. ಅರವಿಂದ ಭಟ್ ಫಲ್ಸ್ ಪೋಲಿಯೋ ಜಿಲ್ಲಾ ಯೋಜನೆಯ ಮಾಹಿತಿ ನೀಡಿ, ಆಶಾ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಿದರು.
ಪಬ್ಲಿಕ್ ಇಮೇಜ್ ಜಿಲ್ಲಾ ಉಪಾಧ್ಯಕ್ಷ ರೊ. ಡಾ.ರಾಜಮೋಹನ ರಾವ್ ಅವರು ಮಾತನಾಡಿ ಸ್ವಚ್ಛತಾ ಕಾರ್ಮಿಕ ನಿರಂತರ ಶ್ರಮದಿಂದ ಸ್ವಚ್ಛ ನಗರ ಯೋಜನೆ ಸಾಕಾರಗೊಳ್ಳುತ್ತಿದೆಂದರು.
ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷೆ ರೋ.ಯಶೋಮತಿ ಮಾತನಾಡಿ ಸಂಕಷ್ಟಗಳ ನಡುವೆಯೂ ದಿಟ್ಟತನದಿಂದ ಕಾರ್ಯ ನಿರ್ವಹಿಸುವ ಸ್ವಚ್ಛತಾ ಸೇನಾನಿಗಳು ಹಾಗೂ ಆಶಾ ಕಾರ್ಯಕರ್ತೆಯರು ಕಾಯಕ ಯೋಗಿಗಳಾಗಿದ್ದಾರೆ ಎಂದರು.
ನಲುವತ್ತನಾಲ್ಕು ಸ್ವಚ್ಛತಾ ಸೇನಾನಿಗಳು ಹಾಗೂ ಹನ್ನೆರಡು ಆಶಾ ಕಾರ್ಯಕರ್ತೆಯರನ್ನು ಸಮ್ಮಾನಿಸಲಾಯಿತು. ಸುರತ್ಕಲ್ ರೋಟರಿ ಕ್ಲಬ್‍ನ ಪದಾಧಿಕಾರಿಗಳಾದ ಚಂದ್ರಕಾಂತ ಮರಾಠೆ, ರವಿಲೋಚನ ಆಚಾರ್, ಶ್ರೀಧರ್.ಟಿ.ಎನ್ ಮತ್ತು ಶಿವಾನಂದ ಮತ್ತಿತರರು ಉಪಸ್ಥಿತರಿದ್ದರು.
ಸುರತ್ಕಲ್ ರೋಟರಿ ಕ್ಲಬ್ ಕಾರ್ಯದರ್ಶಿ ಯೋಗೀಶ್ ಕುಳಾಯಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ