ದೇಶದ ಆದರ್ಶವೇ ಉದಾತ್ತ ಸೇವೆ ಮತ್ತು ಸಮರ್ಪಣೆ: ಮುರಳಿಕೃಷ್ಣ ಕೆ.ಎನ್

Upayuktha
0


           ವಿವೇಕಾನಂದ ಕಾಲೇಜಿನ ಎನ್‍ಎಸ್‍ಎಸ್ ಶಿಬಿರ ಉದ್ಘಾಟನೆ


ಪುತ್ತೂರು:
ಸೇವೆ ಎನ್ನುವ ಪರಿಕಲ್ಪನೆ ಅತ್ಯಂತ ಅದ್ಭುತವಾದುದು. ದೇಶದ ಆದರ್ಶವೇ ಸೇವೆ ಮತ್ತು ಸಮರ್ಪಣೆ. ಪರಸ್ಪರ ಸಹಕಾರ, ಸೌಹಾರ್ಧತೆಯೇದೇಶದ ಏಳಿಗೆಗೆ ಸಹಕಾರಿ ಎಂದು ಪುತ್ತೂರಿನ ವಿವೇಕಾನಂದ ಮಹಾ ವಿದ್ಯಾಲಯ (ಸ್ವಾಯತ್ತ) ಕಾಲೇಜುಇದರ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಹೇಳಿದರು. 


ಇವರು ಮಂಗಳೂರು ವಿಶ್ವವಿದ್ಯಾನಿಲಯ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ರಾಷ್ಟ್ರೀಯ ಸೇವಾ ಯೋಜನೆ, ಐಕ್ಯೂಎಸಿ ಮತ್ತು ಕೈಲಾಸೇಶ್ವರ ದೇವಾಲಯ ಕೇಪು ಇದರ ಆಶ್ರಯದಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವ ಜನತೆ ಎಂಬ ಧ್ಯೇಯದೊಂದಿಗೆ ಈ ಸಾಲಿನ ವಾರ್ಷಿಕ ಎನ್‍ಎಸ್‍ಎಸ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಲಾಗಿ ಮಾತನಾಡಿದ ಕೇಪು ಶಿವ ಕ್ಷೇತ್ರದ ಮುಖ್ಯಸ್ಥ ರವೀಶ್‍ ಕೆ.ಎನ್ ಮಾತಾನಾಡಿ ಮಾನವ ಕೇವಲ ನಿಮಿತ್ತ ಮಾತ್ರ. ಉಳಿದದ್ದೆಲ್ಲವೂ ಭಗವಂತನ ಇಚ್ಛೆ. ರಾಷ್ಟ್ರೀಯ ಸೇವಾ ಯೋಜನೆಯು ಹತ್ತಾರು ಜನರಿಗೆ ಬದುಕನ್ನು ಕಟ್ಟಿಕೊಟ್ಟಿದೆ. ಸ್ವಯಂ ಸೇವಕರು ಸಮಯ ಪಾಲನೆ, ಹಾಗೂ ಜೀವನದ ಮಹತ್ವವನ್ನು ತಿಳಿಸಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.


ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ ರಾಷ್ಟ್ರೀಯ ಸೇವಾ ಶಿಬಿರ ಶಿಬಿರಾರ್ಥಿಗಳಿಗೆ ಬದುಕಿನ ಮೌಲ್ಯವನ್ನು ತಿಳಿಸಿಕೊಡುತ್ತದೆ. ಪರಸ್ಪರ ಒಡನಾಟ, ಸೇವಾ ಮನೋಭಾವ ಬಾಂಧವ್ಯವನ್ನು ವೃದ್ದಿಸಲು ಸಹಕಾರಿಯಾಗುತ್ತದೆ ಹಾಗಾಗಿ ಇಂತಹ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಮುಕ್ತ ಮನಸ್ಸಿನಿಂದ ತೊಡಗಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


ವೇದಿಕೆಯಲ್ಲಿ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ಕಾಲೇಜಿನ ವಿಶೇಷಾಧಿಕಾರಿ ಡಾ.ಶ್ರೀಧರ ನಾಯಕ್, ರಾಷ್ಟ್ರೀಯ ಯೋಜನಾಧಿಕಾರಿ ಡಾ.ಅರುಣ್ ಪ್ರಕಾಶ್, ವಿಯಾಕೆ.ಎನ್, ಉಪಸ್ಥಿತರಿದ್ದರು. 


ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಸಕ ಡಾ. ವಿಷ್ಣು ಕುಮಾರ್ ವಂದಿಸಿ, ಯೋಜನಾಧಿಕಾರಿ ವಿದ್ಯಾ ಕೆ.ಎನ್ ನಿರೂಪಿಸಿದರು.

 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top